ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಮಧೋಗಢ್ನ ಚಿರಿಯಾ ಸೇಲಂಪುರದಲ್ಲಿರುವ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇನಲ್ಲಿ ಭಾರೀ ಮಳೆಯಿಂದಾಗಿ ಬಿರುಕು ಉಂಟಾಗಿದೆ. ಈ ಎಕ್ಸ್ಪ್ರೆಸ್ವೇಯನ್ನು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. 296 ಕಿಮೀ ಉದ್ದದ ಮತ್ತು ಹೊಸದಾಗಿ ನಿರ್ಮಿಸಲಾದ ಎಕ್ಸ್ಪ್ರೆಸ್ವೇಯಲ್ಲಿ ಹೊಂಡಗಳು ಕಾಣಿಸಿಕೊಂಡಿದ್ದು, ಇದರ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಇನ್ನು ಇದೇ ವಿಚಾರವಾಗಿ ಸಮಾಜವಾದಿ ಪಕ್ಷವು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಈ ರಾಶಿಯವರು ಮಾತಿನಲ್ಲೆ ಹುಡುಗಿರ ಮರಳು ಮಾಡ್ತಾರೆ!
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿ, "ಇದು ಬಿಜೆಪಿಯ ಅರೆಬೆಂದ ಅಭಿವೃದ್ಧಿಯ ಗುಣಮಟ್ಟದ ಮಾದರಿಯಾಗಿದೆ. ಇನ್ನೊಂದೆಡೆ, ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇಯನ್ನು ದೊಡ್ಡ ಜನರೊಬ್ಬರು (ಪ್ರಧಾನಿ ನರೇಂದ್ರ ಮೋದಿ) ಉದ್ಘಾಟಿಸಿದರು. ಕೇವಲ ಒಂದು ವಾರದಲ್ಲಿ ದೊಡ್ಡ ಭ್ರಷ್ಟಾಚಾರದ ಪ್ರಕರಣಗಳು ಮುನ್ನೆಲೆಗೆ ಬಂದಿದೆ. ದೊಡ್ಡ ಹೊಂಡಗಳು ಕಾಣುತ್ತಿವೆ" ಎಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.
@yadavakhilesh जी सुना है आप ऑस्ट्रेलिया से पढ़कर लौटे हैं! अलग बात है कि आप अपने को गूगल मैप का बड़ा जानकार बताते हैं! लेकिन प्रदेश के पूर्व मुख्यमंत्री की मर्यादा के अनुसार थोड़ा लिखकर फिर पढ़कर पोस्ट करना चाहिए! कम से कम बेसिक टेक्निकल नॉलेज तो आपको होनी ही चाहिए! https://t.co/5yVefT60bn
— Nand Gopal Gupta 'Nandi' (@NandiGuptaBJP) July 21, 2022
ಇದೀಗ ಯೋಗಿ ಆದಿತ್ಯನಾಥ್ ಸರ್ಕಾರದ ಸಚಿವ ನಂದಗೋಪಾಲ್ ನಂದಿ ಅಖಿಲೇಶ್ ಯಾದವ್ ವಿರುದ್ಧ ಟ್ವೀಟ್ ಮಾಡಿದ್ದು, "ಅಖಿಲೇಶ್ ಜೀ, ನೀವು ನಿಮ್ಮ ಅಧ್ಯಯನವನ್ನು ಆಸ್ಟ್ರೇಲಿಯಾದಲ್ಲಿ ಮುಗಿಸಿದ್ದೀರಿ ಎಂದು ಕೇಳ್ಪಟ್ಟಿದ್ದೆ. ರಾಜ್ಯದ ಮಾಜಿ ಮುಖ್ಯಮಂತ್ರಿಯ ಘನತೆಗೆ ತಕ್ಕಂತೆ ಸ್ವಲ್ಪ ಬರೆದು ಓದಿ ಪೋಸ್ಟ್ ಮಾಡಬೇಕು. ನೀವು ಕನಿಷ್ಟ ಮೂಲಭೂತ ತಾಂತ್ರಿಕ ಜ್ಞಾನವನ್ನು ಹೊಂದಿರಬೇಕು. ನಿಮ್ಮ ಅಲ್ಪ ಜ್ಞಾನದ ಸಲಹೆಗಾರರ ಅಪೂರ್ಣ ಜ್ಞಾನವನ್ನು ನೆಚ್ಚಿಕೊಂಡು ರಾಜಕೀಯ ಮಾಡಬೇಡಿ ಎಂಬುದು ನನ್ನ ಸಲಹೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಸಂಸದ ವರುಣ್ ಗಾಂಧಿ, ನಿರ್ಮಾಣ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಂಪನಿಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. "15 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಎಕ್ಸ್ಪ್ರೆಸ್ವೇ 5 ದಿನಗಳ ಮಳೆಯನ್ನು ಸಹ ತಡೆದುಕೊಳ್ಳದಿದ್ದರೆ, ಅದರ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಯೋಜನೆಯ ಮುಖ್ಯಸ್ಥರು, ಸಂಬಂಧಪಟ್ಟ ಇಂಜಿನಿಯರ್ ಹಾಗೂ ಜವಾಬ್ದಾರಿಯುತ ಕಂಪನಿಗಳನ್ನು ಕೂಡಲೇ ಕರೆಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದರು.
ಇದನ್ನೂ ಓದಿ: ಸೋನಿಯಾ ಇಡಿ ವಿಚಾರಣೆ : 2 ಗಂಟೆ, 25 ಪ್ರಶ್ನೆ, ಜುಲೈ 25ಕ್ಕೆ ಸಮನ್ಸ್!
ಉತ್ತರ ಪ್ರದೇಶ ಎಕ್ಸ್ಪ್ರೆಸ್ವೇ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಥಾರಿಟಿ (ಯುಪಿಇಡಿಎ) ವಕ್ತಾರ ದುರ್ಗೇಶ್ ಉಪಾಧ್ಯಾಯ ಮಾತನಾಡಿ, “ಭಾರೀ ಮಳೆಯಿಂದಾಗಿ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ ಜಲಾವೃತವಾಗಿದ್ದು, ಬುಧವಾರ ರಾತ್ರಿ ಸುಮಾರು ಒಂದೂವರೆ ಅಡಿ ರಸ್ತೆ ಮುಳುಗಿದೆ. ಮಾಹಿತಿ ಸಿಕ್ಕ ತಕ್ಷಣ ಅಧಿಕಾರಿಗಳ ತಂಡ ಅಲ್ಲಿಗೆ ಆಗಮಿಸಿ ಸರಿಪಡಿಸಲಾಯಿತು. ಕೂಡಲೇ ರಸ್ತೆ ದುರಸ್ತಿ ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ" ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.