Saving Electricity Bill: ಬಿರುಬಿಸಿಲಲ್ಲಿ ಬಿಂದಾಸ್ ಎಸಿ ಹಾಕಿ ಮಲ್ಕೊಳ್ಳಿ! ವಿದ್ಯುತ್ ಬಿಲ್ ಶೇ.95 ರಷ್ಟು ಕಮ್ಮಿಯಾಗಿಸುವ ಟ್ರಿಕ್ ಇಲ್ಲಿದೆ

How to Save on Electricity Bills: ಬೇಸಿಗೆ ಕಾಲದಲ್ಲಿ ಎಲೆಕ್ಟ್ರಿಕ್ ಬಿಲ್ ಹೆಚ್ಚಾಗುವ ಟೆನ್ಶನ್ ಬಿಟ್ಟು ನೀವೂ ಕೂಡ ಬಿಂದಾಸ್ ಆಗಿ ಎಸಿ ಅಥವಾ ಕೂಲರ್ ಹಾಕಿಕೊಂಡು ನೆಮ್ಮದಿಯಾಗಿ ನಿದ್ರಿಸಲು ಬಯಸುತ್ತಿದ್ದರೆ, ಅದಕ್ಕಾಗಿ ಒಂದು ಅದ್ಭುತ ಟ್ರಿಕ್ ವೊಂದನ್ನು ನಾವು ನಿಮಗೆ ಹೇಳಿಕೊಡುತ್ತೇವೆ. ಈ ಟ್ರಿಕ್ ಅನ್ನು ಬಳಸಿ ನೀವು ನಿಮ್ಮ ವಿದ್ಯುತ್ ಬಿಲ್ ಅನ್ನು ಶೇ.95ರಷ್ಟು ಕಡಿಮೆ ಮಾಡಿಕೊಳ್ಳಬಹುದು.  

Written by - Nitin Tabib | Last Updated : Jun 6, 2022, 05:36 PM IST
  • ಬಿಸಿಲಿನ ಹೊತ್ತಿನಲ್ಲಿ ಮನೆಯಲ್ಲಿ ಬಿಂದಾಸ್ ಎಸಿ ಹಾಕಿ ಮಲಗಬೇಕೆ?
  • ಅದಕ್ಕಾಗಿ ನಾವು ಹೇಳುತ್ತಿರುವ ಈ ಟ್ರಿಕ್ ಒಮ್ಮೆ ಟ್ರೈ ಮಾಡಿ ನೋಡಿ
  • ಈ ಟ್ರಿಕ್ ನಿಂದ ನೀವು ನಿಮ್ಮ ವಿದ್ಯುತ್ ಬಿಲ್ ಅನ್ನು ಶೇ.95 ರಷ್ಟು ಕಡಿಮೆ ಮಾಡಬಹುದು
Saving Electricity Bill: ಬಿರುಬಿಸಿಲಲ್ಲಿ ಬಿಂದಾಸ್ ಎಸಿ ಹಾಕಿ ಮಲ್ಕೊಳ್ಳಿ! ವಿದ್ಯುತ್ ಬಿಲ್ ಶೇ.95 ರಷ್ಟು ಕಮ್ಮಿಯಾಗಿಸುವ ಟ್ರಿಕ್ ಇಲ್ಲಿದೆ title=
Saving Electricity Bill

Tip for Savings on Electricity Bills: ಈ ವರ್ಷ ಉಷ್ಣಾಂಶ ದಿನದಿಂದ ದಿನಕ್ಕೆ ತಾನು ನಿರ್ಮಿಸಿದ ದಾಖಲೆಯನ್ನು ತಾನೆ ಮುರಿಯುತ್ತಿದೆ. ಬಿರುಬಿಸಿಲು ಅಂತ್ಯವಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ ಮತ್ತು ಇಂತಹ ಪರಿಸ್ಥಿತಿಯಲ್ಲಿ ದಿನವಿಡೀ ಕೂಲರ್ ಮತ್ತು ಎಸಿಗಳು ಅಗತ್ಯ ಬೀಳುತ್ತಿದೆ. ಕೂಲರ್ ಮತ್ತು ಎಸಿಗಳು ಸಾಕಷ್ಟು ನೆಮ್ಮದಿ ನೀಡಿದರೂ ಕೂಡ ತಿಂಗಳ ಕೊನೆಯಲ್ಲಿ ಅವುಗಳನ್ನು ಚಾಲನೆ ಮಾಡುವುದರಿಂದ ಬರುವ ವಿದ್ಯುತ್ ಬಿಲ್ ಜನರನ್ನು ಹೈರಾಣಾಗಿಸುತ್ತದೆ. ಹೀಗಾಗಿ ಇಂದು ನಾವು ನಿಮಗೆ ಟ್ರಿಕ್ ವೊಂದನ್ನು ಹೇಳಿಕೊಡುತ್ತಿದ್ದು, ಈ ಟ್ರಿಕ್ ಅನ್ನು ಅನುಸರಿಸುವ ಮೂಲಕ ನೀವು ನಿಮ್ಮ ಮಾಸಿಕ ವಿದ್ಯುತ್ ಬಿಲ್ ಅನ್ನು 95% ವರೆಗೆ ಕಡಿಮೆ ಮಾಡಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,

