ಬೆಂಗಳೂರು: ಕೊಡಗಿನಲ್ಲಿ ಪ್ರವಾಹದಿಂದ ಉಂಟಾದ ಹಾನಿ ಬಗ್ಗೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಲ್ಲಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರ ಮೇಲೆ ಅಧಿಕಾರ ಚಲಾಯಿಸಿ ದರ್ಪದಿಂದ ವರ್ತಿಸಿದರು ಎಂದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲೇ ಕೇಂದ್ರ ರಕ್ಷಣಾ ಸಚಿವಾಲಯ ಆ ಘಟನೆಗೆ ಸ್ಪಷ್ಟನೆ ನೀಡಿದೆ.
ಕೊಡಗು ಭೇಟಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗರಂ ವಿಚಾರ; ವ್ಯಾಪಕ ಟೀಕೆ
ಈ ಸಂಬಂಧ ರಕ್ಷಣಾ ಇಲಾಖೆ ಟ್ವೀಟ್ ಮಾಡಿದ್ದು, "ಕಾರ್ಯಕ್ರಮದಲ್ಲಾದ ಕೆಲವು ಬದಲಾವಣೆಗಳಿಂದಾಗಿ "ನಾನು ಯಾರ ಮಾತು ಕೇಳಬೇಕು?" ಎಂದು ಪ್ರಶ್ನಿಸಿದೆ. ಆದರೂ, ಪೂರ್ವ ನಿಯೋಜನೆಯಂತೆಯೇ ನಿಗದಿಯಾದ ಕಾರ್ಯಕ್ರಮದ ಪ್ರಕಾರವೇ ಸಭೆ ನಡೆಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ರಕ್ಷಣಾ ಮಂತ್ರಿಗಳ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆ ಕೀಳು ಅಭಿರುಚಿಯಿಂದ ಕೂಡಿದ್ದು. ಅವರ ಈ ನಡವಳಿಕೆ ಪ್ರತಿಕ್ರಿಯೆಗೂ ಯೋಗ್ಯವಲ್ಲ. ಇದು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಘನತೆಗೆ ಚ್ಯುತಿಯುಂಟು ಮಾಡುವಂತಹದ್ದಾಗಿದೆ ಹಾಗೂ ಭಾರತದ ರಾಜಕೀಯ ವ್ಯವಸ್ಥೆ ಬಗ್ಗೆ ಅವರಿಗೆ ಯಾವುದೇ ಗೌರವ ಮತ್ತು ತಿಳಿವಳಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ" ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
In response to the gross misinformation that has been circulating in the news for the past 24 hrs, the below statement has been issued.@nsitharaman @PIB_India @PIBBengaluruhttps://t.co/rtScnQFOFq pic.twitter.com/xfrrmL9uLK
— Raksha Mantri (@DefenceMinIndia) August 25, 2018
ಮುಂದುವರೆದು, "ಕೊಡಗಿನಲ್ಲಿ ನಡೆದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ 'ಪರಿವಾರ' ಎಂಬ ಪದ ಬಳಸಿದ್ದನ್ನು ತಪ್ಪಾಗಿ ಮಾಧ್ಯಮಗಳು ವ್ಯಾಖ್ಯಾನಿಸಿವೆ. ರಕ್ಷಣಾ ಇಲಾಖೆಯ ನಾಲ್ಕು ವಿಭಾಗಳಲ್ಲಿ ನಿವೃತ್ತ ಸೈನಿಕರ ಕಲ್ಯಾಣವೂ ಒಂದಾಗಿದ್ದು, ರಕ್ಷಣಾ ಇಲಾಖೆ ಪರಿವಾರದಲ್ಲಿ ನಿವೃತ್ತ ಸೈನಿಕರೂ ಸೇರಿರುತ್ತಾರೆ. ಆ ಅರ್ಥದಲ್ಲಿ ಪರಿವಾರ ಎಂಬ ಪದವನ್ನು ಬಳಕೆ ಮಾಡಲಾಗಿದೆಯೇ ಹೊರತು ಬೇರೆಲಾ ಅಭಿಪ್ರಾಯಗಳು ಅಪಾರ್ಥದಿಂದ ಕೂಡಿದ್ದು, ಖಂಡನೀಯ" ಎಂದು ಹೇಳಿದ್ದಾರೆ.
ಕೊಡಗಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ, ಪೂರ್ವಭಾವಿ ಕಾರ್ಯಕ್ರಮದಂತೆ ಅಧಿಕಾರಿಗಳ ಸಭೆಯನ್ನು ನಡೆಸುವಾಗ ರಕ್ಷಣಾ ಸಚಿವರ ಮಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಹೇಶ್ ಅವರು ಅಡ್ಡಿ ಉಂಟು ಮಾಡಿದ್ದರು. ಆದಾಗ್ಯೂ ಕೂಡ ಅಧಿಕಾರಿಗಳ ಸಭೆ ನಡೆಸಲು ಸಚಿವರು ಉತ್ಸುಕರಾಗಿದ್ದರು. ಈ ವೇಳೆ ಉಂಟಾದ ಮಾತುಗಳ ವಿನಿಮಯದಿಂದ ನೊಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋಪಗೊಂಡು ತಮ್ಮ ಪೂರ್ವಭಾವಿ ಕಾರ್ಯಕ್ರಮದಂತೆ ನಿವೃತ್ತ ಸೇನಾ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಸಭಾಂಗಣಕ್ಕೆ ತೆರಳಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.