ಹಿಂದೂ ಧರ್ಮದಲ್ಲಿ, ವಾರದ ಏಳು ದಿನಗಳನ್ನು ದೇವತೆಗಳಿಗೆಂದು ಮೀಸಲಿರಿಸಲಾಗುತ್ತದೆ. ಅಂತೆಯೇ ಮಂಗಳವಾರದಂದು ಹನುಮನ ಆರಾಧನೆ ಮಾಡಲಾಗುತ್ತದೆ. ಆಂಜನೇಯನು ಭಗವಾನ್ ಶಿವನ ರುದ್ರಾವತಾರ ಮತ್ತು ಭಗವಾನ್ ಶ್ರೀರಾಮನ ಅಂತಿಮ ಭಕ್ತ ಎಂದು ನಂಬಲಾಗಿದೆ. ಮಂಗಳವಾರದಂದು ಪೂರ್ಣ ಶ್ರದ್ಧೆಯಿಂದ ಪೂಜೆ ಮಾಡುವುದರಿಂದ ಭಕ್ತರ ಜೀವನದಲ್ಲಿ ಎಲ್ಲವೂ ಮಂಗಳಕರವಾಗುತ್ತದೆ.
ಇದನ್ನೂ ಓದಿ:
ಒಬ್ಬ ವ್ಯಕ್ತಿಯು ಮಂಗಳವಾರದಂದು ಪೂರ್ಣ ಭಕ್ತಿ ಮತ್ತು ಪ್ರಾಮಾಣಿಕ ಹೃದಯದಿಂದ ಬಜರಂಗಬಲಿಯ ಮಂತ್ರ ಪಠಿಸಿದರೆ, ಅವನ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಅಷ್ಟೇ ಅಲ್ಲದೆ, ವಿಶೇಷ ಆಸೆಗಳನ್ನು ಪೂರೈಸಲು ಈ ಮಂತ್ರಗಳನ್ನು ನಿಯಮಿತವಾಗಿ ಪಠಿಸಬೇಕು.
ಆಂಜನೇಯ ಮಂತ್ರದ ಪ್ರಯೋಜನಗಳು:
ಆಂಜನೇಯ ಮಂತ್ರವನ್ನು ಪಠಿಸುವ ಮೂಲಕ ಒಬ್ಬ ವ್ಯಕ್ತಿಯು ಎಂದಿಗೂ ಗಂಭೀರ ಕಾಯಿಲೆಗಳನ್ನು ಅನುಭವಿಸುವುದಿಲ್ಲ ಎಂದು ನಂಬಲಾಗಿದೆ. ಅಲ್ಲದೆ, ಅವನು ಎಲ್ಲಾ ರೀತಿಯ ರೋಗಗಳು ಮತ್ತು ಇತರ ದೋಷಗಳಿಂದ ಮುಕ್ತಿಯನ್ನು ಪಡೆಯುತ್ತಾನೆ.
ಯಾವುದೇ ಕೆಲಸದಲ್ಲಿಯಾದರೂ ಸರಿ ಆತ ಖಂಡಿತವಾಗಿಯೂ ಯಶಸ್ಸು ಪಡೆಯಲು ಮಂಗಳವಾರ ಆಂಜನೇಯ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾನೆ.
ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಹೊಂದಿದ್ದರೆ, ಮಂಗಳವಾರ ಆಂಜನೇಯ ಮಂತ್ರವನ್ನು ಪಠಿಸಿ. ಈ ಮೂಲಕ ಶತ್ರುಗಳನ್ನು ಗೆಲ್ಲಬಹುದು ಎಂದು ನಂಬಲಾಗಿದೆ.
ಪ್ರತೀದಿನದಂದು ಆಂಜನೇಯ ಮಂತ್ರ ಪಠಿಸುವ ಮೂಲಕ ಭಯವನ್ನು ತೊಡೆದುಹಾಕಬಹುದು. ಅದೇ ಸಮಯದಲ್ಲಿ, ದೀರ್ಘಕಾಲದವರೆಗೆ ಕೆಲಸದಲ್ಲಿ ಬರುತ್ತಿದ್ದ ಅಡೆತಡೆಗಳು ದೂರವಾಗುತ್ತವೆ.
ಪ್ರತಿ ಮಂಗಳವಾರ ಆಂಜನೇಯ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಇದನ್ನೂ ಓದಿ: ಸಂಕಷ್ಟದ ಕಾಲದಲ್ಲಿ ಜನರೊಂದಿಗೆ ಸರ್ಕಾರವಿದೆ : ಸಿಎಂ ಬೊಮ್ಮಾಯಿ ಭರವಸೆ
ಜ್ಯೋತಿಷ್ಯದ ಪ್ರಕಾರ ಪೂಜೆ ಮಾಡುವಾಗ ಮಂತ್ರ ಪಠಣೆ ಮಾಡಿದರೆ ಒಳಿತಾಗುತ್ತದೆ. ಇನ್ನು ಶಾಸ್ತ್ರದಲ್ಲಿ ಪ್ರತಿಯೊಂದು ಮಂತ್ರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದ್ದು, ಅವುಗಳನ್ನು ಪಠಿಸುವಾಗ ಎಚ್ಚರಿಕೆ ವಹಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