ಈ ಅದ್ಭುತ ಸಾಧನವನ್ನು ಬಳಸಿ
ಸೌರ ಫಲಕಗಳು ವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವೆಂದು ಬಹುತೇಕರಿಗೆ ಗೊತ್ತೇ ಇದೆ. . ಆದರೆ ಅವುಗಳನ್ನು ಅಳವಡಿಸಲು ಮೇಲ್ಛಾವಣಿಯನ್ನು ಹೊಂದಿರುವುದು ತುಂಬಾ ಮುಖ್ಯ, ಸಾಮಾನ್ಯವಾಗಿ ಫ್ಲಾಟ್ಗಳಲ್ಲಿ ವಾಸಿಸುವ ಜನರು ಪ್ರತ್ಯೇಕವಾಗಿ ಟೆರೆಸ್ ಹೊಂದಿರುವುದಿಲ್ಲ. ಹೀಗಾಗಿ ಅವರು ಸೋಲಾರ್ ಪ್ಯಾನೆಲ್ ಗಳ ಬದಲಿಗೆ ‘ಸೋಲಾರ್ ಬಿಸ್ಕೆಟ್ ’ ಅಳವಡಿಸಬಹುದು. ಇವುಗಳ ಬೆಲೆ ಕೂಡ ಅಗ್ಗವಾಗಿದ್ದು, ಬಳಸಲು ಸುಲಭ ಮತ್ತು ಸಾಕಷ್ಟು ವಿದ್ಯುತ್ ಅನ್ನು ಉಳಿತಾಯ ಮಾಡುತ್ತವೆ. 

ಇದನ್ನೂ ಓದಿ-Smartphone Network: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಕೂಡ ನೆಟ್ವರ್ಕ್ ಸಮಸ್ಯೆ ಇದೆಯಾ? ತಕ್ಷಣ ಈ ಸೆಟ್ಟಿಂಗ್ ಬದಲಾಯಿಸಿ

'ಸೋಲಾರ್ ಬಿಸ್ಕತ್ತು' ಹೇಗೆ ಕೆಲಸ ಮಾಡುತ್ತದೆ?
ಸೋಲಾರ್ ಬಿಸ್ಕತ್ತುಗಳು ಎಂದರೇನು? ಎಂದು ನೀವು ಯೋಚಿಸುತ್ತಿದ್ದರೆ, ಸೋಲಾರ್ ಬಿಸ್ಕತ್ತುಗಳು ನೈಜ ರೂಪದಲ್ಲಿ ಸೌರ ಸ್ಥಾವರದ ಒಂದು ಭಾಗದ ಯುನಿಟ್ ಗಳಾಗಿವೆ, ಇವುಗಳನ್ನು ಬಳಸಲು ನೀವು ಮೊದಲು ಅವುಗಳನ್ನು ರಿಸರ್ವ್ ಮಾಡಬೇಕು. ನಂತರ, ಯಾವುದೇ ಒಬ್ಬ ವ್ಯಕ್ತಿ ಅಥವಾ ಗುಂಪು ಆ ಸೌರ ಬಿಸ್ಕತ್ತುಗಳಿಂದ ವಿದ್ಯುತ್ ಅನ್ನು ಬಳಸಿದಾಗ, ನೀವು ಕ್ರೆಡಿಟ್ ಪಡೆಯುತ್ತೀರಿ. ಇದು ಗ್ರೀನ್ ಇನ್ವೆಸ್ಟ್ಮೆಂಟ್ ನ ಒಂದು ಹೊಸ ಮಾರ್ಗವಾಗಿದೆ, ಇದರಿಂದ ಇಂಗಾಲದ ಹೊರಸೂಸುವಿಕೆಯನ್ನು ಕೂಡ ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಇದನ್ನೂ ಓದಿ-Reliance Jio Update: ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ರಿಲಯನ್ಸ್ ಜಿಯೋ! ಈ ಪ್ಲಾನ್ ಬೆಲೆಯಲ್ಲಿ ರೂ.150 ಹೆಚ್ಚಳ

ಶೇ.95ರಷ್ಟು ವಿದ್ಯುತ್ ಬಿಲ್ ಕಡಿತ!
ಇದನ್ನು ಬಳಸುವುದರಿಂದ ನೀವು ನಿಮ್ಮ ವಿದ್ಯುತ್ ಬಿಲ್ ಅನ್ನು ಶೇ.95 ರಷ್ಟು ಕಡಿಮೆ ಮಾಡಬಹುದು. ಒಂದು ಸೌರ ಬಿಸ್ಕತ್ತು 10W ಸಾಮರ್ಥ್ಯದೊಂದಿಗೆ ಬರುತ್ತದೆ ಮತ್ತು ಅದರ ಬೆಲೆ 600 ರೂಪಾಯಿಗಳು. ಅವುಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪಡೆಯುವ ಕ್ರೆಡಿಟ್‌ಗಳ ಸಹಾಯದಿಂದ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ. ನಿಮ್ಮ ಮಾಸಿಕ ವಿದ್ಯುತ್ ಬಿಲ್ 6,000 ರೂ.ಗಳಾಗಿದ್ದರೆ, ನೀವು ಅದನ್ನು 300 ರೂ.ಗೆ ಇಳಿಸಬಹುದು (ಸುಮಾರು 95 ಪ್ರತಿಶತ) ಎಂದು ಸೋಲಾರ್ ಬಿಸ್ಕತ್ತು ಕಂಪನಿ ಸಂಡೇಗ್ರಿಡ್ಸ್ ಸಂಸ್ಥಾಪಕ ಮ್ಯಾಥ್ಯೂ ಹೇಳುತ್ತಾರೆ. ನೀವು ಎಷ್ಟು ಬಿಸ್ಕತ್ತುಗಳನ್ನು ಖರೀದಿಸುತ್ತೀರಿ ಎಂಬುದರ ಮೇಲೆ ಇದು ಅವಲಂಭಿಸಿದೆ ಎಂದು ವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News