ಎಂತಹದ್ದೇ ಬಿಸಿಲಿಗೂ ಈ ಬಾಟಲಿಯಲ್ಲಿ ನೀರು ಶೇಖರಿಸಿಟ್ಟರೆ ಅದು ತಣ್ಣಗೆಯೇ ಇರುತ್ತದೆ. ಇಂತಹ ನೂತನ ಐದು ಬಾಟಲಿಗಳು ಮಾರುಕಟ್ಟೆಯಲ್ಲಿ ಸಖತ್ ಫೇಮಸ್ ಆಗುತ್ತಿದೆ. ಬಿಸಿಲಿಗೆ ಬಿಸಿ ನೀರು ಕುಡಿಯುವುದು ಕಷ್ಟ. ಜೊತೆಗೆ ತಕ್ಷಣಕ್ಕೆ ನೀರು ಸಿಗದೇ ಹೋದಾಗ ನಾವು ವಾಟರ್ ಬಾಟಲ್ಗಳ ಮೊರೆ ಹೋಗುತ್ತೇವೆ. ಆ ಸಂದರ್ಭದಲ್ಲಿ ತಂಪಾಗಿರುವ ನೀರು ಸಿಕ್ಕರೆ ಉತ್ತಮ ಎಂದನಿಸುತ್ತದೆ. ಹೀಗಾಗಿ ನೀರನ್ನು ತಂಪಾಗಿಡುವ ಕೆಲ ಬಾಟಲಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅವುಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.
ಈಗಲ್ ಪ್ರಿಮೊ ಸ್ಟೆಲ್ಲಾ ಸ್ಟೇನ್ಲೆಸ್ ಸ್ಟೀಲ್ ವ್ಯಾಕ್ಯೂಮ್ ವಾಟರ್ ಬಾಟಲ್: ಅಮೆಜಾನ್ನಲ್ಲಿ ಲಭ್ಯವಿರುವ ಈ 500 ಮಿಲಿ ವಾಟರ್ ಬಾಟಲ್, ಹಲವಾರು ಗಂಟೆಗಳ ಕಾಲ ನೀರನ್ನು ತಂಪಾಗಿರಿಸುತ್ತದೆ. ಇದನ್ನು ಹಲವು ಬಣ್ಣಗಳಲ್ಲಿ ಪಡೆಯಬಹುದು. ಅಮೆಜಾನ್ನಲ್ಲಿ ಇದರ ಬೆಲೆ ರೂ.830. ಈ ನೀರಿನ ಬಾಟಲಿಯನ್ನು ಶೇ.8ರಷ್ಟಯ ಕೂಪನ್ ರಿಯಾಯಿತಿಯೊಂದಿಗೆ ಖರೀದಿಸಬಹುದು.
ಸೆಲ್ಲೊ ಮೆಸ್ಟ್ರೋ ಸ್ಟೇನ್ಲೆಸ್ ಸ್ಟೀಲ್ ವ್ಯಾಕ್ಯೂಸ್ಟೀಲ್ ವಾಟರ್ ಫ್ಲಾಸ್ಕ್: ಸೆಲ್ಲೊ ಫ್ಲಾಸ್ಕ್ 1000ಎಂಎಲ್ ಸಾಮರ್ಥ್ಯದೊಂದಿಗೆ ಬರುತ್ತದೆ. ಇನ್ನು ಇದನ್ನು ಸೆಲ್ಲೋ ವೆಬ್ಸೈಟ್ನಿಂದ ರೂ.1,020 ಗೆ ಖರೀದಿಸಬಹುದು. ಬಹು ಬಣ್ಣಗಳು ಮತ್ತು ವಿಭಿನ್ನ ಸಾಮರ್ಥ್ಯಗಳಲ್ಲಿ ಲಭ್ಯವಿದೆ. ಇದು 24 ಗಂಟೆಗಳವರೆಗೆ ನೀರನ್ನು ತಂಪಾಗಿರಿಸುತ್ತದೆ.
ವಾರ್ಮಿಯೋ ಹೈಡ್ರಾ ಸ್ಟೇನ್ಲೆಸ್ ಸ್ಟೀಲ್ ವ್ಯಾಕ್ಯೂಮ್ ಬಾಟಲ್: ಈ ಬಾಟಲ್ 1500ಎಂಎಲ್ ನೀರನ್ನು ತುಂಬುವ ಸಾಮಾರ್ಥ್ಯ ಹೊಂದಿದೆ. ಈ ಬಾಟಲಿಯಲ್ಲಿ 24 ಗಂಟೆಗಳ ಕಾಲ ನೀರು ತಂಪಾಗಿರುತ್ತದೆ. ಡಬಲ್ ವಾಲ್ನೊಂದಿಗೆ ಬರುವ ಈ ಬಾಟಲಿಯನ್ನು ನೀವು ಅಮೆಜಾನ್ನಿಂದ 1,299 ರೂ.ಗೆ ಖರೀದಿಸಬಹುದು.
ಬೊರೊಸಿಲ್ ಗೋಸ್ಪೋರ್ಟ್ ಬ್ಲ್ಯಾಕ್: ಪ್ರಸಿದ್ಧ ಕಂಪನಿ ಬೊರೊಸಿಲ್ನ ಈ ಬಾಟಲಿಯು ನೋಡಲು ತುಂಬಾ ಸುಂದರವಾಗಿದೆ. ಡಬಲ್ ವಾಲ್ ವ್ಯಾಕ್ಯೂಮ್ ಮತ್ತು ತಾಮ್ರದ ಲೇಪನವನ್ನು ಸಹ ನೀಡಲಾಗುತ್ತಿದೆ. 600ಎಂಎಲ್ ಸಾಮರ್ಥ್ಯದ ಈ ಬಾಟಲಿಯನ್ನು ಬೊರೊಸಿಲ್ನ ವೆಬ್ ಸೈಟ್ನಿಂದ ರೂ.829ಕ್ಕೆ ಖರೀದಿಸಬಹುದು. ಇದು 18 ಗಂಟೆಗಳವರೆಗೆ ನೀರನ್ನು ತಂಪಾಗಿರಿಸುತ್ತದೆ.
ಮಿಲ್ಟನ್ ಅಟ್ಲಾಂಟಿಸ್ 900 ಥರ್ಮೋಸ್ಟೀಲ್ ವಾಟರ್ ಬಾಟಲ್: ನೀವು ಈ ಮಿಲ್ಟನ್ ಬಾಟಲಿಯನ್ನು ಅಮೆಜಾನ್ನಿಂದ ರೂ 864 ಕ್ಕೆ ಖರೀದಿಸಬಹುದು. ಇದು 750 ಮಿಲಿ ಸಾಮರ್ಥ್ಯದೊಂದಿಗೆ ಬರುತ್ತದೆ. ಇದು ಸೋರಿಕೆ ನಿರೋಧಕವಾಗಿದೆ ಮತ್ತು ಹಲವಾರು ಗಂಟೆಗಳ ಕಾಲ ನೀರನ್ನು ತಂಪಾಗಿರಿಸುತ್ತದೆ.