iPhone 14 ಕ್ಕೆ ಸಂಬಂಧಿಸಿದಂತೆ ಒಂದು ಗುಡ್ ನ್ಯೂಸ್, iPhone 13 ಕ್ಕಿಂತ ಬೆಲೆ ಕಡಿಮೆ ಇರಲಿದೆಯೇ?

iPhone 14 Launch Updates: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಲ್ಕು ಹೊಸ ಐಫೋನ್ ಮಾದರಿಗಳು ಬಿಡುಗಡೆಯಾಗಲಿವೆ. ಆದರೆ, ಈ ಬಾರಿ ಈ ಫೋನ್ ಗಳು ಭಾರತದಲ್ಲಿ ಸ್ಥಳೀಯ ಮಟ್ಟದಲ್ಲಿ ಉತ್ಪಾದನೆಗೊಳ್ಳಲಿವೆ ಎನ್ನಲಾಗಿದೆ.  

Written by - Nitin Tabib | Last Updated : Aug 7, 2022, 08:55 PM IST
  • ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಲ್ಕು ಹೊಸ ಐಫೋನ್ ಮಾದರಿಗಳು ಬಿಡುಗಡೆಯಾಗಲಿವೆ.
  • ಆದರೆ, ಈ ಬಾರಿ ಈ ಫೋನ್ ಗಳು ಭಾರತದಲ್ಲಿ ಸ್ಥಳೀಯ ಮಟ್ಟದಲ್ಲಿ ಉತ್ಪಾದನೆಗೊಳ್ಳಲಿವೆ ಎನ್ನಲಾಗಿದೆ.
iPhone 14 ಕ್ಕೆ ಸಂಬಂಧಿಸಿದಂತೆ ಒಂದು ಗುಡ್ ನ್ಯೂಸ್,  iPhone 13 ಕ್ಕಿಂತ ಬೆಲೆ ಕಡಿಮೆ ಇರಲಿದೆಯೇ? title=
iPhone Launch Update

iPhone 14 ಬಿಡುಗಡೆ ನಿಗದಿತ ಸಮಯಕ್ಕೆ ನಡೆಯಲಿದೆ, ಇತ್ತೀಚಿನ ವರದಿಗಳು ಮಾತ್ರ ಅದನ್ನೇ ಸೂಚಿಸುತ್ತಿವೆ. ಈ ವರ್ಷವೂ, ನಾಲ್ಕು ಹೊಸ ಐಫೋನ್ ಮಾದರಿಗಳು ಬಿಡುಗಡೆಯಾಗಲಿವೆ, ಆದರೆ ಬಿಡುಗಡೆಯ ಸಮಯದಲ್ಲಿ ಇವೆಲ್ಲವೂ ಭಾರತದಲ್ಲಿ ಸ್ಥಳೀಯ ಮಟ್ಟದಲ್ಲಿ ಉತ್ಪಾದನೆಗೊಳ್ಳಲಿವೆ ಎನ್ನಲಾಗಿದೆ. ಆಪಲ್ ಮತ್ತು ಭಾರತ ಎರಡರ ಪಾಲಿಗೂ ಕೂಡ ಇದೆ ಮೊದಲ ಅವಕಾಶವಾಗಿರಲಿದೆ.

ಆಪಲ್ ಕೆಲವು ಐಫೋನ್ ಮಾದರಿಗಳನ್ನು ದೀರ್ಘಕಾಲದವರೆಗೆ ಸ್ಥಳೀಯವಾಗಿ ತಯಾರಿಸಲಿದೆ, ಆದರೆ ಚೀನಾ ಮತ್ತು ಭಾರತದಲ್ಲಿ ಏಕಕಾಲದಲ್ಲಿ ಐಫೋನ್‌ಗಳನ್ನು ಅಸೆಂಬಲ್ ಮಾಡುವುದು ಇದೇ ಮೊದಲು ಎನ್ನಲಾಗಿದೆ. ವೆನಿಲ್ಲಾ ಮಾದರಿಯನ್ನು ಐಫೋನ್ 14 ಎಂದು ಕರೆಯುವುದಲ್ಲದೆ, ಭಾರತವು ಮೊದಲ ಬಾರಿಗೆ ಟಾಪ್ ಎಂಡ್ ಮಾದರಿಯನ್ನು ಸ್ಥಳೀಯವಾಗಿ ತಯಾರಿಸಲಿದೆ ಎಂದು ವಿಶ್ಲೇಷಕ ಮಿಂಗ್-ಚಿ ಕುವೊ ವರದಿ ಮಾಡಿದ್ದಾರೆ.

ಪ್ರಸ್ತುತ, Apple ಭಾರತದಲ್ಲಿ iPhone 11, iPhone 12, iPhone 13 ಮತ್ತು iPhone SE ಅನ್ನು ಸ್ಥಳೀಯವಾಗಿ ಉತ್ಪಾದಿಸುತ್ತಿದೆ. ಇವುಗಳನ್ನು ಭಾರತದಲ್ಲಿ ಫಾಕ್ಸ್‌ಕಾನ್ ಮತ್ತು ವಿಸ್ಟ್ರಾನ್ ತಯಾರಿಸುತ್ತಿವೆ. Kuo  ಪ್ರಕಾರ, ಇದೀಗ ಪ್ರೊ ಮಾಡೆಲ್ ಸೇರಿದಂತೆ ಐಫೋನ್ 14 ರ ಸಂಪೂರ್ಣ ಸರಣಿಯನ್ನು ಭಾರತದಲ್ಲಿ ಉತ್ಪಾದಿಸಲಾಗುವುದು ಎನ್ನಲಾಗಿದೆ. iPhone 14 ಮಾದರಿಗಳು iPhone 14, iPhone 14 Max, iPhone 14 Pro ಮತ್ತು iPhone 14 Pro Max ಅನ್ನು ಒಳಗೊಂಡಿರಲಿದೆ.

