Type Of Daan: ವಿಶೇಷ ತಿಥಿಯಂದು ಇವುಗಳಲ್ಲಿ ಯಾವುದಾದರೊಂದನ್ನು ದಾನದ ರೂಪದಲ್ಲಿ ನೀಡಿ, ಹಲವು ಪೀಳಿಗೆಗೆ ಲಾಭ ಸಿಗುತ್ತದೆ

Impaortance Of Daan - ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ರಹಸ್ಯವಾಗಿ ಮಾಡಿದ ದಾನಗಳು ಹಲವು ತಲೆಮಾರುಗಳಿಗೆ ಪ್ರಯೋಜನ ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಬಡವರು ಅಥವಾ ನಿರ್ಗತಿಕರಿಗೆ ಬಟ್ಟೆ, ಆಹಾರ ಮತ್ತು ಹಸುಗಳನ್ನು ದಾನ ಮಾಡುವ ಕುರಿತಾದ ವಿಶೇಷ ಮಹತ್ವವನ್ನು ಹೇಳಲಾಗಿದೆ. 

Impaortance Of Daan - ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ರಹಸ್ಯವಾಗಿ ಮಾಡಿದ ದಾನಗಳು ಹಲವು ತಲೆಮಾರುಗಳಿಗೆ ಪ್ರಯೋಜನ ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಬಡವರು ಅಥವಾ ನಿರ್ಗತಿಕರಿಗೆ ಬಟ್ಟೆ, ಆಹಾರ ಮತ್ತು ಹಸುಗಳನ್ನು ದಾನ ಮಾಡುವ ಕುರಿತಾದ ವಿಶೇಷ ಮಹತ್ವವನ್ನು ಹೇಳಲಾಗಿದೆ. ಅಮವಾಸ್ಯೆ, ಶ್ರಾದ್ಧ, ಮಕರ ಸಂಕ್ರಾಂತಿ, ಗ್ರಹಣ ಮುಂತಾದ ವಿಶೇಷ ದಿನಗಳ ಸಂದರ್ಭಗಳಲ್ಲಿ ಮಾಡುವ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಈ ಕೆಳಗೆ ಸೂಚಿಸಲಾದ 7 ವಿಧದ ದಾನಗಳು ವಿಶೇಷ ಪ್ರಯೋಜನಗಳನ್ನು ನೀಡುತ್ತವೆ.

 

ಇದನ್ನೂ ಓದಿ-Shani Dev Vehicle: ಶನಿ ದೇವನ ಈ 9 ವಾಹನಗಳು ಭಾಗ್ಯ ನಿರ್ಧರಿಸುತ್ತವೆ, ಯಾವ ವಾಹನ ಯಾವ ಶುಭ-ಅಶುಭ ಸಂಕೇತಗಳನ್ನು ನೀಡುತ್ತದೆ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಅನ್ನದಾನ- ಆಹಾರ ಧಾನ್ಯಗಳನ್ನು ದಾನ ಮಾಡುವುದು ಕೂಡ ತುಂಬಾ ಮುಖ್ಯ. ಧಾನ್ಯಗಳನ್ನು ದಾನ ಮಾಡುವುದರಿಂದ ಲಕ್ಷ್ಮಿ ಮತ್ತು ತಾಯಿ ಅನ್ನಪೂರ್ಣ ಇಬ್ಬರ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಸಂಕಲ್ಪದಿಂದ ಧಾನ್ಯವನ್ನು ಮಾಡಿ ದಾನ ಮಾಡಿದರೆ, ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ.

2 /7

ಬೆಲ್ಲ ದಾನ- ಮನೆಯಲ್ಲಿನ ಅಪಸ್ವರ ಹೋಗಲಾಡಿಸಲು ಜೋತಿಷ್ಯ ಶಾಸ್ತ್ರದಲ್ಲಿ ಬೆಲ್ಲದ ದಾನದ ಕುರಿತು ಹೇಳಲಾಗಿದೆ. ಇದೇ ವೇಳೆ, ಬೆಲ್ಲವನ್ನು ದಾನ ಮಾಡುವುದರಿಂದ ವ್ಯಕ್ತಿಯ ಬಡತನವು ನಿವಾರಣೆಯಾಗುತ್ತದೆ ಮತ್ತು ಧನಾಗಮನಕ್ಕೆ ದಾರಿ ತೆರೆಯುತ್ತದೆ. ಇನ್ನೊಂದೆಡೆ ಬೆಲ್ಲವನ್ನು ದಾನ ಮಾಡುವುದರಿಂದ ಸಂತೋಷ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

