ಮಹಿಳೆಯೊಬ್ಬಳು ಕುದುರೆ ಜೊತೆ ಕುಳಿತಿದ್ದಾಳೆ ಎಂದು ಭಾವಿಸಿದ್ದೀರಾ? ಆದರೆ ಇದು ಕುದುರೆಯಲ್ಲ. ತನ್ನ ಸಾಕು ನಾಯಿಯೊಂದಿಗೆ ಆಕೆ ಕುಳಿತಿರುವುದು. ಶ್ವಾನ ಪ್ರೇಮಿಗಳು ಈ ತಳಿಯನ್ನು ಒಂದು ನೋಟದಲ್ಲಿ ಗುರುತಿಸುತ್ತಾರೆ. ಇದರ ಹೆಸರು ಜೀಯಸ್. ಜೀಯಸ್ ವಿಶ್ವದ ಅತಿ ಎತ್ತರದ ನಾಯಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಜೀಯಸ್ ಹೆಸರು ದಾಖಲಾಗಿದೆ
ಜೀಯಸ್ ಗ್ರೇಟೆನ್ ತಳಿಯ ನಾಯಿ. ನಾಯಿಯ ಈ ತಳಿಯು ಅದರ ದೊಡ್ಡ ಗಾತ್ರಕ್ಕೆ ಹೆಸರುವಾಸಿಯಾಗಿದೆ.
ಬ್ರಿಟಾನಿ ಡೇವಿಸ್ ಎಂಬವರು ಬಾಲ್ಯದಿಂದಲೂ ಗ್ರೇಟೆನ್ ತಳಿಯ ನಾಯಿಯನ್ನು ಸಾಕಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರು. ಒಂದು ದಿನ ಅವರ ಸಹೋದರ ಆಕೆಗೆ ಜೀಯಸ್ನನ್ನು ಉಡುಗೊರೆಯಾಗಿ ನೀಡಿದಾಗ ಅವರ ಕನಸು ನನಸಾಯಿತು. ಬ್ರಿಟಾನಿ ಮತ್ತು ಅವರ ಕುಟುಂಬ ಟೆಕ್ಸಾಸ್ನಲ್ಲಿ ವಾಸಿಸುತ್ತಿದ್ದಾರೆ.
ಜೀಯಸ್ 1 ಮೀಟರ್ಗಿಂತ ಹೆಚ್ಚು ಉದ್ದವಾಗಿದೆ. ಈ ನಾಯಿಯು ಇತರ ನಾಯಿಗಳ ಜೊತೆಯೂ ಮುದ್ದಾಗಿ ಬೆರೆದು ಆಟವಾಡುತ್ತದೆಯಂತೆ.
ನಮ್ಮ ಅಂಗಸಂಸ್ಥೆ ವೆಬ್ಸೈಟ್ WION ಪ್ರಕಾರ, ಬ್ರಿಟಾನಿ ಅವರು ಮತ್ತು ಅವರ ಕುಟುಂಬವು ಜೀಯಸ್ ವಿಶ್ವದ ಅತಿ ಎತ್ತರದ ನಾಯಿ ಎಂದು ಭಾವಿಸಿರಲಿಲ್ಲ. ಅವರು ಕುಟುಂಬ ಸಮಾರಂಭದಲ್ಲಿ ಭಾಗವಹಿಸಿದಾಗ ಯಾರೋ ಅದರ ಬಗ್ಗೆ ಮಾತನಾಡಿದರು. ಇದರ ನಂತರ, ಜೀಯಸ್ ಅನ್ನು ಅಳತೆ ಮಾಡಿದಾಗ, ಅವನು ವಾಸ್ತವವಾಗಿ ಇಡೀ ಪ್ರಪಂಚದಲ್ಲಿ ದೀರ್ಘಕಾಲ ಬದುಕಿರುವ ಗಂಡು ನಾಯಿ ಮತ್ತು ಎತ್ತರವಾಗಿರುವ ನಾಯಿ ಎಂದು ತಿಳಿಯಿತಂತೆ.
ಗ್ರೇಟೆನ್ ತಳಿಯ ನಾಯಿಯನ್ನು ಸಾಕಲು ಬಯಸುವವರಿಗೆ, ಬ್ರಿಟಾನಿ ಕೆಲ ಸಲಹೆಗಳನ್ನು ನೀಡಿದ್ದಾರೆ. ಆಹಾರಕ್ಕಾಗಿ ಉತ್ತಮ ವ್ಯವಸ್ಥೆ ಮಾಡಬೇಕು. ಏಕೆಂದರೆ ಗ್ರೇಟೆನ್ ತಳಿಯು ಹೆಚ್ಚು ಆಹಾರ ಸೇವನೆ ಮಾಡುತ್ತದೆ ಎಂದಿದ್ದಾರೆ.