ನವದೆಹಲಿ: ಸುರಕ್ಷಿತ ಭವಿಷ್ಯ ಮತ್ತು ಸಮೃದ್ಧ ವೃತ್ತಿಜೀವನಕ್ಕೆ ಸರ್ಕಾರಿ ಉದ್ಯೋಗವು ಅತ್ಯುತ್ತಮ ಆಯ್ಕೆಯಾಗಿದೆ. ದೇಶದ ಕೋಟ್ಯಂತರ ಯುವಕರು ಸರ್ಕಾರಿ ಉದ್ಯೋಗಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಇದೇ ಮುಖ್ಯ ಕಾರಣ. ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳಿಂದ ಪ್ರತಿವರ್ಷ ಸಾವಿರಾರು ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಈ ಪೈಕಿ SSC, UPSC, ರೈಲ್ವೆ, ಬ್ಯಾಂಕಿಂಗ್ ಮತ್ತು ಪೊಲೀಸ್ ಉದ್ಯೋಗಗಳು ಸೇರಿವೆ. ಸರ್ಕಾರಿ ಕೆಲಸ ಪಡೆಯಲು ಅಭ್ಯರ್ಥಿಗಳು ವರ್ಷಗಳ ಕಾಲ ಶ್ರಮಿಸುತ್ತಾರೆ. ಬಳಿಕ ನೇಮಕಾತಿ ಪರೀಕ್ಷೆಗಳನ್ನು ಎದುರಿಸುತ್ತಾರೆ. ಯಾವ ಸಲಹೆಗಳನ್ನು ಅಳವಡಿಸಿಕೊಂಡರೆ ಸರ್ಕಾರಿ ಉದ್ಯೋಗದ ಲಿಖಿತ ಪರೀಕ್ಷೆಯಲ್ಲಿ ನೀವು ಯಶಸ್ಸನ್ನು ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: Gold Coin ATM : ಈ ATM ನಿಂದ ನೋಟುಗಳ ಬದಲಾಗಿ ಚಿನ್ನದ ನಾಣ್ಯ ಬರುತ್ತೆ, ಅದು ಹೇಗೆ?
ಈ ಸಲಹೆಗಳೊಂದಿಗೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ
1. ಯಾವುದೇ ಪರೀಕ್ಷೆಯನ್ನು ಭೇದಿಸಲು ಪಠ್ಯಕ್ರಮ, ಕಟ್ ಆಫ್ ಅಥವಾ ಅರ್ಹತಾ ಅಂಕಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯ. ಇದರ ನಂತರ ನಿಮ್ಮ ಪರೀಕ್ಷೆಗೆ ಬೇಕಾದ ಎಲ್ಲಾ ವಿಷಯಗಳ ಬಗ್ಗೆ ತಿಳಿಯಿರಿ. ಇದಕ್ಕೆ ಅನುಗುಣವಾಗಿ ನಿಮ್ಮ ಅಧ್ಯಯನ ಸಾಮಗ್ರಿಯನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಇದಕ್ಕಾಗಿ ನೀವು ಇಂಟರ್ನೆಟ್ ಸಹಾಯ ತೆಗೆದುಕೊಳ್ಳಬಹುದು ಮತ್ತು ಆನ್‌ಲೈನ್‍ನಲ್ಲಿ ಅನೇಕ ನೋಟ್ಸ್ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
2. ಬಳಿಕ ನಿಮ್ಮ ಅಧ್ಯಯನದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಎಲ್ಲಾ ವಿಷಯಗಳ ಪ್ರಕಾರ ನಿಮ್ಮ ಅಧ್ಯಯನದ ಸಮಯವನ್ನು ನಿಗದಿಪಡಿಸಿ ಮತ್ತು ವೇಳಾಪಟ್ಟಿಯನ್ನು ಸಿದ್ಧಪಡಿಸಿ. ಅದನ್ನು ನಿಮ್ಮ ಕೋಣೆಯ ಗೋಡೆಗೆ ಅಂಟಿಸಿಕೊಳ್ಳಿ. ಇದರೊಂದಿಗೆ ನಿಮ್ಮ ಮರೆವಿನ ಸಮಸ್ಯೆ ಕೊನೆಗೊಳ್ಳುತ್ತದೆ ಮತ್ತು ಟೈಮ್ ಟೇಬಲ್ ನಿಮ್ಮ ಮುಂದೆಯೇ ಇರುತ್ತದೆ. ಇದರಂತೆ ನೀವು ಅಧ್ಯಯನ ಮಾಡಬೇಕು. ಸರಿಯಾಗಿ ಅಧ‍್ಯಯನ ಮಾಡಿದರೆ ನಿಮಗೆ ಖಂಡಿತ ಯಶಸ್ಸು ಸಿಗುತ್ತದೆ.
