ಬೆಂಗಳೂರು: ಮಣಪ್ಪುರಂ ಫೈನಾನ್ಸ್ ಕಂಪನಿ ದೋಚಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ನಾಗರಾಜ್, ಆಟೋ ಚಾಲಕ ಕುಮಾರ್, ಬಸ್ ಚಾಲಕ ಬಹದ್ದೂರ್ ಸಿಂಗ್ ಬಂಧಿತ ಆರೋಪಿಗಳು.ಮೂವರು ಮೈತುಂಬಾ ಸಾಲ ಮಾಡಿಕೊಂಡಿದ್ರು..ಹೇಗಾದ್ರೂ ಮಾಡಿ ಸಾಲ ತೀರಿಸಬೇಕೆಂದು ನಿರ್ಧರಿಸಿದ್ದರು.ಈ ಹಿನ್ನೆಲೆ ರಾಜಗೋಪಾಲನಗರದಲ್ಲಿರುವ ಮಣ್ಣಪುರಂ ಫೈನಾನ್ಸ್ ದೋಚಲು ಪ್ಲಾನ್ ಮಾಡಿಕೊಂಡಿದ್ರು.
ಕಳೆದ 25ರ ರಾತ್ರಿ 8 ಗಂಟೆ ಸುಮಾರಿಗೆ ಫೈನಾನ್ಸ್ ಕಂಪನಿ ಒಳನುಗ್ಗಿದ್ರು. ಆದರೆ ಗ್ಯಾಸ್ ಕಟ್ಟರ್ ನಿಂದ ಲಾಕರ್ ನ ಓಪನ್ ಮಾಡುವಷ್ಟರಲ್ಲಿ ಸೈರನ್ ಮೊಳಗಿತ್ತು. ಈ ಹಿನ್ನೆಲೆ ಮೂವರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಘಟನೆ ಬೆಳಕಿಗೆ ಬಂದ ತಕ್ಷಣ ಫೈನಾನ್ಸ್ ಕಂಪನಿಯವರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.
ಸದ್ಯ ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು ಮೂವರನ್ನು ಬಂಧಿಸಿ ಆರು ಕೆಜಿ ಗ್ಯಾಸ್ ಸಿಲಿಂಡರ್ ,ಆಟೋರಿಕ್ಷಾ, 2 ನೈಟಿ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳು ವಶಕ್ಕೆ ಪಡೆದಿದ್ದಾರೆ.ಈ ಹಿಂದೆಯೂ ಆರೋಪಿಗಳು ಕಳೆದ ಎಪ್ರಿಲ್ ನಲ್ಲಿ ಎಟಿಎಂ ಸೆಂಟರ್ ಗೂ ಕನ್ನ ಹಾಕಿ ವಿಫಲರಾಗಿದ್ರೂ. ವಿಚಿತ್ರವೆಂದರೆ ತಮ್ಮ ಚಹರೆ ಗೊತ್ತಾಗಬಾರದು ಅಂತಾ ಆರೋಪಿಗಳು ನೈಟಿ ಧರಿಸಿ ಕೃತ್ಯವೆಸಗುತ್ತಿದ್ದರು ಎಂಬುದು ಗೊತ್ತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.