ಕುಟುಂಬದ ರಕ್ಷಣೆಗೆ ಡೌನ್‌ಲೋಡ್‌ ಮಾಡಿದ ಈ App ತುಂಬಾ ಅಪಾಯಕಾರಿ!

ಇಂದಿನ ಕಾಲದಲ್ಲಿ, ನಮ್ಮೆಲ್ಲರ ಕೈಯಲ್ಲಿ ಸ್ಮಾರ್ಟ್‌ಫೋನ್ ಇದೆ ಮತ್ತು ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹಲವಾರು ಅಪ್ಲಿಕೇಶನ್‌ಗಳು ಇರುತ್ತವೆ. ನಿಮ್ಮ ಕುಟುಂಬದ ಸುರಕ್ಷತೆಗಾಗಿ ಡೌನ್‌ಲೋಡ್ ಮಾಡಲಾದ 10 ಫ್ಯಾಮಿಲಿ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳ ಅಪಾಯಕಾರಿ ಫೀಚರ್‌ಗಳ ಬಗ್ಗೆ ಇಂದು ನಾವು ಹೇಳಲಿದ್ದೇವೆ. ಈ ಅಪ್ಲಿಕೇಶನ್‌ಗಳು ನಿಮ್ಮ ಎಲ್ಲಾ ವೈಯಕ್ತಿಕ ಮತ್ತು ಪ್ರಮುಖ ಮಾಹಿತಿಯನ್ನು ಹ್ಯಾಕರ್‌ಗಳಿಗೆ ಕಳುಹಿಸುತ್ತವೆ ಎಂದರೆ ನೀವು ನಂಬಲೇಬೇಕು. ಆದ್ದರಿಂದ ನೀವು ತಕ್ಷಣ ಈ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಬೇಕು. ಈ ಅತ್ಯಂತ ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಯಾವ ಹೆಸರುಗಳನ್ನು ಸೇರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಿ. 
 

1 /10

ಫೈಂಡ್‌ ಮೈ ಕಿಡ್ಸ್‌-ಲೊಕೇಶನ್‌ ಟ್ರ್ಯಾಕರ್‌: ಇದು ಪೋಷಕರು ತಮ್ಮ ಮಕ್ಕಳ ಇರುವ ಸ್ಥಳವನ್ನು ಟ್ರ್ಯಾಕ್ ಮಾಡಲು ಬಳಸುವ ಆಂಡ್ರಾಯ್ಡ್‌ ಅಪ್ಲಿಕೇಶನ್ ಆಗಿದೆ. ನಿಮ್ಮ ಮಕ್ಕಳು ನಿಮ್ಮಿಂದ ದೂರವಿದ್ದರೆ ಈ ಅಪ್ಲಿಕೇಶನ್ ನಿಮಗೆ ತುಂಬಾ ಉಪಯುಕ್ತವಾಗಿದೆ. ನೀವು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದರೆ ಅದನ್ನು ತಕ್ಷಣವೇ ತೆಗೆದುಹಾಕಿ. ಏಕೆಂದರೆ ಅದರಲ್ಲಿ ಅಪಾಯಕಾರಿ ಲಿಂಕ್ ಕಂಡುಬಂದಿದೆ. ಮೊಬೈಲ್ ಸೆಕ್ಯುರಿಟಿ ಫ್ರೇಮ್‌ವರ್ಕ್ ಈ ಅಪ್ಲಿಕೇಶನ್‌ಗೆ 100 ರಲ್ಲಿ 36 ಅಂಕಗಳನ್ನು ಮಾತ್ರ ನೀಡಿದೆ.  

2 /10

ಫೋನ್‌ ಟ್ರ್ಯಾಕರ್‌ ಬೈ ನಂಬರ್‌: ಈ ಆಂಡ್ರಾಯ್ಡ್ ಅಪ್ಲಿಕೇಶನ್‌ನ ಸಹಾಯದಿಂದ ನೀವು ನಿಮ್ಮ ಮಕ್ಕಳನ್ನು ಟ್ರ್ಯಾಕ್ ಮಾಡಬಹುದು. ಅಷ್ಟು ಮಾತ್ರವಲ್ಲ, ಈ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಫೋನ್ ಅನ್ನು ಸಹ ಹುಡುಕಬಹುದು. ನಿಮ್ಮ ಫೋನ್ ಕಳೆದುಹೋದರೆ ಅಥವಾ ಹುಡುಕಲಾಗದಿದ್ದರೆ, ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವುದು ಅಪಾಯಕಾರಿ ಎಂದು ಸಾಬೀತುಪಡಿಸಲಾಗಿದೆ. ಮೊಬೈಲ್ ಸೆಕ್ಯುರಿಟಿ ಫ್ರೇಮ್‌ವರ್ಕ್ ಇದಕ್ಕೆ 100 ರಲ್ಲಿ 36 ಅಂಕಗಳನ್ನು ನೀಡಿದೆ.

