ರಾಜ್ಯಸಭಾ ಚುನಾವಣಾ ಫಲಿತಾಂಶ: ಬಿಜೆಪಿ 03, ಕಾಂಗ್ರೆಸ್ 01, ಶೂನ್ಯ ಸುತ್ತಿದ ಜೆಡಿಎಸ್

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು ತಾನು ಸ್ಪರ್ಧಿಸಿದ್ದ ಎಲ್ಲಾ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ನಾಲ್ಕು ಸ್ಥಾನಗಳಿಗಾಗಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಒಂದರಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಇನ್ನೊಂದೆಡೆಗೆ ಗೆಲ್ಲಲು ಸೂಕ್ತ ನಂಬರ್ ಇಲ್ಲದಿದ್ದರೂ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದ ಜೆಡಿಎಸ್ ಪಕ್ಷವು ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.

Written by - Zee Kannada News Desk | Last Updated : Jun 11, 2022, 12:55 AM IST
  • ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಜ್ಯಾತ್ಯಾತೀತ ಮತಗಳ ವಿಭಜನೆಯಿಂದಾಗಿ ಬಿಜೆಪಿ ಸುಲಭವಾಗಿ ಮೂರನೇ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
  • ನಾಲ್ಕನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಸಿರೋಯಾ (ಬಿಜೆಪಿಯ ಮೂರನೇ ಅಭ್ಯರ್ಥಿ), ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ) ಮತ್ತು ಡಿ ಕುಪೇಂದ್ರ ರೆಡ್ಡಿ (ಜೆಡಿಎಸ್‌ನ ಏಕೈಕ ಅಭ್ಯರ್ಥಿ) ನಡುವೆ ನೇರ ಸ್ಪರ್ಧೆ ಕಂಡುಬಂದಿತು.
ರಾಜ್ಯಸಭಾ ಚುನಾವಣಾ ಫಲಿತಾಂಶ: ಬಿಜೆಪಿ 03, ಕಾಂಗ್ರೆಸ್ 01, ಶೂನ್ಯ ಸುತ್ತಿದ ಜೆಡಿಎಸ್  title=
Photo Courtsey: Twitter

ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು ತಾನು ಸ್ಪರ್ಧಿಸಿದ್ದ ಎಲ್ಲಾ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ನಾಲ್ಕು ಸ್ಥಾನಗಳಿಗಾಗಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಒಂದರಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಇನ್ನೊಂದೆಡೆಗೆ ಗೆಲ್ಲಲು ಸೂಕ್ತ ನಂಬರ್ ಇಲ್ಲದಿದ್ದರೂ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದ ಜೆಡಿಎಸ್ ಪಕ್ಷವು ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಜ್ಯಾತ್ಯಾತೀತ ಮತಗಳ ವಿಭಜನೆಯಿಂದಾಗಿ ಬಿಜೆಪಿ ಸುಲಭವಾಗಿ ಮೂರನೇ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಬಿಜೆಪಿ ಕಣಕ್ಕೆ ಇಳಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ-ರಾಜಕಾರಣಿ ಜಗ್ಗೇಶ್, ಮತ್ತು ನಿರ್ಗಮಿತ ಎಂಎಲ್‌ಸಿ ಲೆಹರ್ ಸಿಂಗ್ ಸಿರೋಯಾ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸುಲಭವಾಗಿ ಗೆಲುವು ಸಾಧಿಸಿದ್ದಾರೆ.ಇನ್ನೊಂದೆಡೆಗೆ ಕಾಂಗ್ರೆಸ್ ಪರವಾಗಿ ಜೈರಾಮ್ ರಮೇಶ್ ಅವರು ಗೆಲುವಿನ ನಗೆ ಬೀರಿದ್ದಾರೆ.

ಇದನ್ನೂ ಓದಿ: Chaddi Campaign: ಚಡ್ಡಿ ಸುಟ್ಟು ಶಾಸಕ ಪಿ.ರಾಜೀವ್ ಮನೆಮುಂದೆ ಬೂದಿ ಇಟ್ಟರು!

ಈಗ ಈ ಗೆಲುವಿನೊಂದಿಗೆ ನಿರ್ಮಲಾ ಸೀತಾರಾಮನ್ ಮೂರನೇ ಬಾರಿಗೆ ರಾಜ್ಯಸಭಾ ಪ್ರವೇಶ ಪಡೆದರೆ, ಜೈ ರಾಮ್ ರಮೇಶ್ ಅವರು ನಾಲ್ಕನೇ ಬಾರಿಗೆ ರಾಜ್ಸಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಇನ್ನೊಂದೆಡೆಗೆ ಜಗ್ಗೇಶ್ ಮತ್ತು ಸಿರೋಯಾ ಅವರು ಇದೆ ಮೊದಲ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸುತ್ತಿದ್ದಾರೆ.