ಐಫೋನ್ 14 ನ ಬೆಲೆ ಎಷ್ಟು?
ಇದರರ್ಥ ಐಫೋನ್ 14 ಸರಣಿಯ ಬೆಲೆಯು ಐಫೋನ್ 13 ರ ಲಾಂಚ್ ಬೆಲೆಗಿಂತ ಕಡಿಮೆಯಾಗಿರಲಿದೆಯೇ? ಪ್ರಸ್ತುತ ಅದು ಸಂಭವಿಸುವುದು ಸಾಧ್ಯವಿಲ್ಲ ಎಂದು ಮೂಲಗಳು ಹೇಳುತ್ತಿವೆ

ವರದಿಗಳ ಪ್ರಕಾರ ಮೊದಲನೆಯದಾಗಿ,  iPhone 14ರ ಬೆಲೆಯು iPhone 13 ರ ಲಾಂಚ್ ಬೆಲೆಯಂತೆಯೇ ಇರುತ್ತದೆ. ಇದರರ್ಥ, ಮುಂಬರುವ iPhone 14 ನ ಬೆಲೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ $799 ರಿಂದ ಪ್ರಾರಂಭವಾಗುತ್ತದೆ, ಅಂದರೆ, ಭಾರತದಲ್ಲಿ ಅದರ ಬೆಲೆ ಸರಿಸುಮಾರು 63,200 ರೂ. ಎಂದರ್ಥ. ಆದರೆ, ಮೂಲತಃ, ಭಾರತದಲ್ಲಿ, iPhone 13 ಅನ್ನು ರೂ 79,900 ಬೆಲೆಗೆ ಬಿಡುಗಡೆಗೊಳಿಸಲಾಗಿತ್ತು ಮತ್ತು iPhone 14 ಕೂಡ ಅದೇ ಬೆಲೆಗೆ ಸಿಗುವ ನಿರೀಕ್ಷೆ ಇದೆ.

ಎರಡನೆಯದಾಗಿ, ಆಪಲ್ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುತ್ತಿರುವುದು ಇದೇ ಮೊದಲಲ್ಲ. ಇದರ ಹೊರತಾಗಿಯೂ, ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ತನ್ನ ಮಾದರಿಗಳ ಬೆಲೆಗಳನ್ನು ಎಂದಿಗೂ ಕಡಿಮೆ ಮಾಡಿಲ್ಲ. ಆದ್ದರಿಂದ, ಮುಂಬರುವ iPhone 14 ಗಾಗಿಯೂ ಅದು ಅನ್ವಯಿಸಲಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಐಫೋನ್‌ಗಳ ಬೆಲೆಯು ಯುನೈಟೆಡ್ ಸ್ಟೇಟ್ಸ್‌ಗಿಂತ ಹೆಚ್ಚಾಗಿದೆ ಮತ್ತು ಅದಕ್ಕೆ ಆಮದು ಮತ್ತು ಕಸ್ಟಮ್ಸ್ ಸುಂಕಗಳು ಒಂದು ಪ್ರಮುಖ ಕಾರಣಗಳಾಗಿವೆ. ಐಫೋನ್ 14 ಸರಣಿಯಲ್ಲೂ ಕೂಡ ಇದೇ ರೀತಿ ಸಂಭವಿಸುವ ಸಾಧ್ಯತೆ ಇದೆ.

ಇದನ್ನೂ ಓದಿ-ಇಸ್ರೋದ SSLV 'Azadi ಉಪಗ್ರಹ' ಉಡಾವಣೆ ಯಶಸ್ವಿ: ಆದರೆ ಎದುರಾಗಿದೆ ಸಣ್ಣ ಸಮಸ್ಯೆ!

Apple ನ ಪೂರೈಕೆದಾರ Foxconn ಈ ವರ್ಷ iPhone 14, iPhone 14 Max, iPhone 14 Pro ಮತ್ತು iPhone 14 Pro Max ಗಾಗಿ ಎಲ್ಲಾ ನಾಲ್ಕು ಐಫೋನ್ ಮಾದರಿಗಳನ್ನು ತಯಾರಿಸುತ್ತಿದೆ ಎಂದು ಹೇಳಲಾಗುತ್ತದೆ. ಐಫೋನ್ 14 ಸರಣಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಕಂಪನಿಯು ಇದುವರೆಗೆ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ-BSNL Bumper Offer: ಏರ್ಟೆಲ್-ಜಿಯೋ ಬೆವರಿಳಿಸಿದ ಬಿಎಸ್ಎನ್ಎಲ್ ನಿಂದ ಗ್ರಾಹಕರಿಗೆ ಅದ್ಭುದ ಕೊಡುಗೆ

ಐಫೋನ್ 14 ಸರಣಿಯು ಸೆಪ್ಟೆಂಬರ್ ತಿಂಗಳಲ್ಲಿ ಅಧಿಕೃತ ಬಿದುಗದೆಯಗಳಿವೆ ಎಂದು ವರದಿಗಳು ಸೂಚಿಸುತ್ತವೆ. ಸೆಪ್ಟೆಂಬರ್ 13 ರಂದು ಸ್ಮಾರ್ಟ್ಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ. Apple iPhone 14 ಲಾಂಚ್ ವಿವರಗಳ ಅಧಿಕೃತ ಮಾಹಿತಿಗಾಗಿ ಇನ್ನೂ ಸ್ವಲ್ಪ ಹೊತ್ತು ಕಾಯಬೇಕಾಗಲಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News