3 /10

ಫ್ಯಾಮಿಸೇಫ್-ಪೇರೆಂಟಲ್ ಕಂಟ್ರೋಲ್ ಆಪ್: ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾದ ಈ ಫ್ಯಾಮಿಲಿ ಟ್ರ್ಯಾಕಿಂಗ್ ಅಪ್ಲಿಕೇಶನ್ ಒಂದಲ್ಲ ಎರಡಲ್ಲ ಅನೇಕ ಹ್ಯಾಕಿಂಗ್ ಲಿಂಕ್‌ಗಳನ್ನು ಹೊಂದಿದೆ. ಮೊಬೈಲ್ ಸೆಕ್ಯುರಿಟಿ ಫ್ರೇಮ್‌ವರ್ಕ್‌ನಿಂದ 100 ರಲ್ಲಿ 30 ಸ್ಕೋರ್ ಅನ್ನು ಮಾತ್ರ ನೀಡಲಾಗಿದೆ. 

4 /10

ಫೈಂಡ್‌ ಮೈ ಫೋನ್‌: ಫ್ಯಾಮಿಲಿ ಜಿಪಿಎಸ್‌ ಲೊಕೇಟರ್‌ ಬೈ ಫ್ಯಾಮಿಲೋ: ಈ ಅಪಾಯಕಾರಿ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್‌ ಹಾಗೂ ಆಪ್‌ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಇದನ್ನು ತಕ್ಷಣವೇ ಅಳಿಸಿಹಾಕಿ. ಇಲ್ಲದಿದ್ದರೆ ಡೇಟಾ ಶೇರ್‌ ಆಗುವ ಸಾಧ್ಯತೆಯಿದೆ. ಮೊಬೈಲ್ ಸೆಕ್ಯುರಿಟಿ ನೆಟ್‌ವರ್ಕ್ 45 ರೇಟಿಂಗ್‌ನ್ನು ನೀಡಿದೆ.  

5 /10

ಎಂಎಂ ಗಾರ್ಡಿಯನ್ ಪೇರೆಂಟ್‌ ಅಪ್ಲಿಕೇಶನ್: ಇದು ಪೋಷಕರ ನಿಯಂತ್ರಣ ಅಪ್ಲಿಕೇಶನ್ ಆಗಿದ್ದು, ಪೋಷಕರು ತಮ್ಮ ಮಗುವಿನ ಸ್ಮಾರ್ಟ್‌ಫೋನ್ ಬಳಕೆಯನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಮಕ್ಕಳು ಯಾರೊಂದಿಗೆ ಮಾತನಾಡುತ್ತಿದ್ದಾರೆ, ಯಾವಾಗ ಕರೆ ಮಾಡುತ್ತಿದ್ದಾರೆ, ಯಾವಾಗ ಫೋನ್ ಬಳಸುತ್ತಿದ್ದಾರೆ, ಇದೆಲ್ಲವನ್ನೂ ಈ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು. ಈ ಅಪ್ಲಿಕೇಶನ್ ನಿಮಗೆ ಸುರಕ್ಷಿತವಲ್ಲ ಮತ್ತು ಮೊಬೈಲ್ ಸೆಕ್ಯುರಿಟಿ ಫ್ರೇಮ್‌ವರ್ಕ್‌ನಿಂದ 100 ರಲ್ಲಿ 43 ಅಂಕಗಳನ್ನು ಮಾತ್ರ ಪಡೆದುಕೊಂಡಿದೆ.

6 /10

ಎಂಎಂ-ಗಾರ್ಡಿಯನ್ ಅಪ್ಲಿಕೇಶನ್ ಫಾರ್‌ ಚಿಲ್ಡ್ರನ್‌ ಫೋನ್‌: ಈ ಆಂಡ್ರಾಯ್ಡ್‌ ಅಪ್ಲಿಕೇಶನ್ ಮಗುವಿನ ಫೋನ್‌ನಲ್ಲಿ ಡೌನ್‌ಲೋಡ್ ಆಗುತ್ತದೆ. ಈ ಮೂಲಕ ಮಗುವಿನ ಫೋನಿನಲ್ಲಿ ಏನಾಗುತ್ತಿದೆ,  ಲೊಕೇಶನ್ ಏನು ಇತ್ಯಾದಿ ಎಲ್ಲವನ್ನೂ ತಿಳಿದುಕೊಳ್ಳಬಹುದು. ಈ ಅಪ್ಲಿಕೇಶನ್‌ಗೆ ಮೊಬೈಲ್ ಸೆಕ್ಯುರಿಟಿ ಫ್ರೇಮ್‌ವರ್ಕ್ ಸ್ಕೋರ್ 100 ರಲ್ಲಿ 44 ನೀಡಿದೆ.  

