ಯಶ್ ಜೊತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ ಪೂಜಾ ಹೆಗ್ಡೆ!

Pooja Hegde: ಮೂಲತಃ ಕರ್ನಾಟಕದವರೇ ಆಗಿರುವ ನಟಿ ಪೂಜಾ ಹೆಗ್ಡೆ ಇದೂವರೆಗೂ ಒಂದೂ ಕನ್ನಡ ಸಿನಿಮಾ ಮಾಡಿಲ್ಲ. 

Pooja Hegde: ಮೂಲತಃ ಕರ್ನಾಟಕದವರೇ ಆಗಿರುವ ನಟಿ ಪೂಜಾ ಹೆಗ್ಡೆ ಇದೂವರೆಗೂ ಒಂದೂ ಕನ್ನಡ ಸಿನಿಮಾ ಮಾಡಿಲ್ಲ. ಇದೀಗ ಈ ಬೆಡಗಿಯ ಬಗ್ಗೆ ಗಾಸಿಪ್‌ ಒಂದು ಹುಟ್ಟಿಕೊಂಡಿದೆ. ಅದೇನೆಂದರೆ ನಟಿ ಪೂಜಾ ಹೆಗ್ಡೆ ಕನ್ನಡದ ರಾಕಿಂಗ್ ಸ್ಟಾರ್​ ಯಶ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. 

1 /5

ಮೂಲತಃ ಕರ್ನಾಟಕದವರೇ ಆಗಿರುವ ನಟಿ ಪೂಜಾ ಹೆಗ್ಡೆ ಇದೂವರೆಗೂ ಒಂದೂ ಕನ್ನಡ ಸಿನಿಮಾ ಮಾಡಿಲ್ಲ. ಇದೀಗ ಈ ಬೆಡಗಿಯ ಬಗ್ಗೆ ಗಾಸಿಪ್‌ ಒಂದು ಹುಟ್ಟಿಕೊಂಡಿದೆ. ಅದೇನೆಂದರೆ ನಟಿ ಪೂಜಾ ಹೆಗ್ಡೆ ಕನ್ನಡದ ರಾಕಿಂಗ್ ಸ್ಟಾರ್​ ಯಶ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. 

2 /5

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿ, ವಿಶ್ವಾದ್ಯಂತ ಜನರ ಮನಗೆದ್ದ ಕೆಜಿಎಫ್-2 ಚಿತ್ರದ ಬಳಿಕ ಯಶ್ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಈ ಬೆನ್ನಲ್ಲೆ ಅವರು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಅದು ಕೂಡ ಮಾಸ್ ಚಿತ್ರ ನಿರ್ದೇಶಕ ನರ್ತನ್ ಅವರದ್ದು, ಎಂಬುದು ವಿಶೇಷ. 

3 /5

ಸ್ಯಾಂಡಲ್​ವುಡ್​ನಲ್ಲಿ ಮಫ್ತಿ ಹೆಸರಿನ ಬ್ಲಾಕ್ ಬ್ಲಸ್ಟರ್ ಚಿತ್ರ ನೀಡಿದ್ದ ಡೈರೆಕ್ಟರ್‌ ನರ್ತನ್ ಈಗಾಗಲೇ ಯಶ್​ಗಾಗಿ ಕಥೆ ರೆಡಿ ಮಾಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹೊಸ ಸಿನಿಮಾದ ಚಿತ್ರಕಥೆಯನ್ನು ಯಶ್‌ ಕೇಲಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಸಹ ನೀಡಿದ್ದಾರಂತೆ. 

4 /5

ಈ ಸಿನಿಮಾದ ಮೂಲಕವೇ ಕರುನಾಡ ಬೆಡಗಿ ಪೂಜಾ ಹೆಗ್ಡೆ ಚಂದನವನಕ್ಕೆ ಕಾಲಿಡಲಿದ್ದಾರೆ ಎಂಬ ಗಾಸಿಪ್‌ ಒಂದು ಬಲು ಜೋರಾಗಿದೆ. ಯಶ್‌ ಅಭಿನಯದ ಈ ಹೊಸ ಚಿತ್ರದಲ್ಲಿ ಸೌತ್ ಸುಂದರಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್​ನಿಂದ ಕೇಳಿ ಬಂದಿದೆ. ಮೂಲಗಳ ಪ್ರಕಾರ, ಪೂಜಾ ಹೆಗ್ಡೆ ಅವರನ್ನು ಚಿತ್ರ ತಂಡ ಈಗಾಗಲೇ ಭೇಟಿಯಾಗಿ ಮಾತುಕತೆ ಕೂಡ ನಡೆಸಿದೆಯಂತೆ. 

5 /5

ಪೂಜಾ ಹೆಗ್ಡೆ ಕೈಯಲ್ಲಿ ಸದ್ಯ ನಾಲ್ಕು ಚಿತ್ರಗಳಿವೆ. ಎರಡು ಬಾಲಿವುಡ್ ಚಿತ್ರಗಳಲ್ಲಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಸ್ ಚಿತ್ರದಲ್ಲಿ ರಣಬೀರ್ ಕಪೂರ್​ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಕಭಿ ಈದ್, ಕಭಿ ದಿವಾಳಿ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ.