ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿ ತಮಿಳನಾಡಿನಲ್ಲಿ ತಿರುವಣ್ಣಾಮಲೈನ ರಮಣಶ್ರೀ ಆಶ್ರಮದಲ್ಲಿ ಮಾರುವೇಶದಲ್ಲಿ ಪಾಪಿ ನಾಗೇಶ ತಲೆಮರೆಸಿಕೊಂಡಿದ್ದ. ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿ ಎಳೆ ತಂದಿದ್ದ ಪೊಲೀಸರು ಈಗ ನಾಗನನ್ನು ತಿರುವಣ್ಣಾಮಲೈಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ.
ಇದನ್ನೂ ಓದಿ: ಆಸ್ತಿ ವಿವಾದ: ತಮ್ಮನಿಗೆ ಗುಂಡಿಟ್ಟು ಕೊಂದ ಅಣ್ಣ..!
ಆ್ಯಸಿಡ್ ಎರಚಿ ಪರಾರಿಯಾಗಿದ್ದ ನಾಗನ ಹೇಳಿಕೆ ಆಧಾರದ ಮೇಲೆ ಆ್ಯಸಿಡ್ ಎರಚಿದ್ದಕ್ಕೆ ಯಾವುದೇ ಕುರುಹುಗಳು ಸಿಗಬಾರದು ಅಂತಾ ಸಾಕ್ಷಿ ನಾಶಕ್ಕೆ ಮುಂದಾಗಿದ್ದ. ಹೀಗಾಗಿ ಆಶ್ರಮದಲ್ಲಿದ್ದ ವ್ಯಕ್ತಿಯೊಬ್ಬನ ಸಹಾಯದಿಂದ ಆ್ಯಸಿಡ್ ಎರಚುವಾಗ ಧರಿಸಿದ್ದ ಗ್ಲೌಸ್ ಹಾಗೂ ಬಟ್ಟೆಯನ್ನ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ್ದ.
ಹೀಗಾಗಿ ಕಾಮಾಕ್ಷಿಪಾಳ್ಯ ಪೊಲೀಸರು ನಿನ್ನೆ ಆಂಬುಲೆನ್ಸ್ನಲ್ಲಿ ಆರೋಪಿ ನಾಗನನ್ನು ತಿರುವಣ್ಣಾಮಲೈಗೆ ಕರೆದೊಯ್ದು ಸಾಕ್ಷಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ನಾಗನಿಗೆ ಸಹಾಯ ಮಾಡಿದ್ದ ವ್ಯಕ್ತಿಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: PSI Recruitment Scam: ಗೃಹಸಚಿವ ಆರಗ ಜ್ಞಾನೇಂದ್ರಗೆ 8 ಎಂಎಲ್ಎಗಳಿಂದ ಪತ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.