3 /7

ಎಳ್ಳು ದಾನ- ಸನಾತನ ಧರ್ಮದಲ್ಲಿ ಎಳ್ಳು ದಾನದ ವಿಶೇಷ ಮಹತ್ವವನ್ನು ಹೇಳಲಾಗಿದೆ. ಅಮವಾಸ್ಯೆ ಇತ್ಯಾದಿಗಳಂದು ಎಳ್ಳನ್ನು ದಾನ ಮಾಡುವ ವಿಶೇಷ ಮಹತ್ವವನ್ನು ತಿಳಿಸಲಾಗಿದೆ. ವಿಶೇಷವಾಗಿ ಶ್ರಾದ್ಧ ಇತ್ಯಾದಿ ಸಮಯದಲ್ಲಿ ಅಥವಾ ವ್ಯಕ್ತಿಯ ಮರಣದ ಸಮಯದಲ್ಲಿ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ವ್ಯಕ್ತಿಗೆ ಹಲವು ತೊಂದರೆಗಳು ಮತ್ತು ವಿಪತ್ತುಗಳಿಂದ ರಕ್ಷಣೆ ಸಿಗುತ್ತದೆ.

4 /7

ವಸ್ತ್ರದಾನ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಸ್ತ್ರದಾನ ಮಾಡುವುದರಿಂದ ವ್ಯಕ್ತಿಯ ಜೀವನದ ಸಮಸ್ಯೆಗಳು ಅಂತ್ಯಗೊಳ್ಳುತ್ತವೆ ಮತ್ತು ಹಲವು ರೀತಿಯ ಯಶಸ್ಸು ಪ್ರಾಪ್ತಿಯಾಗುತ್ತದೆ. ಬಡವರಿಗೆ ಮತ್ತು ನಿರ್ಗತಿಕರಿಗೆ ಹೊಸ ಮತ್ತು ಶುದ್ಧ ಬಟ್ಟೆಗಳನ್ನು ದಾನ ಮಾಡುವುದರಿಂದ ಸಾಕಷ್ಟು ಪ್ರಯೋಜನ ಸಿಗುತ್ತದೆ. ವ್ಯಕ್ತಿಯ ಸ್ಥಗಿತಗೊಂಡ ಕೆಲಸವು ಪೂರ್ಣಗೊಳ್ಳುತ್ತದೆ.

5 /7

ಉಪ್ಪು ದಾನ- ಉಪ್ಪನ್ನು ದಾನದ ರೂಪದಲ್ಲಿ ನೀಡುವುದು ಕೂಡ ವಿಶೇಷ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಶ್ರಾದ್ಧದ ಸಮಯದಲ್ಲಿ ಉಪ್ಪಿನ ದಾನದ ಪ್ರಾಮುಖ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ.

6 /7

ತುಪ್ಪ ದಾನ- ತುಪ್ಪ ದಾನಕ್ಕೂ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಟುಂಬದಲ್ಲಿ ಶುಭ ಮತ್ತು ಮಂಗಳಕರ ಫಲಗಳಿಗಾಗಿ ಅಗತ್ಯವಿರುವವರಿಗೆ ಹಸುವಿನ ತುಪ್ಪವನ್ನು ದಾನ ಮಾಡಿ. ಇದು ಮನೆಯ ಸದಸ್ಯರ ಪ್ರಗತಿಗೆ ದಾರಿ ತೆರೆಯುತ್ತದೆ.

7 /7

ಗೋದಾನ- ಗೋದಾನದ ವಿಶೇಷ ಮಹತ್ವವನ್ನು ಸನಾತನ ಧರ್ಮದಲ್ಲಿ ಹೇಳಲಾಗಿದೆ. ಗೋದಾನವನ್ನು ಶ್ರೇಷ್ಠ ದಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಜನ್ಮದಲ್ಲಿ ಯಾವುದೇ ಶುಭ ದಿನಾಂಕದಂದು ಹಸುವನ್ನು ದಾನ ಮಾಡುವುದರಿಂದ ಅನೇಕ ಜನ್ಮಗಳಿಗೆ ಮತ್ತು ಅನೇಕ ಪೀಳಿಗೆಗಳಿಗೆ ಪ್ರಯೋಜನಕಾರಿಯಾಗಿದೆ. ಸುಖ, ಆಸ್ತಿ ಮತ್ತು ಸಂಪತ್ತು ಪ್ರಾಪ್ತಿಯಾಗಲು ಗೋವನ್ನು ದಾನ ಮಾಡುವುದು ಮಂಗಳಕರ.