ಸುಂದರ ತ್ವಚೆಗೆ ಗ್ಲಿಸರಿನ್ ಪ್ರಯೋಜನಗಳು: ಪ್ರತಿ ಋತುವಿನಲ್ಲೂ ಒಂದಲ್ಲಾ ಒಂದು ಕಾರಣಕ್ಕೆ ತ್ವಚೆಯಲ್ಲಿ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.ಚರ್ಮವ್ ತೇವಾಂಶವನ್ನು ಕಳೆದುಕೊಂಡು ಸ್ಕಿನ್ ಡ್ರೈ ಸಮಸ್ಯೆ ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ದುಬಾರಿ ಪ್ರಾಡಕ್ಟ್ ಗಳನ್ನು ಬಳಸುತ್ತೇವೆ. ಆದರೆ, ತ್ವಚೆಯನ್ನು ತೇವಾಂಶದಿಂದ ಇಡಲು ಗ್ಲಿಸರಿನ್ ಅತ್ಯುತ್ತಮ ಎಂದು ಸಾಬೀತುಪಡಿಸಬಹುದು.
ಗ್ಲಿಸರಿನ್ ಚರ್ಮದ ತೇವಾಂಶವನ್ನು ಲಾಕ್ ಮಾಡುತ್ತದೆ. ಇದನ್ನು ರಾತ್ರಿ ಮಲಗುವ ಮೊದಲು ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಚರ್ಮದ ಆರೈಕೆಯಲ್ಲಿ ಪ್ರಯೋಜನಕಾರಿ ಆದ ಗ್ಲಿಸರಿನ್ ಅನ್ನು ಬಳಸುವುದು ಹೇಗೆ? ಎಂದು ತಿಳಿಯೋಣ...
ಇದನ್ನೂ ಓದಿ- ಕಿತ್ತಳೆ ಸಿಪ್ಪೆಯ 5 ಅದ್ಭುತ ಪ್ರಯೋಜನಗಳು
ಚರ್ಮಕ್ಕೆ ಗ್ಲಿಸರಿನ್ ಪ್ರಯೋಜನಗಳು:
* ತ್ವಚೆಯ ಮೇಲಿನ ಕಲೆ ನಿವಾರಣೆಗೆ:
ಮುಖದ ಮೇಲೆ ಮೂಡುವ ಮೊಡವೆಗಳು ಕಲೆ ಉಂಟು ಮಾಡುತ್ತವೆ. ಇಂತಹ ಕಪ್ಪು ಕಲೆಗಳನ್ನು ಹೋಗಲಾಡಿಸಲು ಗ್ಲಿಸರಿನ್ ಅನ್ನು ಈ ರೀತಿ ಬಳಸಿ.
ಬೇಕಾಗುವ ಪದಾರ್ಥಗಳು:-
ನಿಂಬೆ ರಸ- 1 ಚಮಚ
ರೋಸ್ ವಾಟರ್ - 1 ಚಮಚ
ಗ್ಲಿಸರಿನ್ - 1 ಚಮಚ
ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ರಾತ್ರಿ ಮಲಗುವ ಮೊದಲು ಈ ಮಿಶ್ರಣವನ್ನು ಹತ್ತಿಯಿಂದ ಮುಖಕ್ಕೆ ಹಚ್ಚಿ. ರಾತ್ರಿಯಿಡೀ ಹಾಗೆ ಬಿಡಿ. ಬೆಳಿಗ್ಗೆ ಎದ್ದು ಶುದ್ಧ ನೀರಿನಿಂದ ಮುಖ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಇದನ್ನೂ ಓದಿ- ಈ ಸಮಯದಲ್ಲಿ ಮಿಸ್ ಆಗಿ ಕೂಡ ಗ್ರೀನ್ ಟೀ ಕುಡಿಯಬೇಡಿ
* ಶುಷ್ಕತೆಯಿಂದ ಪರಿಹಾರ:
ಶುಷ್ಕ ತ್ವಚೆಯ ಸಮಸ್ಯೆ ಇರುವವರಿಗೆ ಗ್ಲಿಸರಿನ್ ಒಳ್ಳೆಯ ಆಯ್ಕೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಗ್ಲಿಸರಿನ್ನಲ್ಲಿ ಸ್ವಲ್ಪ ಹಾಲಿನ ಕೆನೆ ಬೆರೆಸಿ ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
* ಉತ್ತಮ ಮಾಯಿಶ್ಚರೈಸರ್ :
ಗ್ಲಿಸರಿನ್ ತ್ವಚೆಗೆ ಉತ್ತಮ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಮಾಯಿಶ್ಚರೈಸಿಂಗ್ ಕ್ರೀಮ್ ಗಳ ಬದಲಿಗೆ ಇದನ್ನು ಬಳಸಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.