ಸಂಖ್ಯೆಗಳ ಬಲಾಬಲಗಳ ಲೆಕ್ಕಾಚಾರದ ಆಧಾರದ ಮೇಲೆ ಮೂರು ಸ್ಥಾನಗಳ ಫಲಿತಾಂಶ ಆಗಲೇ ಸ್ಪಷ್ಟವಾಗಿತ್ತು, ಆದರೆ ನಾಲ್ಕನೇ ಸ್ಥಾನಕ್ಕೆ ಯಾರಿಗೂ ಕೂಡ ಸೂಕ್ತ ನಂಬರ್ ಗಳು ಇಲ್ಲದ ಕಾರಣ ಗೆಲುವಿನ ಲೆಕ್ಕಾಚಾರ ಒಂದು ರೀತಿ ನಿಗೂಡವಾಗಿತ್ತು, ಇನ್ನೊಂದೆಡೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಗ್ಗೂಡದೆ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಒಂದು ರೀತಿಯಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಿತು ಎಂದು ಹೇಳಬಹುದು.

ನಾಲ್ಕನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಸಿರೋಯಾ (ಬಿಜೆಪಿಯ ಮೂರನೇ ಅಭ್ಯರ್ಥಿ), ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ) ಮತ್ತು ಡಿ ಕುಪೇಂದ್ರ ರೆಡ್ಡಿ (ಜೆಡಿಎಸ್‌ನ ಏಕೈಕ ಅಭ್ಯರ್ಥಿ) ನಡುವೆ ನೇರ ಸ್ಪರ್ಧೆ ಕಂಡುಬಂದಿತು.

ಅಧಿಕೃತ ಮೂಲಗಳ ಪ್ರಕಾರ, ತಲಾ 46 ಶಾಸಕರ ಬೆಂಬಲದೊಂದಿಗೆ ನಿರ್ಮಲಾ ಸೀತಾರಾಮನ್ ಮತ್ತು ಜೈ ರಮೇಶ್ ತಲಾ 4,600 ಮತಗಳನ್ನು ಪಡೆದರೆ, ಜಗ್ಗೇಶ್ 44 ಶಾಸಕರ ಬೆಂಬಲದೊಂದಿಗೆ 4,400 ಮತಗಳನ್ನು ಪಡೆದರು. 33 ಶಾಸಕರ ಬೆಂಬಲ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳೊಂದಿಗೆ ಸಿರೋಯಾ ಒಟ್ಟು 3,617 ಮತಗಳನ್ನು ಪಡೆದರು. ಇನ್ನೊಂದೆಡೆಗೆ ಜೆಡಿಎಸ್ ನ ಡಿ ಕುಪೇಂದ್ರ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ಮನ್ಸೂರ್ ಅಲಿ ಖಾನ್ ಕ್ರಮವಾಗಿ 3,000 ಮತ್ತು 2,592 ಮತಗಳನ್ನು ಗಳಿಸಿದರು (ಮೊದಲ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳ ಸಂಯೋಜನೆ). 

ಇದನ್ನೂ ಓದಿ: ಪ್ರವಾದಿ ಮಹಮ್ಮದ್ ಅವಹೇಳನ: ನಡುರಸ್ತೆಯಲ್ಲೇ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಿದ ಕಿಡಿಗೇಡಿಗಳು!

ಮತದಾನಕ್ಕೂ ಮುನ್ನ ಎಲ್ಲಾ ರಾಜಕೀಯ ಪಕ್ಷಗಳು ವಿಪ್ ಜಾರಿ ಮಾಡಿ ತಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಶಾಸಕರಿಗೆ ಸೂಚಿಸಿದ್ದವು. ಆದರೆ ಈ ಎಲ್ಲಾ ಪ್ರಯತ್ನಗಳ ನಡುವೆಯೂ ಜೆಡಿಎಸ್ ಶಾಸಕ ಕೆ ಶ್ರೀನಿವಾಸ್ ಗೌಡ ಅವರು ಪಕ್ಷದ ಆದೇಶವನ್ನು ಧಿಕ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೂಲಗಳ ಪ್ರಕಾರ, ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಜಿದ್ದಾಜಿದ್ದಿಯು ಬಿಜೆಪಿಯ ಅಭ್ಯರ್ಥಿ ಸಿರೋಯಾ ಅವರು ನಾಲ್ಕನೇ ಸ್ಥಾನವನ್ನು ಗೆಲ್ಲಲು ಕಾರಣವಾಯಿತು ಎನ್ನಲಾಗಿದೆ.

ಬಿಜೆಪಿಯ ನಿರ್ಮಲಾ ಸೀತಾರಾಮನ್ ಮತ್ತು ಕೆ ಸಿ ರಾಮಮೂರ್ತಿ ಮತ್ತು ಜೈರಾಮ್ ರಮೇಶ್ ಅವರ ಅಧಿಕಾರಾವಧಿಯು ಜೂನ್ 30 ರಂದು ಮುಕ್ತಾಯಗೊಳ್ಳಲಿರುವುದರಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯು ಅನಿವಾರ್ಯವಾಗಿತ್ತು. ಕಾಂಗ್ರೆಸ್‌ನ ನಾಲ್ಕನೇ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಕಳೆದ ವರ್ಷ ನಿಧನರಾಗಿದ್ದರಿಂದ ಆ ಸ್ಥಾನವು ತೆರವಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News