Business Idea: ಒಂದು ವೇಳೆ ನಿಮಗೂ ಕೂಡ ಜಾನುವಾರಗಳ ಮೇಲೆ ಪ್ರೀತಿ ಇದ್ದರೆ, ಅವುಗಳಿಗೆ ಸಂಬಂಧಿಸಿದ ಈ ಉಯಮವನ್ನು ನೀವು ಆರಂಭಿಸಬಹುದು. ಇದರಿಂದ ಸ್ವಂತ ಉದ್ಯಮ ಆರಂಭಿಸುವ ನಿಮ್ಮ ಕನಸು ಕೂಡ ನನಸಾಗಲಿದ್ದು, ಲಕ್ಷಾಂತರ ರೂ. ಆದಾಯ ಕೂಡ ನಿಮ್ಮದಾಗಲಿದೆ.
Business Idea: ಇಂದು ನಾವು ನಿಮಗಾಗಿ ಅಂತಹುದೇ ಒಂದು ಉದ್ಯಮದ ಪರಿಕಲ್ಪನೆಯನ್ನು ಹೇಳಿಕೊಡಲಿದ್ದು, ತನ್ಮೂಲಕ ನೀವು ಲಕ್ಷಾಂತರ ಗಳಿಕೆಯನ್ನು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಈ ಉದ್ಯಮ ಅತ್ಯುತ್ತಮವಾಗಿ ಸಾಗುತ್ತಿದೆ. ಈ ಬಿಸ್ನೆಸ್ ಹೆಸರು ಮೊಲ ಸಾಕಾಣಿಕೆಯ ಉದ್ಯಮ. ಮೊಲ ಸಾಕಾಣಿಕೆ ಉದ್ಯಮದಲ್ಲಿ ನೀವು ನಿಮ್ಮ ಲಕ್ ಅನ್ನು ಟ್ರೈ ಮಾಡಬಹುದು. ಈ ಉದ್ಯಮದ ವಿಶೇಷತೆ ಎಂದರೆ. ಇದನ್ನು ನೀವು ಅತ್ಯಲ್ಪ ಹೂಡಿಕೆಯಲ್ಲಿ ಆರಂಭಿಸಿ, ಜಬರ್ದಸ್ತ್ ಲಾಭ ಪಡೆದುಕೊಳ್ಳಬಹುದು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನೀವೂ ಕೂಡ ಸಾಕು ಪ್ರಾಣಿ ಪ್ರಿಯರಾಗಿದ್ದರೆ, ನೀವು ಮೊಲ ಸಾಕಾಣಿಕೆಯಉದ್ಯಮವನ್ನು ಆರಂಭಿಸಬಹುದು. ಕೇವಲ ನಾಲ್ಕು ಲಕ್ಷ ರೂ.ಗಳ ಆರಂಭಿಕ ಹೂಡಿಕೆಯ ಮೂಲಕ ನೀವು ಈ ಉದ್ಯಮವನ್ನು ಆರಂಭಿಸಬಹುದು. ಮೊಲಗಳ ಮೈಮೇಲಿರುವ ಕೂದಲುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಮೊಲ ಸಾಕಾಣಿಕೆ ಉದ್ಯಮದಲ್ಲಿ ಯುನಿಟ್ ಅಥವಾ ಘಟಕಗಳ ಆಧಾರದ ಮೇಲೆ ಮೊಲಗಳನ್ನು ಸಾಕಲಾಗುತ್ತದೆ. ಪ್ರತಿಯೊಂದು ಯುನಿಟ್ ನಲ್ಲಿ 3 ಗಂಡು ಮತ್ತು 7 ಹೆಚ್ಚು ಮೊಲಗಳಿರುತ್ತವೆ. ಈ ಉದ್ಯಮದಲ್ಲಿ ನೀವು ಹೆಚ್ಚಿಗೆ ಕಷ್ಟಪಡಬೇಕಾಗಿಲ್ಲ. ಪಂಜರಗಳ ಸ್ವಚ್ಚತೆ ಹಾಗೂ ಮೊಲಗಳಿಗೆ ಆಹಾರ ನೀಡಲು ಸಹಾಯಕರನ್ನು ನೇಮಿಸಿಕೊಳ್ಳಬಹುದು.