3. ನೀವು ಪರೀಕ್ಷಾ ತಯಾರಿಯಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಆಗ ನೀವು ಆನ್‌ಲೈನ್ ಕೋಚಿಂಗ್‌ಗೆ ಸೇರಬಹುದು. ಇಂದಿನ ಯುಗದಲ್ಲಿ ನಿಮಗೆ ಆನ್‌ಲೈನ್ ಅಧ್ಯಯನಗಳ ಅತ್ಯುತ್ತಮ ಆಯ್ಕೆ ಇದೆ. ಇದರ ಸದುಪಯೋಗ ಪಡೆದುಕೊಳ್ಳಿ ಮತ್ತು ಇದರಿಂದ ನಿಮ್ಮ ಸಮಯವೂ ಉಳಿಯುತ್ತದೆ. ನೀವು ತರಬೇತಿ ಇಲ್ಲದೆ ಸ್ವಯಂ ಅಧ್ಯಯನವನ್ನು ಮಾಡಬಹುದು. ಅಂತರ್ಜಾಲದಲ್ಲಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು.
4. ನೀವು ಯೂಟ್ಯೂಬ್‌ನಲ್ಲಿ ಟಾಪರ್‌ಗಳ ಸಂದರ್ಶನಗಳನ್ನು ಸಹ ವೀಕ್ಷಿಸಬಹುದು. ಇದು ನಿಮಗೆ ಲಾಭದಾಯಕವಾಗುವ ಪರೀಕ್ಷಾ ತಯಾರಿಯ ಕೆಲವು ಮಾಹಿತಿ ನೀಡುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಂತ್ರ ರೂಪಿಸುವ ಮಾಡುವ ಪರೀಕ್ಷೆಯನ್ನು ಎದುರಿಸಬಹುದು.
5. ನಿಮ್ಮ ಅಧ್ಯಯನದ ಸಮಯದಲ್ಲಿ ಪಠ್ಯಕ್ರಮದ ಪ್ರಮುಖ ವಿಷಯಗಳನ್ನು ಸಣ್ಣ ಟಿಪ್ಪಣಿಗಳನ್ನು ಮಾಡಬೇಕು. ಅವುಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕು. ಪಠ್ಯಕ್ರಮ ಪೂರ್ಣಗೊಳಿಸಿದ ನಂತರ ಸಾಧ್ಯವಾದಷ್ಟು ಹಳೆಯ ಪಶ್ನೆ ಪತ್ರಿಕೆಗಳು ಮತ್ತು ಪರೀಕ್ಷಾ ಸರಣಿಗಳನ್ನು ಪರಿಹರಿಸಬೇಕು. ಈ ಮೂಲಕ ನಿಮ್ಮ ಪರೀಕ್ಷಾ ಸಿದ್ಧತೆಯನ್ನು ನೀವೇ ವಿಶ್ಲೇಷಿಸಬೇಕು. ಎಲ್ಲೇ ತಪ್ಪುಗಳು ಕಂಡರೂ ಸರಿಪಡಿಸಿಕೊಂಡು ಮುನ್ನಡೆಯಬೇಕು.
ಇದನ್ನೂ ಓದಿ: ಹಣದುಬ್ಬರ ಎಫೆಕ್ಟ್: ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.