Fire in Jabalpur Hospital: ಮಧ್ಯಪ್ರದೇಶದ ಜಬಲ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹಲವು ಅಗ್ನಿಶಾಮಕದಳ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಸಿಬ್ಬಂಧಿಗಳು ಬೆಂಕಿ ನಂದಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ನ್ಯೂ ಲೈಫ್ ಆಸ್ಪತ್ರೆಯಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ-Viral Video: ಬಿರಿಯಾನಿ ಪ್ರಿಯರು ಈ ವಿಡಿಯೋ ನೋಡಬೇಡಿ: ಹೃದಯ ಒಡೆಯುವುದು ಗ್ಯಾರಂಟಿ!
ಆಸ್ಪತ್ರೆ ಗೇಟ್ಗೆ ಬೆಂಕಿ
ವರದಿಗಳ ಪ್ರಕಾರ, ಈ ಅಪಘಾತದಲ್ಲಿ 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಕಿ ನಿಯಂತ್ರಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಅಗ್ನಿಶಾಮಕ ದಳದ ಹಲವು ತಂಡಗಳೂ ಸ್ಥಳದಲ್ಲಿವೆ. ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಅನೇಕರು ಆಸ್ಪತ್ರೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಸಾವುಗಳು ಎರಡನೇ ಮಹಡಿಯಲ್ಲಿ ಸಂಭವಿಸಿವೆ. ಪ್ರಾಥಮಿಕ ವರದಿಗಳ ಪ್ರಕಾರ ಸದ್ಯ ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ-Viral Video : ಶಾಸ್ತ್ರ ಎಂದು ಅವಕಾಶ ಕೊಟ್ಟಿದ್ದೇ ತಪ್ಪಾಯಿತು ಎಲ್ಲರೂ ಮುಖ ಮುಚ್ಚಿಕೊಳ್ಳುವಂತೆ ವರ್ತಿಸಿದ ಜೋಡಿ!
ಸಂತಾಪ ಸೂಚಿಸಿದ ಸಿಎಂ ಶಿವರಾಜ್ ಸಿಂಗ್ ಚೌಹಾನ್
ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿರುವ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, 'ಜಬಲ್ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದ ಸುದ್ದಿ ತಿಳಿದು ನೋವಾಗಿದೆ. ನಾನು ನಿರಂತರವಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದ ಸಂಪರ್ಕದಲ್ಲಿದ್ದೇನೆ. ಸಂಪೂರ್ಣ ನಿಗಾ ವಹಿಸುವಂತೆ ನಾನು ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾನೆ. ಪರಿಹಾರ ಮತ್ತು ರಕ್ಷಣೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ' ಎಂದಿದ್ದಾರೆ.
ಈ ಕುರಿತಾದ ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿರುವ ಮುಖ್ಯಮಂತ್ರಿಗಳು, "ಜಬಲ್ಪುರದ ನ್ಯೂ ಲೈಫ್ ಆಸ್ಪತ್ರೆಯ ಅಗ್ನಿ ಅವಘಡದಲ್ಲಿ ಅಮೂಲ್ಯ ಜೀವಗಳ ಅಕಾಲಿಕ ಮರಣದ ಸುದ್ದಿ ತಿಳಿದು ಹೃದಯವು ದುಃಖಿತವಾಗಿದೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಕುಟುಂಬ ಸದಸ್ಯರಿಗೆ ಈ ನಷ್ಟವನ್ನು ಭರಿಸುವ ಶಕ್ತಿ ಆ ದೇವರು ದಯಪಾಲಿಸಲಿ ಮತ್ತು ಗಾಯಾಳುಗಳು ಶೀಘ್ರದಲ್ಲಿಯೇ ಚೇತರಿಸಿಕೊಳ್ಳಬೇಕು ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ. ಓಂ ಶಾಂತಿ.." ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
जबलपुर के एक अस्पताल में भीषण अग्नि दुर्घटना का दुखद समाचार प्राप्त हुआ है।
स्थानीय प्रशासन और कलेक्टर से निरंतर संपर्क में हूं। मुख्य सचिव को संपूर्ण मामले पर नजर बनाये रखने के लिए निर्देश दिया है। राहत एवं बचाव के लिए हरसंभव प्रयास किये जा रहे हैं।
— Shivraj Singh Chouhan (@ChouhanShivraj) August 1, 2022
जबलपुर में बहुत दुर्भाग्यपूर्ण और दुखद घटना हुई है। मैं निरंतर जिला प्रशासन के संपर्क में हूं। आग पर काबू पाया जा चुका है।
जो घायल हैं,उनको दूसरे अस्पताल में उपचार के लिए भेजकर बेहतर उपचार की व्यवस्था की जा रही है।
मैंने कमिश्नर जबलपुर को घटना के जांच के आदेश दे दिए हैं। pic.twitter.com/SuG3XDjKAj
— Shivraj Singh Chouhan (@ChouhanShivraj) August 1, 2022
#WATCH | Madhya Pradesh: Fire breaks out at Jabalpur Hospital. Further details awaited pic.twitter.com/RdjjqARKIY
— ANI MP/CG/Rajasthan (@ANI_MP_CG_RJ) August 1, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.