ಬೆಂಗಳೂರು : '777 ಚಾರ್ಲಿ' ಟ್ರೈಲರ್ ರಿಲೀಸ್ ಆಗಿದೆ. ಕನ್ನಡದಲ್ಲಿ ಡಿಫರೆಂಟ್ ಕಥೆಗಳನ್ನ ಆಯ್ಕೆ ಮಾಡಿಕೊಂಡು, ಡಿಫರೆಂಟ್ ಡಿಫರೆಂಟ್ ಆಗಿ ಸಿನಿಮಾ ತೆಗೆಯೋದು ರಕ್ಷಿತ್ ಶೆಟ್ಟಿ & ಟೀಂಗೆ ಕರಗತವಾಗಿ ಹೋಗಿದೆ. ಇದೀಗ '777 ಚಾರ್ಲಿ' ಕೂಡ ಇದೇ ರೀತಿ ಹೊಸ ಪ್ರಯತ್ನವಾಗಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಹೊಸ ಹೊಸ ದಾಖಲೆ ಬರೆಯಲು 'ಕೆಜಿಎಫ್-2' ಬಳಿಕ ಮತ್ತೊಂದು ಕನ್ನಡ ಸಿನಿಮಾ ಸಜ್ಜಾಗಿದೆ.
'777 ಚಾರ್ಲಿ' ಸಿನಿಮಾ ಜೂನ್ 10ರಂದು ರಿಲೀಸ್ ಆಗೋದು ಗ್ಯಾರಂಟಿ. ಈ ಬೆನ್ನಲ್ಲೇ ಟ್ರೈಲರ್ ರಿಲೀಸ್ ಮಾಡಿರುವ '777 ಚಾರ್ಲಿ' ಚಿತ್ರತಂಡ, ಅಬ್ಬರದ ಎಂಟ್ರಿಯನ್ನೇ ಕೊಟ್ಟಿದೆ. ಕನ್ನಡ ಸಿನಿ ಜಗತ್ತಲ್ಲಿ ಸಂಚಲನ ಸೃಷ್ಟಿಸುತ್ತಿರುವ ರಕ್ಷಿತ್ ಶೆಟ್ಟಿ, ಈ ಬಾರಿ ಒಂದು ಪಪ್ಪಿಯ ಕಥೆ ಹೇಳಲು ಹೊರಟಿದ್ದಾರೆ. ಪ್ರೀತಿ, ಕಂಬನಿ, ಭಾವನೆಗಳ ಬೆಸುಗೆಯೇ '777 ಚಾರ್ಲಿ' ಎನ್ನಬಹುದು.
ಇದನ್ನೂ ಓದಿ : ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲಿದ್ದಾನೆ ನಮ್ಮ 'ಚಾರ್ಲಿ'..!
'ಚಾರ್ಲಿ' ಅಬ್ಬರ..!
ಅಂದಹಾಗೆ ದೇಶದ 21 ಪ್ರಮುಖ ಸಿಟಿಗಳಲ್ಲಿ '777 ಚಾರ್ಲಿ' ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿದೆ. ಈ ಮೂಲಕ ರಿಲೀಸ್ಗೂ ಮೊದಲೇ ಈ ಚಿತ್ರದ ಬಗ್ಗೆ ಪ್ರೇಕ್ಷಕ ಅಭಿಪ್ರಾಯ ಹಂಚಿಕೊಳ್ಳುವಂತೆ ಮಾಡೋ ಫ್ಲ್ಯಾನ್ '777 ಚಾರ್ಲಿ' ತಂಡದ್ದು. ಹೀಗೆ ನೋಡೋದಾದ್ರೆ ಈಗಾಗಲೇ ಟ್ರೈಲರ್ ಮತ್ತು ಟೀಸರ್ ಮೂಲಕ ಸಂಚಲನ ಸೃಷ್ಟಿಸಿದ್ದ '777 ಚಾರ್ಲಿ' ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಒಟ್ಟಾರೆ ಹೇಳುವುದಾದ್ರೆ 777 ಚಾರ್ಲಿ ಸ್ಯಾಂಡಲ್ವುಡ್ ಪಾಲಿಗೆ ಮತ್ತೊಂದು ಮರೆಯಲಾಗದ ಸಿನಿಮಾ ಆಗೋದು ಪಕ್ಕಾ. ರಿಲೀಸ್ಗೆ ಮೊದಲೇ ಇಷ್ಟು ಅಬ್ಬರ ತೋರುತ್ತಿರುವ '777 ಚಾರ್ಲಿ', ರಿಲೀಸ್ ಆದ ಬಳಿಕ ಮತ್ತಷ್ಟು ಅಬ್ಬರಿಸುವ ಭರವಸೆ ನಟ ರಕ್ಷಿತ್ ಶೆಟ್ಟಿ ಅವರಿಗಿದೆ. ಹೀಗೆ ಹೊಸದೊಂದು ಇತಿಹಾಸ ಸೃಷ್ಟಿಸಲು '777 ಚಾರ್ಲಿ' ರೆಡಿಯಾಗಿದ್ದು, ಚಿತ್ರ ಗೆಲ್ಲಿಸಲು ರಕ್ಷಿತ್ ಶೆಟ್ಟಿ ಮತ್ತು ತಂಡ ಹಗಲು-ರಾತ್ರಿ ಶ್ರಮಿಸುತ್ತಿದೆ.
ಇದನ್ನೂ ಓದಿ : Prarambha Movie : 'ಪ್ರಾರಂಭ' ಬಿಡುಗಡೆಗೆ ಕೌಂಟ್ಡೌನ್! ಲವರ್ಸ್ಗೆ ಕ್ರೇಜಿಸ್ಟಾರ್ ಪುತ್ರನ ಸಲಹೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.