ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ದಾಖಲೆಯನ್ನೇ ಮುರಿದ ವಿರಾಟ್ ಕೊಹ್ಲಿ!

    

Last Updated : Aug 24, 2018, 10:25 AM IST
ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ದಾಖಲೆಯನ್ನೇ ಮುರಿದ ವಿರಾಟ್ ಕೊಹ್ಲಿ! title=

ನವದೆಹಲಿ: ಹೌದು,ಈಗ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನವೆನ್ನುವಂತೆ ಗಳಿಸಿದ್ದೆಲ್ಲಾ ದಾಖಲೆ ಎನ್ನುವಂತಾಗಿದೆ. 

ಬುಧುವಾರದಂದು ವಿರಾಟ್ ಕೊಹ್ಲಿ ಕ್ರಿಕೆಟ್ ದಂತಕಥೆ  ಡಾನ್ ಬ್ರಾಡ್ಮನ್  ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಹಾಗಾದರೆ ಅವರು ಮಾಡಿರುವ ದಾಖಲೆಯಾದರು ಏನಂತೀರಾ?

ವಿರಾಟ್ ಕೊಹ್ಲಿ ಈಗ 200 ರಕ್ಕೂ ಅಧಿಕ ರನ್ ಗಳನ್ನು ಏಳು ಬಾರಿ ನಾಯಕನಾಗಿ ಗಳಿಸಿ ತಂಡದ ಗೆಲುವಿಗೆ ನೆರವಾಗಿದ್ದಾರೆ.ಆ ಮೂಲಕ ಆಷ್ಟ್ರೇಲಿಯಾದ ದಂತಕತೆ ಡಾನ್ ಬ್ರಾಡ್ಮನ್ ಮತ್ತು ರಿಕ್ಕಿ ಪಾಂಟಿಂಗ್ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ.ಈ ಇಬ್ಬರು ಆಟಗಾರರು ತಲಾ ಆರು ಬಾರಿ ಗಳಿಸಿದ್ದರು.

ಭಾರತದ ಪರ ಈ ಸಾಧನೆಯನ್ನು ಧೋನಿ ಮಾತ್ರ ಒಂದು ಬಾರಿ ಮಾಡಿದ್ದಾರೆ. 2013 ರಲ್ಲಿ ಅವರು ಆಷ್ಟ್ರೇಲಿಯಾದ ವಿರುದ್ಧ 224 ರನ್ ಗಳಿಸಿದ್ದರು.

Trending News