ಬೆಳಗಾವಿ ಜಿಲ್ಲೆ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಇಲ್ಲಿನ ಗೋಕಾಕ್ ಫಾಲ್ಸ್ ತುಂಬಿ ಹರಿಯುತ್ತಿದೆ. ಭಾರತದ ನಯಾಗರ ಜಲಪಾತ ಎಂದೇ ಖ್ಯಾತಿ ಪಡೆದ ಗೋಕಾಕ ಫಾಲ್ಸ್ ನೋಡಲು ಜನಸಾಗರವೇ ಹರಿದುಬರುತ್ತಿದೆ. ಈ ನಯನ ಮನೋಹರ ದೃಶ್ಯದ ಕೆಲವೊಂದು ಫೋಟೋಗಳನ್ನು ಇಲ್ಲಿ ನೀಡಲಾಗಿದೆ.
ಭಾರತದ ನಯಾಗರ ಫಾಲ್ಸ್ ಎಂದೇ ಗೋಕಾಕ್ ಜಲಪಾತವನ್ನು ಕರೆಯಲಾಗುತ್ತದೆ. ಈ ಜಲಪಾತದ ಸೊಬಗು ನೋಡಲು ಎರಡು ಕಣ್ಣುಗಳು ಸಾಲದು. ದಿನೇ ದಿನೇ ಗೋಕಾಕ ಫಾಲ್ಸ್ ವೈಯಾರ ಹೆಚ್ಚಳವಾಗುತ್ತಿದ್ದು, ಈ ಪ್ರಕೃತಿ ಸೌಂದರ್ಯ ನೋಡಲು ಜನ ಸಾಗರವೇ ಹರಿದುಬರುತ್ತಿದೆ.
ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಗೋಕಾಕ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಧುಮುಕ್ಕಿ ಹರಿಯುತ್ತಿರುವ ಗೋಕಾಕ ಫಾಲ್ಸ್ನ ಅಂದವನ್ನು ಹೆಚ್ಚಳ ಮಾಡುತ್ತಿದೆ ಸುತ್ತಲಿರುವ ಪರಿಸರ.
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕರ್ನಾಟಕ ಗಡಿ ಪ್ರದೇಶದ ಜಿಲ್ಲೆಗಳ ಜಲಪಾತಗಳು ತುಂಬಿ ಹರಿಯುತ್ತಿವೆ.
ಬೆಳಗಾವಿ ಜಿಲ್ಲೆಯ ಸಪ್ತ ನದಿಗಳ ಒಳ ಹರಿವು ಹೆಚ್ಚಾಗುತ್ತಿದೆ. ಗೋಕಾಕ ಫಾಲ್ಸ್ ಸೇರಿದಂತೆ ಅನೇಕ ಜಲಪಾತಗಳು ಮೈದುಂಬಿ ಹರಿಯುತ್ತಿವೆ.
ಬೆಳಗಾವಿಯ ಸಪ್ತನದಿಗಳಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ ನದಿಗಳ ಒಳ ಹರಿವು ಹೆಚ್ಚಳವಾಗುತ್ತಿದೆ.