Women Should Not Keep Their Hairs Open: ಮಹಿಳೆಯರ ಸೌದರ್ಯ ಹೆಚ್ಚಿಸುವಲ್ಲಿ ಕೂದಲುಗಳ ಪಾತ್ರ ತುಂಬಾ ಮಹತ್ವದ್ದಾಗಿದೆ. ಯಾವುದೇ ಒಂದು ವಿಶೇಷ ಕಾರ್ಯಕ್ರಮಕ್ಕೆ ಭೇಟಿ ನೀಡಬೇಕಾದರೆ, ಮಹಿಳೆಯರು ತಮ್ಮ ಕೂದಲುಗಳನ್ನು ವಿಭಿನ್ನ ಶೈಲಿಯಲ್ಲಿ ಹೆರಳು ಹಾಕಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಹಲವು ಬಾರಿ ಅವರು ತಮ್ಮ ಕೂದಲುಗಳನ್ನು ಕೂಡ ಹರಡಿ ಬಿಡುತ್ತಾರೆ. ಆದರೆ, ಧರ್ಮ ಶಾಸ್ತ್ರಗಳ ಪ್ರಕಾರ ಕೂದಲುಗಳನ್ನು ಹೆರಳು ಹಾಕದೆ ಹರಡಿ ಬಿಡುವುದು ಅಶುಭ ಎನ್ನಲಾಗಿದೆ. ಈ ರೀತಿ ಮಾಡುವುದರಿಂದ ಮಹಿಳೆಯರ ಜೀವನದಲ್ಲಿ ಸಾಕಷ್ಟು ಅಡಚಣೆಗಳು ಎದುರಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ತಲೆಗೂದಲನ್ನು ಹರಡಿಬಿಡುವುದರಿಂದ ಯಾವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ತಲೆಗೂದಲನ್ನು ಏಕೆ ಹರಡಿ ಬಿಡಬಾರದು
>> ನಂಬಿಕೆಗಳ ಪ್ರಕಾರ ಕೂದಲುಗಳಿಗೆ ಸಂಬಂಧಿಸಿದ ಹಲವು ತಂತ್ರ ವಿಧಾನಗಳಿವೆ. ಕೂದಲುಗಳನ್ನೂ ಹರಡಿ ಬಿಡುವುದು ನಕಾರಾತ್ಮಕ ಶಕ್ತಿಗಳ ಆಕಷಣೆಗೆ ಕಾರಣವಾಗುತ್ತದೆ.
>> ಯಾವುದೇ ಸ್ತ್ರೀ ಕೂದಲುಗಳನ್ನು ಹರಡಿ ಮನೆಯಿಂದ ಹೋದರೆ, ಅವಳು ಸುಲಭವಾಗಿ ತಂತ್ರ ಕ್ರಿಯೆ ಹಾಗೂ ನಕಾರಾತ್ಮಕ ಶಕ್ತಿಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
>> ತೆರೆದ ಹಾಗೂ ಗಂಟಿಕ್ಕಿಕೊಂಡ ಕೂದಲುಗಳು ಅಶುಭ ಎಂದು ಭಾವಿಸಲಾಗುತ್ತದೆ.
>> ಧಾರ್ಮಿಕ ನಂಬಿಕೆಗಳ ಪ್ರಕಾರ, ರಾತ್ರಿ ಮಲಗುವಾಗ ಅಪ್ಪಿತಪ್ಪಿಯೂ ಕೂಡ ಕೂದಲುಗಳನ್ನೂ ಹರಡಿ ಮಲಗಬಾರದು, ಇದರಿಂದ ದುಃಖ, ಸಂಕಷ್ಟಗಳು ಹೆಚ್ಚಾಗುತ್ತವೆ ಎನ್ನಲಾಗುತ್ತದೆ.
