ಇಡೀ ದೇಶವೇ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. 2022ರ ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳಲಿದ್ದು, ಇಂತಹ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸಂಭ್ರಮದ ವಾತಾವರಣವಿದ್ದು, ಪ್ರತಿಯೊಬ್ಬರೂ ತಮ್ಮದೇ ಶೈಲಿಯಲ್ಲಿ ಆಚರಿಸುತ್ತಿದ್ದಾರೆ.
ಬಾರ್ಡರ್: 1971ರ ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಕುರಿತಾದ ‘ಬಾರ್ಡರ್” ಚಿತ್ರದಲ್ಲಿ ಸೇನೆಯ ಸಾಹಸಕ್ಕೆ ವಿಶೇಷ ರೀತಿಯಲ್ಲಿ ಸೆಲ್ಯೂಟ್ ಮಾಡಲಾಗಿದೆ. ಜೆ.ಪಿ.ದತ್ತಾ ಈ ಸಿನಿಮಾದ ಮೂಲಕ ದೇಶಪ್ರೇಮದ ಅಲೆಯನ್ನು ಎಬ್ಬಿಸಿದ್ದರು. ಇಂದಿಗೂ ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್, ಅಕ್ಷಯ್ ಖನ್ನಾ, ಪೂಜಾ ಭಟ್ ಸೇರಿದಂತೆ ಹಲವು ದೊಡ್ಡ ನಟರಿಂದ ಕಂಗೊಳಿಸುತ್ತಿರುವ ಈ ಸಿನಿಮಾವನ್ನು ನೋಡುವಾಗ ಜನ ಒಳಗೊಳಗೇ ನಡುಗುತ್ತಾರೆ.
ಶೇರ್ ಷಾ: ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಈ ಚಿತ್ರವು ಬಿಡುಗಡೆಯಾಗಿ ಒಂದು ವರ್ಷವನ್ನು ಪೂರೈಸಿದೆ. ಚಿತ್ರ ಸೂಪರ್ ಹಿಟ್ ಎಂದು ಸಾಬೀತಾಯಿತು. ಕಾರ್ಗಿಲ್ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನವನ್ನು ಈ ಚಿತ್ರ ಬಿಂಬಿಸುತ್ತದೆ.
ಉರಿ-ಸರ್ಜಿಕಲ್ ಸ್ಟ್ರೈಕ್: 2016 ರಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕೆನ್ನು ಸದೆಬಡಿದು ಭಾರತೀಯ ಸೇನೆ ಸೇಡು ತೀರಿಸಿಕೊಂಡಿತು. ಉರಿ ಎಂಬುದು ದೇಶಭಕ್ತಿಯ ಚಿತ್ರ ಅಂತಾ ಅದಾಗಲೇ ಸಾಬೀತಾಗಿತ್ತು. ಚಿತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ಮೋಹಿತ್ ರೈನಾ ಅವರ ನಟನೆ ಎಲ್ಲರನ್ನೂ ಆಕರ್ಷಿಸಿತು.
LOC ಕಾರ್ಗಿಲ್: ವಿಶ್ವದ ಅತಿ ಉದ್ದದ ಚಲನಚಿತ್ರಗಳಲ್ಲಿ ಒಂದಾದ 'LOC: ಕಾರ್ಗಿಲ್'. ಇದು ಒಟ್ಟು 4 ಗಂಟೆ 15 ನಿಮಿಷಗಳ ಕಥೆಯಾಗಿದ್ದು, ಇದರಲ್ಲಿ ಕಾರ್ಗಿಲ್ ಯುದ್ಧದ ಕಥೆಯನ್ನು ಚಿತ್ರಿಸಲಾಗಿದೆ. ಅಜಯ್ ದೇವಗನ್, ಸೈಫ್ ಅಲಿಖಾನ್, ಅಭಿಷೇಕ್ ಬಚ್ಚನ್, ನಾಗಾರ್ಜುನ, ಸಂಜಯ್ ಕಪೂರ್ ಸೇರಿದಂತೆ ಒಟ್ಟು 40 ನಟರನ್ನು ಸೇರಿಸಿ ಚಿತ್ರ ನಿರ್ಮಿಸಲಾಗಿದೆ. ಹುತಾತ್ಮ ಸೈನಿಕರ ಆತ್ಮಕ್ಕೆ ನಮನ ಸಲ್ಲಿಸುವ ಸೂಪರ್ಹಿಟ್ ಚಿತ್ರಗಳಲ್ಲಿ ಇದೂ ಒಂದು.
ಲಗಾನ್: ಅಮೀರ್ ಖಾನ್, ಗ್ರೇಸಿ ಸಿಂಗ್, ರಘುವೀರ್ ಯಾದವ್ ಪ್ರಮುಖ ಪಾತ್ರಗಳಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬ್ರಿಟಿಷ್ ನಟರಾದ ರಾಚೆಲ್ ಶೆಲ್ಲಿ ಮತ್ತು ಪಾಲ್ ಬ್ಲ್ಯಾಕ್ಥಾರ್ನ್ ಕೂಡ ಕಾಣಿಸಿಕೊಂಡಿದ್ದರು. ಎಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಇದು ಅಮೀರ್ ಖಾನ್ ಪ್ರೊಡಕ್ಷನ್ಸ್ನ ಮೊದಲ ಸಿನಿಮಾವಾಗಿದೆ. ದೇಶಭಕ್ತಿಯ ಕುರಿತಾದ ಈ ಚಿತ್ರ ಸೂಪರ್ಹಿಟ್ ಚಿತ್ರಗಳ ಪಟ್ಟಿಯಲ್ಲಿ ಸೇರಿದೆ.