ಮೊಲಗಳ 10 ಯುನಿಟ್ ಸ್ಥಾಪನೆಗೆ ನಿಮಗೆ 2 ಲಕ್ಷ ರೂ. ಹೂಡಿಕೆ ಬೇಕಾಗಲಿದೆ. ಶೆಡ್ ಸ್ಥಾಪಿಸಲು 1.5 ಲಕ್ಷ ರೂ. ವೆಚ್ಚ ತಗುಲಲಿದೆ. ಇದೆ ರೀತಿ ಪಂಜರಗಳಿಗಾಗಿ ನೀವು 1 ರಿಂದ 1.25 ಲಖ ರೂ ಹೂಡಿಕೆ ಮಾಡಬೇಕು. ಒಂದು ಹೆಣ್ಣು ಮೊದಲ 30 ದಿನಗಳ ಗರ್ಭಾವಸ್ಥೆಯ ನಂತರೆ 6-7 ಮರಿಗಳಿಗೆ ಜನ್ಮ ನೀಡುತ್ತದೆ. ಹುಟ್ಟಿದ 45 ದಿನಗಳ ಬಳಿಕ ಒಂದು ಮರಿ 2 ಕೆ.ಜಿ ತೂಕ ಪಡೆದುಕೊಳ್ಳುತ್ತದೆ. ಅದನ್ನು ನೀವು ಮಾರಾಟ ಮಾಡಬಹುದು. ಈ ಬಿಸ್ನೆಸ್ ನಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ನಂತರ, ನೀವು ಹೆಚ್ಚಿನ ಹೂಡಿಕೆ ಮಾಡಬೇಕಾಗಿಲ್ಲ.
ಈ ಉದ್ಯಮದಲ್ಲಿ ಸಿಗುವ ಆದಾಯದ ಕುರಿತು ಹೇಳುವುದಾದರೆ, ವರ್ಷದಲ್ಲಿ ಒಂದು ಹೆಣ್ಣು ಮೊಲ 7 ಮರಿಗಳಿಗೆ ಜನ್ಮ ನೀಡುತ್ತದೆ. ಸರಾಸರಿ ಒಂದು ವೇಳೆ ಒಂದು ಹೆಣ್ಣು ಮೊಲ 5 ಮರಿಗಳಿಗೆ ಜನ್ಮ ನೀಡಿದರೂ ಕೂಡ 7 ಹೆಣ್ಣು ಮೊಲಗಳು ಒಟ್ಟು 45 ಮೊಲಗಳಿಗೆ ಜನ್ಮ ನೀಡುತ್ತವೆ. ಅಂದರೆ, ಮೊಲದ ಒಂದು ಮರಿ ನಿಮಗೆ 2 ಲಕ್ಷ ರೂ. ಗಳಿಕೆ ಮಾಡಿ ಕೊಡಲಿದೆ. ಫಾರ್ಮ್ ಬ್ರೀಡಿಂಗ್ ಹಾಗೂ ನೂಲಿಗಾಗಿ ಈ ಮೊಲಗಳು ಬಳಕೆಯಾಗುತ್ತವೆ. ಹೀಗಾಗಿ ಮೊಲ ಸಾಕಾಣಿಕೆಯಿಂದ ನೀವು ಉತ್ತಮ ಆದಾಯ ಗಳಿಸಬಹುದು.
ಒಂದು ವರ್ಷದ ಒಟ್ಟು ಲಾಭದ ಕುರಿತು ಹೇಳುವುದಾದರೆ. ಕೇವಲ ಮೊಲಗಳ ಮರಿಗಳನ್ನು ಮಾರಾಟ ಮಾಡಿ ನೀವು 10 ಲಕ್ಷ ರೂ. ಗಳಿಕೆ ಮಾಡಬಹುದು. ಇದರಲ್ಲಿ 2 ರಿಂದ 3 ಲಕ್ಷ ರೂ. ಮೊಲಗಳ ಆಹಾರ ಹಾಗೂ ಅವುಗಳನ್ನು ನೋಡಿಕೊಳ್ಳಲು ಖರ್ಚಾಗುತ್ತದೆ. ಈ ರೀತಿ ಮೊಲಗಳ ಮರಿಗಳ ಮಾರಾಟದಿಂದ ನಿಮಗೆ ಸುಮಾರು 8 ಲಕ್ಷ ಲಾಭ ಸಿಗಲಿದೆ.
ಈ ಉದ್ಯಮವನ್ನು ಆರಂಭಿಸಲು ನೀವು ತರಬೇತಿ ಕೂಡ ಪಡೆಯಬಹುದು. ಈ ಉದ್ಯಮದ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ, ನಿಮ್ಮ ಬಳಿ ಫ್ರೇಂಚೈಸಿ ಅಆಯ್ಕೆ ಕೂಡ ಇದೆ. ಅಲ್ಲಿ ನಿಮಗೆ ರಾಬಿಟ್ ಬ್ರೀಡಿಂಗ್ ನಿಂದ ಹಿಡಿದು ಅವುಗಳ ಮಾರ್ಕೆಟಿಂಗ್ ವರೆಗೆ ಎಲ್ಲಾ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ. ಅಂದರೆ, ಅತ್ಯಂತ ಚಾಕಚಕ್ಯತೆಯಿಂದ ನೀವು ಈ ಉದ್ಯಮವನ್ನು ನಡೆಸಬಹುದು ಹಾಗೂ ಲಕ್ಷಾಂತರ ರೂಪಾಯಿ ಗಳಿಕೆ ಮಾಡಬಹುದು.