>> ಹೆಣ್ಣುಮಕ್ಕಳು ಯಾವಾಗಲು ತಮ್ಮ ಕೂದಲುಗಳಿಗೆ ಹೆರಳು ಹಾಕಿಕೊಳ್ಳಬೇಕು ಎನ್ನಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಕೇವಲ ಶೋಕ ವ್ಯಕ್ತಪಡಿಸುವ ಸಂದರ್ಭಗಳಲ್ಲಿ ಮಾತ್ರ ಸ್ತ್ರೀಯರು ತಮ್ಮ ಕೂದಲುಗಳನ್ನು ಹರಡಿಬಿಡುತ್ತಾರೆ ಎನ್ನಲಾಗುತ್ತದೆ.
>> ಪುರಾಣಿಕ ನಂಬಿಕೆಗಳ ಪ್ರಕಾರ ತಾಯಿ ಸೀತೆ ಹಾಗೂ ಶ್ರೀರಾಮಚಂದ್ರರ ವಿವಾಹದ ಸಂದರ್ಭದಲ್ಲಿ ಸೀತೆಯ ತಾಯಿ ಸುನಯನಾ ತನ್ನ ಮಗಳಿಗೆ ಕೂದಲುಗಳನ್ನು ಹರಡಿಬಿಡಬೇಡ ಎಂಬ ಸಲಹೆ ನೀಡಿದ್ದಳು ಎನ್ನಲಾಗುತ್ತದೆ. ಅಷ್ಟೇ ಅಲ್ಲ ಇದರಿಂದ ಸಂಬಂಧಗಳು ಮುರಿದುಬೀಳುತ್ತವೆ ಮತ್ತು ಕೂದಲುಗಳಿಗೆ ಹೆರಳು ಇದ್ದರೆ, ಅದು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದ್ದರು.
>> ಪುರಾಣಿಕ ಕಥೆಗಳ ಪ್ರಕಾರ, ದೇವಿ ಕೈಕೆಯಿ ಮುನಿಸಿಕೊಂಡು ಕೋಪಭವನಕ್ಕೆ ತೆರಳಿದ್ದಾಗ ಆಕೆ ತನ್ನ ಕೂದಲುಗಳನ್ನು ಹರಡಿಬಿಟ್ಟಿದ್ದಳು ಮತ್ತು ಅದೇ ಅವಸ್ಥೆಯಲ್ಲಿ ಆಕೆ ಕಣ್ಣೀರಿತ್ತಿದ್ದಳು ಎನ್ನಲಾಗುತ್ತದೆ. ಅದರ ಪರಿಣಾಮಗಳು ಕೂಡ ಕಂಡುಬಂದಿದ್ದವು.
ಇದನ್ನೂ ಓದಿ-ಚಾಣಕ್ಯ ನೀತಿ: ವಿಷಕಾರಿ ಹಾವಿಗಿಂತಲೂ ಅಪಾಯಕಾರಿಯಂತೆ ಇಂತಹ ಜನರು
>> ಮಹಾಭಾರತದಲ್ಲಿ ದ್ರೌಪದಿಯ ಘೋರ ಅಪಮಾನ ನಡೆದಾಗ ದ್ರೌಪದಿ ಕೂಡ ತನ್ನ ಕೂದಲುಗಳನ್ನು ಹರಡಿಬಿಟ್ಟಿದ್ದಳು. ಪರಿಣಾಮವಶಾತ್ ಧೃತರಾಷ್ಟ್ರನ ಎಲ್ಲಾ ಪುತ್ರರು ಮತ್ತು ಆತನ ಸಂಬಂಧಿಕರ ಸರ್ವನಾಶಕ್ಕೆ ಇದು ಕಾರಣವಾಯಿತು ಎನ್ನಲಾಗುತ್ತದೆ.
ಇದನ್ನೂ ಓದಿ-24 ಗಂಟೆಗಳ ಅಂತರದಲ್ಲಿ 2 ಪ್ರಮುಖ ಗ್ರಹಗಳ ರಾಶಿ ಬದಲಾವಣೆ, ಈ 5 ರಾಶಿಯವರಿಗೆ ಮಹಾ ಯೋಗ ..!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