Supermoon 2022: ಈ ವರ್ಷದ ಅತಿ ದೊಡ್ಡ ಖಗೋಳ ಘಟನೆಯಲ್ಲಿ ಒಂದಾಗಿರುವ 'ಸೂಪರ್ ಮೂನ್' ಜುಲೈ 13 ರಂದು ನೀವು ಬಾನಂಗಳದಲ್ಲಿ ನೋಡಬಹುದು. ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯನ್ನು ಸಮೀಪಿಸಿದಾಗ ಈ ಅದ್ಭುತ ದೃಶ್ಯಾವಳಿ ಕಂಗೊಳಿಸುತ್ತದೆ.
Supermoon 2022: ಈ ವರ್ಷದ ಅತಿ ದೊಡ್ಡ ಖಗೋಳ ಘಟನೆಯಲ್ಲಿ ಒಂದಾಗಿರುವ 'ಸೂಪರ್ ಮೂನ್' ಜುಲೈ 13 ರಂದು ನೀವು ಬಾನಂಗಳದಲ್ಲಿ ನೋಡಬಹುದು. ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯನ್ನು ಸಮೀಪಿಸಿದಾಗ ಈ ಅದ್ಭುತ ದೃಶ್ಯಾವಳಿ ಕಂಗೊಳಿಸುತ್ತದೆ. ಹೌದು, ಜುಲೈ 13 ರಂದು ಬಾನಂಗಳದಲ್ಲಿ ನೀವು ಈ ಚಿತ್ತಾರವನ್ನು ನೋಡಬಹುದಾಗಿದೆ. ಸೂಪರ್ ಮೂನ್ ಕಾಣಿಸುವ ರಾತ್ರಿ ಚಂದಿರ ದಿನಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿ, ಪ್ರಕಾಶಮಾನವಾಗಿ ಮತ್ತು ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಈ ಘಟನೆಯನ್ನು ಪಿಂಕ್ ಮೂನ್ ಎಂದೂ ಕೂಡ ಕರೆಯಲಾಗುತ್ತದೆ.
ಇದನ್ನೂ ಓದಿ-BCG Booster Bose: 100 ವರ್ಷಗಳಷ್ಟು ಹಳೆಯದಾದ ಈ ಲಸಿಕೆ ಮಧುಮೇಹ-ಕೊರೊನಾಗೂ ರಾಮಬಾಣ ಚಿಕಿತ್ಸೆ ಸಾಬೀತಾಗಲಿದೆಯೇ?
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. ಯಾವಾಗ ಪಿಂಕ್ ಮೂನ್ ಗೋಚರಿಸಲಿದೆ - ಈ ವರ್ಷದ ಜುಲೈ 12 ರಂದು ರಾತ್ರಿ 12 ಗಂಟೆ 7 ನಿಮಿಷಕ್ಕೆ ಪಿಂಕ್ ಮೂನ್ ಅನ್ನು ನೀವು ನೋಡಬಹುದಾಗಿದೆ. ಇದಾದ ಬಳಿಕ ಮತ್ತೆ ಮುಂದಿನ ವರ್ಷ ಅಂದರೆ 2023 ರ ಜುಲೈ 3 ರಂದು ಈ ಘಟನೆ ಪುನರಾವರ್ತಿಸಲಿದೆ.
2. ಜುಲೈ 13, 2022ರ ಸೂಪರ್ ಮೂನ್ ಸಂದರ್ಭದಲ್ಲಿ ವರ್ಷದ ಅತಿ ದೊಡ್ಡ ಚಂದ್ರ ಕಾಣಿಸಿಕೊಳ್ಳಲಿದ್ದಾನೆ. ಇದನ್ನು ಡಿಯರ್ ಮೂನ್, ಥಂಡರ್ ಮೂನ್, ವಿರ್ಟ್ ಮೂನ್, ಹೇ ಮೂನ್ ಎಂದೂ ಕೂಡ ಕರೆಯಲಾಗುತ್ತದೆ. ಅಮೇರಿಕಾದಲ್ಲಿ ಇದನ್ನು ಸೈಲ್ಮನ್ ಮೂನ್, ರಾಸ್ಪಬೆರ್ರಿ ಮೂನ್ ಹಾಗೂ ಕೈಲ್ಮಿಂಗ್ ಮೂನ್ ಎಂದೂ ಕೂಡ ಕರೆಯಲಾಗುತ್ತದೆ.
3. 1979 ರಲ್ಲಿ ಮೊಟ್ಟಮೊದಲ ಬಾರಿಗೆ ಸೂಪರ್ ಮೂನ್ ಹೆಸರು ಬಳಕೆಗೆ ಬಂದಿತು. ಜೋತಿಷ್ಯ ಪಂಡಿತ ರಿಚರ್ಡ್ ನೋಲೆ ಈ ಶಬ್ದವನ್ನು ಆವಿಷ್ಕರಿಸಿದ್ದಾರೆ. ಚಂದಿರ ಭೂಮಿಯ ಅತ್ಯಂತ ಸಮೀಪ ಅಂದರೆ ಶೇ.90ರಷ್ಟು ಪೆರಿಗಿ ವ್ಯಾಪ್ತಿಗೆ ಬಂದಾಗ, ಈ ಘಗೋಳ ಘಟನೆಯನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.
4. ಸೂಪರ್ ಮೂನ್ ಒಂದು ಸಾಮಾನ್ಯ ಖಗೋಳ ಘಟನೆಯಾಗಿದ್ದು, ಒಂದು ವರ್ಷದಲ್ಲಿ ಮೂರು ಬಾರಿಗೆ ಕಂಗೊಳಿಸುತ್ತದೆ. ಆದರೆ, ಇದರಿಂದ ಚಂದ್ರನಲ್ಲಿ ಯಾವುದೇ ವಿಶೇಷ ಶಕ್ತಿ ಬರುತ್ತದೆ ಎಂದು ಇದರರ್ಥವಲ್ಲ. ಈ ದಿನ ಚಂದ್ರ ನಿತ್ಯದ ಗಾತ್ರಕ್ಕೆ ಹೋಲಿಸಿದರೆ, ಸ್ವಲ್ಪ ದೊಡ್ಡದಾಗಿ ಗೋಚರಿಸುತ್ತಾನೆ. ಏಕೆಂದರೆ, ಆತ ಭೂವಿಯ ಸಮೀಪದಲ್ಲಿರುತ್ತಾನೆ. ಈ ಖಗೋಳ ಘಟನೆಯನ್ನು ಪೇರಿಗೆ ಹೆಸರಿನಿಂದಲೂ ಕೂಡ ಗುರುತಿಸಲಾಗುತ್ತದೆ.
5. ಈ ಖಗೋಳ ಘಟನೆ ಸೂಪರ್ ಹೈ ಟೈಡ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ದಿನ ಮಹಾಸಾಗರಗಳಲ್ಲಿ ಅಲೆಗಳ ಸರಣಿಯನ್ನೇ ನೀವು ನೋಡಬಹುದು. ಸೂಪರ್ ಮೂನ್ ಹಿನ್ನೆಲೆ ಸಾಗರದಲ್ಲಿ ಬಿರುಗಾಳಿ ಹಾಗೂ ಸಮುದ್ರ ತೀರದಲ್ಲಿ ನೆರೆ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಇರುತ್ತದೆ.