ಆಗಸ್ಟ್ 15ಕ್ಕೂ ಮುನ್ನ ದೇಶದ ಎಲ್ಲ ಸ್ಮಾರಕಗಳೂ ಕೇಸರಿ,ಬಿಳಿ,ಹಸಿರು ಬಣ್ಣ ಲೈಟಿಂಗ್ ನಿಂದ ಜಗಮಗಿಸುತ್ತಿವೆ. ಕೆಲವು ಸುಂದರ ಫೋಟೋಗಳು ಇಲ್ಲಿವೆ ನೋಡಿ..
ಇಡೀ ದೇಶವು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವನ್ನ ಹಬ್ಬವಾಗಿ ಆಚರಿಸಿಸಲು ಸಿದ್ಧವಾಗಿದೆ. ಆಗಸ್ಟ್ 15ಕ್ಕೂ ಮುನ್ನ ದೇಶದ ಎಲ್ಲ ಸ್ಮಾರಕಗಳೂ ಕೇಸರಿ,ಬಿಳಿ,ಹಸಿರು ಬಣ್ಣ ಲೈಟಿಂಗ್ ನಿಂದ ಜಗಮಗಿಸುತ್ತಿವೆ. ಕೆಲವು ಸುಂದರ ಫೋಟೋಗಳು ಇಲ್ಲಿವೆ ನೋಡಿ..
ದೆಹಲಿಯ ಭವ್ಯ ಸ್ಮಾರಕಗಳಲ್ಲಿ ಒಂದಾದ ಸಫ್ದರ್‌ಜಂಗ್‌ನ ಸಮಾಧಿಯು 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಮೊದಲು ದೇಶಭಕ್ತಿಯ ಬಣ್ಣದ ಲೈಟಿಂಗ್ ನಿಂದ ಶೃಂಗಾರಗೊಳಿಸಲಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಡಿಯಲ್ಲಿ, ಕೇಂದ್ರ ಸರ್ಕಾರವು ದೇಶದ ಪ್ರತಿ ಮನೆಯಲ್ಲೂ ತ್ರಿವರ್ಣ ಅಭಿಯಾನವನ್ನು ನಡೆಸುತ್ತಿದೆ, ಅದರ ಅಡಿಯಲ್ಲಿ ಇಂಡಿಯಾ ಗೇಟ್ ಅನ್ನು ಸಹ ತ್ರಿವರ್ಣ ಧ್ವಜದ ಬಣ್ಣದ ಲೈಟಿಂಗ್ ನಿಂದ ಜಗಮಗಿಸುತ್ತಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ನಾಳೆ 75 ವರ್ಷಗಳಾಗುತ್ತಿದೆ. ಈ ನೆನಪಿಗಾಗಿ ರಾಷ್ಟ್ರಪತಿ ಭವನವನ್ನು ರಾಷ್ಟ್ರಧ್ವಜದ ಬಣ್ಣದ ಲೈಟಿಂಗ್ ನಿಂದ ಅಲಂಕಾರ ಮಾಡಲಾಗಿದೆ.
ದೆಹಲಿಯ ಕುತುಬ್ ಮಿನಾರ್ ಅನ್ನು ತ್ರಿವರ್ಣದ ಬಣ್ಣಗಳ ಲೈಟಿಂಗ್ ನಿಂದ ಶೃಂಗಾರ ಮಾಡಲಾಗಿದೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಕಾಶವಾಣಿ ಭವನವು ತ್ರಿವರ್ಣ ಧ್ವಜದ ಬಣ್ಣದ ಲೈಟಿಂಗ್ ನಿಂದ ಅಲಂಕಾರ ಮಾಡಲಾಗಿದೆ.
ದೇಶದ ಎಲ್ಲ ಚಲನವಲನಗಳಿಗೆ ಸಾಕ್ಷಿ ಎನ್ನಲಾದ ಜಂತರ್ ಮಂತರ್ ಕೂಡ ತ್ರಿವರ್ಣ ಧ್ವಜದ ಬಣ್ಣ ಲೈಟಿಂಗ್ ಮೂಲಕ ಜಗಮಗಿಸುತ್ತಿದೆ.