ನವದೆಹಲಿ: ರಾಜಸ್ಥಾನದ ಕಲುಂಡಿ ಗ್ರಾಮದಲ್ಲಿ 70 ದಲಿತ ಕುಟುಂಬಗಳು ಮೂಲ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ವಂಚಿತರನ್ನಾಗಿ ಮಾಡಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಈಗಾಗಲೇ ಗ್ರಾಮದ 16 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಈ ವಿಷಯದಲ್ಲಿ ನ್ಯಾಯೋಚಿತ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಗೃಹ ಸಚಿವ ಗುಲಾಬ್ ಸಿ ಕಟೇರಿಯಾ, ಪ್ರತಿಯೊಬ್ಬರಿಗೂ ತಮ್ಮ ಹಕ್ಕುಗಳನ್ನು ಅನುಭವಿಸುವ ಅವಕಾಶವಿದೆ.ಯಾರು ಈ ಮೂಲಭೂತ ಹಕ್ಕುಗಳ ತಡೆಗಟ್ಟಲು ಪ್ರಯತ್ನಿಸಿರುವರೋ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಟಾರಿಯಾ "ಕಾನೂನಿನಲ್ಲಿ, ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಮೂಲಕ ಬದುಕಲು ಅವಕಾಶ ನೀಡುತ್ತಾರೆ ಮತ್ತು ಯಾರಾದರೂ ಮೂಲಭೂತ ಹಕ್ಕುಗಳನ್ನು ನಿಷೇಧಿಸಿದ್ದರೆ ನಾನು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ" ತಿಳಿಸಿದ್ದಾರೆ.