Wimbledon 2022: ಯಾವ ಹಾಲಿವುಡ್ ಸಿನಿ ತಾರೆಗೂ ಕಡಿಮೆಯಿಲ್ಲ ಎಲೆನಾ ರೈಬಾಕಿನಾ!

ವಿಂಬಲ್ಡನ್‌ನಲ್ಲಿ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಕಜಕಿಸ್ತಾನದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಎಲೆನಾ ರೈಬಾಕಿನಾ ಪಾತ್ರರಾಗಿದ್ದಾರೆ.

  • Jul 10, 2022, 00:48 AM IST

ಶನಿವಾರದಂದು ನಡೆದ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಟುನೀಶಿಯಾದ ಓನ್ಸ್ ಜಬೇರ್ ಅವರನ್ನು ಸೋಲಿಸುವ ಮೂಲಕ ಈಗ ಎಲೆನಾ ರೈಬಾಕಿನಾ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಕಜಕಿಸ್ತಾನದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಟುನೀಶಿಯಾದ ಓನ್ಸ್ ಜಬೇರ್ ಅವರನ್ನು 3-6 6-2 6-2 ಸೆಟ್‌ಗಳಿಂದ ಸೋಲಿಸುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

3ನೇ ಶ್ರೇಯಾಂಕದ ಜಬೇರ್ ಅವರು ಮರಿಯಾ ವಿರುದ್ಧ ಒಂದು ಗಂಟೆ ನಲವತ್ಮೂರು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 6-2, 3-6, 6-1 ಅಂತರದಿಂದ ಗೆದ್ದರು. 

2 /5

ಗುರುವಾರದಂದು ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಜರ್ಮನಿಯ ತಟ್ಜಾನಾ ಮರಿಯಾ ವಿರುದ್ಧ ಜಯಗಳಿಸಿದ ನಂತರ ವಿಂಬಲ್ಡನ್ ಫೈನಲ್‌ನಲ್ಲಿ ಟುನೀಶಿಯಾದ ಓನ್ಸ್ ಜಬೇರ್ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದರು.

3 /5

ಇದರ ಜೊತೆ ಅವರ ಎದುರಾಳಿ ಜಬೇರ್ ಕೂಡ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಮೊದಲ ಟ್ಯುನೀಷಿಯನ್ ಮತ್ತು ಅರಬ್ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

4 /5

23 ವರ್ಷದ ರೈಬಾಕಿನಾ ಅವರು 2011 ರಲ್ಲಿ 21 ವರ್ಷದ ಪೆಟ್ರಾ ಕ್ವಿಟೋವಾ ಗೆದ್ದ ನಂತರ ಈ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

5 /5

ಇದು ಒಟ್ಟಾರೆಯಾಗಿ ಅವರ ಮೂರನೇ ಟ್ರೋಪಿಯಾಗಿದೆ. ಅವರು ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಪ್ಲೇ-ಆಫ್ ಸೇರಿದಂತೆ ನಾಲ್ಕು ನೇರ ಫೈನಲ್‌ಗಳಲ್ಲಿ ಸೋತಿದ್ದರು.