ಬೆಂಗಳೂರು: ಬಿಜೆಪಿ ಸರ್ಕಾರದ 40% ಕಮೀಷನ್ ಭ್ರಷ್ಟಾಚಾರ ನಿಸರ್ಗದಿಂದಲೇ ಬಯಲಾಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿದ್ದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘ಮುಖ್ಯಮಂತ್ರಿಗಳು ಕಾಂಗ್ರೆಸ್ ದೂಷಣೆಯಿಂದ ತಮ್ಮ ಹಗರಣ ಮುಚ್ಚಿಕೊಳ್ಳಬಹುದು ಎಂದುಕೊಂಡಿದ್ದಾರೆ. ಆದರೆ, ಅವರ ಸರ್ಕಾರದ 40% ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ. ವಾಜಪೇಯಿ ಕ್ರೀಡಾಂಗಣದ ಛಾವಣಿ ಕುಸಿದಿದೆ, ತೇಲು ಸೇತುವೆ ತೇಲಿಹೋಗಿದೆ! ಇದು 40% ಕಮಿಷನ್ ಪ್ರಭಾವವಲ್ಲದೆ ಇನ್ನೇನು ಬಿಜೆಪಿ?’ ಎಂದು ಪ್ರಶ್ನಿಸಿದೆ.
ಮಾನ್ಯ ಮುಖ್ಯಮಂತ್ರಿಗಳು ಕಾಂಗ್ರೆಸ್ ದೂಷಣೆಯಿಂದ ತಮ್ಮ ಹಗರಣ ಮುಚ್ಚಿಕೊಳ್ಳಬಹುದು ಎಂದುಕೊಂಡಿದ್ದಾರೆ. ಆದರೆ ಅವರ ಸರ್ಕಾರದ 40% ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ.
ವಾಜಪೇಯಿ ಕ್ರೀಡಾಂಗಣದ ಛಾವಣಿ ಕುಸಿದಿದೆ, ತೇಲು ಸೇತುವೆ ತೇಲಿಹೋಗಿದೆ!
ಇದು 40% ಕಮಿಷನ್ ಪ್ರಭಾವವಲ್ಲದೆ ಇನ್ನೇನು @BJP4Karnataka? pic.twitter.com/0LhIuDJNU5
— Karnataka Congress (@INCKarnataka) May 10, 2022
ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಶಿಕ್ಷಣ ಇಲಾಖೆ ಹದ್ದಿನ ಕಣ್ಣು: ಸಚಿವ ಬಿ.ಸಿ.ನಾಗೇಶ್
‘ಮೊನ್ನೆಯಷ್ಟೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರು "ಟಿಕೆಟ್ಗಾಗಿ ಸೀರೆ, ಪಂಚೆ ಹಿಡಿದು ಬರಬೇಡಿ" ಎಂದು ತಮ್ಮ ಪಕ್ಷದವರಿಗೆ ಹೇಳಿದ್ದರು. ಹಿಡಿದು ಬರಬೇಕಿರುವುದು "ಸೂಟ್ ಕೇಸ್" ಎಂಬುದನ್ನು ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಟಿಕೆಟಿಗಾದರೂ ಸರಿ, ಮಂತ್ರಿಗಿರಿ, ಸಿಎಂ ಹುದ್ದೆಗದರೂ ಸರಿ ಬಿಜೆಪಿಯಲ್ಲಿ "ಸೂಟ್ ಕೇಸ್" ಮುಖ್ಯ!’ವೆಂದು ಕುಟುಕಿದೆ.
ಮೊನ್ನೆಯಷ್ಟೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರು "ಟಿಕೆಟ್ಗಾಗಿ ಸೀರೆ, ಪಂಚೆ ಹಿಡಿದು ಬರಬೇಡಿ" ಎಂದು ತಮ್ಮ ಪಕ್ಷದವರಿಗೆ ಹೇಳಿದ್ದರು.
ಹಿಡಿದು ಬರಬೇಕಿರುವುದು "ಸೂಟ್ ಕೇಸ್" ಎಂಬುದನ್ನು ಯತ್ನಾಳ್ ಅವರು ತಿಳಿಸಿದ್ದಾರೆ.
ಟಿಕೆಟಿಗಾದರೂ ಸರಿ, ಮಂತ್ರಿಗಿರಿ, ಸಿಎಂ ಹುದ್ದೆಗದರೂ ಸರಿ ಬಿಜೆಪಿಯಲ್ಲಿ "ಸೂಟ್ ಕೇಸ್" ಮುಖ್ಯ!
— Karnataka Congress (@INCKarnataka) May 10, 2022
‘ಮಾರ್ಚ್ 1ರಂದು ಸಿಎಂ ಬಸವರಾಜ್ ಬೊಮ್ಮಾಯಿಯವರಿಂದ ಸ್ಟೇಡಿಯಂ ಉದ್ಘಾಟನೆ ! ಮೇ 9ರಂದು ಕ್ರೀಡಾಂಗಣ ಕುಸಿತ! ಇದು 40% ಕಮಿಷನ್ ಪ್ರಭಾವ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವ್ಯಾಪಕವಾದ ಭ್ರಷ್ಟಾಚಾರವು "ಬ್ರಾಂಡ್ ಕರ್ನಾಟಕ"ವನ್ನು ನಾಶಪಡಿಸುತ್ತಿದೆ’ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
6ನೇ ಮೇ - ಮೊದಲ ತೇಲುವ ಸೇತುವೆ ಅನಾವರಣ!
ಮೇ 9 - ತೇಲುವ ಸೇತುವೆ "ತೇಲುತ್ತದೆ" !
ಬೊಮ್ಮಾಯಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರದ ಅಸಹನೀಯ ದುರ್ವಾಸನೆಯು "ಬ್ರಾಂಡ್ ಕರ್ನಾಟಕ"ವನ್ನು ಮಿಲಿಸೆಕೆಂಡ್ನಲ್ಲಿ ಕಳಂಕಿತಗೊಳಿಸುತ್ತಿದೆ. https://t.co/bZJAWek42J
— Karnataka Congress (@INCKarnataka) May 10, 2022
ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಕುಸಿಯಲು 40% ಕಮಿಷನ್ ಕಾರಣ: ಆಪ್ ಆರೋಪ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.