ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನ ಮತ್ತು ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ನಡೆದ ಕೊನೆಯ ಹಾಗೂ 5ನೇ ಹಂತದ ಚುನಾವಣೆಯಲ್ಲೂ ಗೆಲುವು ಸಾಧಿಸಿದ ಭಾರತ ಮೂಲದ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಅಂತಿಮ ಹಣಾಹಣಿಗೆ ಲಗ್ಗೆ ಇಟ್ಟಿದ್ದಾರೆ. ಇವರ ವಿರುದ್ಧ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರುಸ್ ಬ್ರಿಟನ್ ಪ್ರಧಾನಿ ಗಾದಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಇದನ್ನೂ ಓದಿ: Breaking News: ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಆಯ್ಕೆ
ಬ್ರಿಟನ್ ಪ್ರಧಾನಿ ಚುನಾವಣೆಯ ಐದನೇ ಹಂತದ ಮತದಾನದ ಬಳಿಕ ರಿಷಿ ಸುನಕ್‌ಗೆ ಕನ್ಸರ್ವೇಟಿವ್ ಪಕ್ಷದಿಂದ 133 ಮತಗಳು ಬಿದ್ದರೆ, ಲಿಜ್ ಟ್ರುಸ್ 113 ಮತಗಳನ್ನು ಪಡೆದರು. ವಾಣಿಜ್ಯ ಸಚಿವರಾದ ಪೆನ್ನಿ ಮರ್ಡೌಂಟ್ 105 ಮತಗಳನ್ನು ಪಡೆದು ಪ್ರಧಾನಿ ರೇಸ್‌ನಿಂದ ಹೊರಬಿದ್ದರು. ಇತ್ತೀಚಿನ ಮತದಾನವನ್ನು ಗೆದ್ದ ನಂತರ ಮಾತನಾಡಿದ ಸುನಕ್, "ನಾವು ನಂಬಿಕೆಯನ್ನು ಪುನಃಸ್ಥಾಪಿಸಬೇಕು. ಆರ್ಥಿಕತೆಯನ್ನು ಪುನರ್ನಿರ್ಮಿಸಬೇಕು. ನಮ್ಮ ದೇಶವನ್ನು ಮತ್ತೆ ಒಂದುಗೂಡಿಸಬೇಕು" ಎಂದು ಹೇಳಿದರು.
ಮತ್ತೊಂದೆಡೆ, ಟ್ರುಸ್ ಅವರು, ತೆರಿಗೆಗಳನ್ನು ಕಡಿಮೆ ಮಾಡುವುದು, ಅವಕಾಶಗಳನ್ನು ತೆರೆಯುವುದು, ಬ್ರಿಟನ್‌ಗೆ ಅಗತ್ಯವಿರುವ ಆರ್ಥಿಕ ಬೆಳವಣಿಗೆಯನ್ನು ತಲುಪಿಸಲು ನಮಗೆ ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ" ಎಂದು ಹೇಳಿದರು.
UK ಯಲ್ಲಿನ ಪ್ರಸ್ತುತ ಹೀಟ್‌ವೇವ್ ಸಮಸ್ಯೆಗಳನ್ನು ಪರಿಗಣಿಸಿ, ಹವಾಮಾನ ಬದಲಾವಣೆಗೆ ಅವರ ವಿಧಾನವು ಬಹಳ ನಿರ್ಣಾಯಕವಾಗಿರುತ್ತದೆ. 2050 ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತಗ್ಗಿಸಲು ಬ್ರಿಟನ್‌ನ ಕಾನೂನುಬದ್ಧ ಗುರಿಗಳೊಂದಿಗೆ ಅಂಟಿಕೊಳ್ಳುವುದಾಗಿ ಸುನಕ್ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ವಿಶೇಷ ಆಹ್ವಾನ ಕಳುಹಿಸಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ
ಬ್ರಿಟನ್ ಪ್ರಧಾನಿ ಚುನಾವಣೆಯ ಪ್ರತಿ ಹಂತದ ಮತದಾನದಲ್ಲೂ ಭಾರತ ಮೂಲದ ರಿಷಿ ಸುನಕ್ ಮೊದಲ ಸ್ಥಾನ ಪಡೆದಿದ್ದಾರೆ. ಮಂಗಳವಾರದ ಹೊತ್ತಿಗೆ 118 ಮತಗಳನ್ನು ಪಡೆದಿದ್ದರು. ನಂತರ ಬುಧವಾರ 18 ಮತಗಳನ್ನು ಪಡೆದರು. ಈ ಮೂಲಕ 137 ಮತ ಪಡೆದು ಮೊದಲಿಗರಾಗಿ ನಿರ್ಣಾಯಕ ಹಂತದಲ್ಲಿ ರಿಷಿ ಸುನಕ್ ಸ್ಥಾನ ಭದ್ರಪಡಿಸಿಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.