ಭೂಕಂಪ: ಇಂದು ಮುಂಜಾನೆ 6.23ರ ಸುಮಾರಿಗೆ ಫಿಲಿಪೈನ್ಸ್ನಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು 7.0 ರಷ್ಟು ದಾಖಲಾಗಿದೆ. ಅದೇ ಸಮಯದಲ್ಲಿ, ಅಫ್ಘಾನಿಸ್ತಾನದಲ್ಲಿ ಸಹ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಆದಾಗ್ಯೂ, ಯಾವುದೇ ಪ್ರದೇಶದಲ್ಲಿ ಯಾವುದೇ ಜೀವಹಾನಿ ಬಗ್ಗೆ ವರದಿ ಆಗಿಲ್ಲ.
USGS ಪ್ರಕಾರ, ಇಂದು ಬೆಳಿಗ್ಗೆ 6.23 ಕ್ಕೆ ಫಿಲಿಪೈನ್ಸ್ನಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉಜ್ಬೇಕಿಸ್ತಾನದ ಕೆಲವು ಭಾಗಗಳಲ್ಲಿ ಮಂಗಳವಾರ ತಡರಾತ್ರಿ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ- ಹಿಂದೂ ಮಹಾಸಾಗರದಲ್ಲಿ ಸುನಾಮಿ ಭೀತಿ: ಇಂಡೋನೇಷ್ಯಾದಲ್ಲಿ 6.1 ತೀವ್ರತೆಯ ಭೂಕಂಪ
ಅದೇ ಸಮಯದಲ್ಲಿ, ಈಶಾನ್ಯ ಭಾರತದ ಮಿಜೋರಾಂನಲ್ಲಿ ಮಂಗಳವಾರ ಸಂಜೆ ಭೂಕಂಪದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮಿಜೋರಾಂನ ಚಂಪಾಯ್ನಿಂದ ಪಶ್ಚಿಮಕ್ಕೆ 7 ಕಿಮೀ ದೂರದಲ್ಲಿ ಸಂಭವಿಸಿದ ಭೂಕಂಪವು ರಿಕ್ಟರ್ ಮಾಪಕದಲ್ಲಿ 4.4 ರ ತೀವ್ರತೆಯನ್ನು ಹೊಂದಿತ್ತು.
ಇದನ್ನೂ ಓದಿ- Earthquake in Afghanistan: ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: 200ಕ್ಕೂ ಹೆಚ್ಚು ಸಾವು
ಇದನ್ನೂ ಮೊದಲು ಜೂನ್ ತಿಂಗಳಲ್ಲಿಯೂ ಫಿಲಿಪೈನ್ಸ್ನಲ್ಲಿ ಪ್ರಬಲ ಭೂಕಂಪನದ ಅನುಭವವಾಗಿತ್ತು. ಆ ಸಮಯದಲ್ಲಿ ದಕ್ಷಿಣ ಫಿಲಿಪೈನ್ಸ್ನ ಸುರಿಗಾವೊ ಡೆಲ್ ಸುರ್ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ, ಇದು ರಿಕ್ಟರ್ ಮಾಪಕದಲ್ಲಿ 5.6 ರಷ್ಟಿತ್ತು. ಭೂಕಂಪದ ಕೇಂದ್ರಬಿಂದು ಕಾಗ್ವೆಟ್ ಪಟ್ಟಣದ ಈಶಾನ್ಯಕ್ಕೆ ಸುಮಾರು 31 ಕಿಮೀ ದೂರದಲ್ಲಿ 16 ಕಿಮೀ ಆಳದಲ್ಲಿರುವುದಾಗಿ ವರದಿ ಆಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.