ನನ್ನ‌ ನೈತಿಕತೆಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್

Kodihalli Chandrashekhar: ನಾನು ಯಾವ ಸಚಿವರನ್ನೂ ಭೇಟಿ ಮಾಡಿಲ್ಲ. ಯಾವ ಅಧಿಕಾರಿಯನ್ನೂ ಭೇಟಿ ಮಾಡಿಲ್ಲ. ನನ್ನ‌ ನೈತಿಕತೆಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ. ಇದರ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ. 

Written by - Chetana Devarmani | Last Updated : May 28, 2022, 07:24 PM IST
  • ನಾನು ಯಾವ ಸಚಿವರನ್ನೂ ಭೇಟಿ ಮಾಡಿಲ್ಲ
  • ಯಾವ ಅಧಿಕಾರಿಯನ್ನೂ ಭೇಟಿ ಮಾಡಿಲ್ಲ
  • ನಾನು ಭ್ರಷ್ಟಾಚಾರ ವಿರೋಧ ಮಾಡುವವನು
  • ನನ್ನ‌ ನೈತಿಕತೆಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ
  • ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗೋಷ್ಠಿ

Trending Photos

ನನ್ನ‌ ನೈತಿಕತೆಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್  title=
ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ನಾನು ಯಾವ ಸಚಿವರನ್ನೂ ಭೇಟಿ ಮಾಡಿಲ್ಲ. ಯಾವ ಅಧಿಕಾರಿಯನ್ನೂ ಭೇಟಿ ಮಾಡಿಲ್ಲ. ಒಬ್ಬ ವ್ಯಕ್ತಿ ಬಂದು ಎಷ್ಟು ಕೊಡಲಿ ಎಂದು ಕೇಳಿದರೆ, ನಾನು ಏನಾದ್ರು ಹಣ ಪಡೆದಿದ್ದರೆ ಅದು ಅಪರಾಧ. ನಾನು ಸಿಎಂಗೆ ಮನವಿ ಮಾಡೋದು ಇಷ್ಟೇ, ರಾಜ್ಯದ ರೈತ ಚಳುವಳಿ ಚಾರಿತ್ರಿಕ‌ ಚಳುವಳಿ. ಈ ಚಳುವಳಿಯಲ್ಲಿ ಮುಂಚೂಣಿಯಲ್ಲಿ ಕಂಡಿದ್ದೇನೆ. ನಾನು ಭ್ರಷ್ಟಾಚಾರ ವಿರೋಧ ಮಾಡುವವನು. ನನ್ನ‌ ನೈತಿಕತೆಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ. ಇದರ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ. 

ಇದನ್ನೂ ಓದಿ: ಮುಟ್ಟಿನ ಸಂದರ್ಭದಲ್ಲಿನ ಈ ಅಭ್ಯಾಸಗಳು ಬಂಜೆತನಕ್ಕೆ ಕಾರಣವಾಗಬಹುದು.!

ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ನಾವು ಪ್ರೆಸ್ ಕ್ಲಬ್‌ಗೆ ಬರುವಾಗ ಮಾಜಿ ಸಿಎಂ ಕುಮಾರಸ್ವಾಮಿ‌ಬೆಂಬಲಿಗರಿಂದ ಅಡ್ಡಿ ಪಡಿಸಿದರು. ಒಳಗೆ ಬರಲು ಬಿಡದೆ ಅಡೆತಡೆ ಮಾಡಿದರು. ಕುಮಾರಸ್ವಾಮಿಯವರೇ ಇಂತ ಕೆಲಸ ಮಾಡಬೇಡಿ. ಬೆಂಬಲಿಗರನ್ನ ಬಿಟ್ಟು ಘರ್ಷಣೆ ಮಾಡಿಸಬೇಡಿ. ಏನಿದ್ದರೂ ಮುಖಾಮುಖಿ ಬನ್ನಿ. ಎಲ್ಲವನ್ನೂ ನಾವು ಚರ್ಚೆ ಮಾಡೋಣ. ಹತಾಶರಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ. 

ಮಾನ್ಯರೇ ನೀವು ಆರೋಪವನ್ನ ಮಾಡಿ. ನೀವೇನು ಸುಪ್ರೀಂ ಕೋರ್ಟ್‌, ಹೈಕೋರ್ಟ್ ಜಸ್ಟೀಸ್ ಅಲ್ಲ. ಭ್ರಷ್ಟಾಚಾರದ ಆರೋಪವನ್ನ ಹೊರಿಸಿದ್ದೀರಿ. ನಾನು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೇಳಿದ್ದೇನೆ. ಏನು ಎತ್ತ ಅನ್ನೋದನ್ನ ಅವರಿಗೆ ಸಲ್ಲಿಸುತ್ತೇನೆ. ರಾಜ್ಯದ ಮಾಧ್ಯಮಗಳಿಗೆ ವಿಶೇಷ ಗೌರವವಿದೆ. ನನ್ನ ಮೇಲಿನ ಪ್ರಕರಣದ ಮೇಲೆ ತನಿಖೆ ನಡೆಸಲಿ. ಸರ್ಕಾರ ಎಲ್ಲವನ್ನೂ ತನಿಖೆಗೊಳಪಡಿಸಲಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮಾಧ್ಯಮಗಳು ಶಿಷ್ಟಾಚಾರ ಅನುಸರಿಸಬೇಕು. ಅದು ಬಿಟ್ಟು ನಡೆದಾಗ ಸರ್ಕಾರ ಶಿಕ್ಷಿಸಬೇಕು. ಇದು ಒಂದು ದಿನದ ಮಾತುಕತೆಯಲ್ಲ. ಏಳೆಂಟು ತಿಂಗಳು ನನ್ನನ್ನ ಭೇಟಿ ಮಾಡಿದ್ದಾರೆ. ಆ ವೇಳೆ ನಾನು ಯಾರ ಬಗ್ಗೆಯೂ ಮಾತನಾಡಿರಬಹುದು. ಮಾತನಾಡಿರದಿರಲೂಬಹುದು. ಹಣಕಾಸು ವರ್ಗಾವಣೆ ಆಗಿಲ್ಲ ಅಂತ ಹೇಳ್ತೀರ. ನಾನು ಹೇಗೆ ಭ್ರಷ್ಟಾಚಾರ ಮಾಡೋಕೆ ಸಾಧ್ಯ. 35 ಕೋಟಿ ಕೊಟ್ಟರೆ ನಾನು ನಿಲ್ಲಿಸ್ತೇನೆ ಅಂತ ಹೇಳಿಲ್ಲ. ನಾನು ಅವರು ಕರೆದಾಗ ಮಾತನಾಡಿದ್ದೇನೆ. ನಮ್ಮ‌ಮನೆಯಲ್ಲಿ ಬಂದು ಕುಳಿತು ಮಾತನಾಡ್ತಿದ್ರು. ರೆಕಾರ್ಡ್ ಮಾಡಿ ಬೇಕಾದಂತೆ ಬಳಸಿಕೊಂಡರೆ ಹೇಗೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: 'ನೆಹರೂ ಅವರ ಸೌಹಾರ್ದತೆಯ ಆಲೋಚನೆಯ ಮೂಲಕ ಈ ದೇಶದ ಬಹುತ್ವವನ್ನು ಉಳಿಸಬೇಕಿದೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News