7 /10

ಮೈ ಫ್ಯಾಮಿಲಿ ಲೊಕೇಟರ್ ಜಿಪಿಎಸ್ ಟ್ರ್ಯಾಕರ್: ಈ ಅಪ್ಲಿಕೇಶನ್‌ಗೆ 100 ರಲ್ಲಿ 41 ರೇಟಿಂಗ್‌ ನೀಡಲಾಗಿದೆ. ಬಳಕೆದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಆದರೆ ಡೇಟಾಗಳನ್ನು ರವಾನಿಸುವ ಹಿನ್ನೆಲೆಯಲ್ಲಿ ಇದು ಅಪಾಯಕಾರಿ. 

8 /10

ಪಿಂಗೋ ಬೈ ಫೈಂಡ್‌ ಮೈ ಕಿಡ್ಸ್‌: ನಾವು ಇಲ್ಲಿಯವರೆಗೆ ನಿಮಗೆ ಹೇಳಿದ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಇದು ಅಪಾಯಕಾರಿ ಅಲ್ಲ. ಆದರೆ ಸುರಕ್ಷಿತವಲ್ಲ. ಈ ಅಪ್ಲಿಕೇಶನ್‌ಗಳನ್ನು ಮಕ್ಕಳು ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಬಳಸುತ್ತಾರೆ. ಮೊಬೈಲ್ ಭದ್ರತಾ ಚೌಕಟ್ಟು ಇದಕ್ಕೆ 100 ರಲ್ಲಿ 53 ಅಂಕಗಳನ್ನು ನೀಡಿದೆ.

9 /10

ಫ್ಯಾಮಿಲಿ ಲೊಕೇಟರ್- ಜಿಪಿಎಸ್‌ ಟ್ರ್ಯಾಕರ್ ಮತ್ತು ಫೈಂಡ್‌ ಯುವರ್‌ ಫೋನ್‌ ಅಪ್ಲಿಕೇಶನ್: ನಿಮ್ಮ ಮಕ್ಕಳು ಮತ್ತು ಕುಟುಂಬ ಸದಸ್ಯರ ಸ್ಥಳವನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸಲು ಈ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ. ಈ ಅಪ್ಲಿಕೇಶನ್ ಅನ್ನು ಅನೇಕ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ ಮತ್ತು ನೀವು ಸಹ ಅವರಲ್ಲಿ ಒಬ್ಬರಾಗಿದ್ದರೆ, ಇದು ಹ್ಯಾಕರ್‌ಗಳಿಗೆ ಲಿಂಕ್ ಆಗಿರುವುದರಿಂದ ಇದು ತುಂಬಾ ಅಪಾಯಕಾರಿ. ಮೊಬೈಲ್ ಸೆಕ್ಯುರಿಟಿ ಫ್ರೇಮ್‌ವರ್ಕ್‌ನಲ್ಲಿ ಇದರ ಸ್ಕೋರ್ 100 ರಲ್ಲಿ 43 ಆಗಿದೆ.

10 /10

ಫ್ಯಾಮಿಲಿ ಜಿಪಿಎಸ್ ಟ್ರ್ಯಾಕರ್ ಕಿಡ್ಸ್-ಕಂಟ್ರೋಲ್:  ಇದು ನಿಮ್ಮ ಮಕ್ಕಳು ಮತ್ತು ಇತರ ಕುಟುಂಬ ಸದಸ್ಯರ ಸ್ಥಳವನ್ನು ಟ್ರ್ಯಾಕ್ ಮಾಡಲು ಬಳಸಬಹುದಾದ ಜಿಪಿಎಸ್ ಟ್ರ್ಯಾಕರ್ ಆಗಿದೆ. ಇದು ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಅದನ್ನು ಬಳಸುವುದು ಸುರಕ್ಷಿತವಲ್ಲ. ಇದರ ಸ್ಕೋರ್ ಮೊಬೈಲ್ ಸೆಕ್ಯುರಿಟಿ ಫ್ರೇಮ್‌ವರ್ಕ್‌ನಿಂದ 100 ರಲ್ಲಿ 47 ಆಗಿದೆ.