ತೆರೆಮೇಲೆ ಅಬ್ಬರಿಸಲು ಸಜ್ಜಾದ 'ಮಾರ್ಟಿನ್‌'! ರಿಲೀಸ್‌ ಡೇಟ್‌ ಫಿಕ್ಸ್

Martin Release Date: ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್‌' ರಿಲೀಸ್‌ ಡೇಟ್‌ ಫಿಕ್ಸ್ ಆಗಿದೆ. 'ಪೊಗರು' ಸಿನಿಮಾದಲ್ಲಿನ ಅದ್ಭುತ ನಟನೆಯಿಂದ ಫ್ಯಾನ್ಸ್‌ ಮನಗೆದ್ದ ಧ್ರುವ ಈಗ 'ಮಾರ್ಟಿನ್' ಅವತಾರದಲ್ಲಿ ತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. 

Written by - Chetana Devarmani | Last Updated : May 5, 2022, 06:26 PM IST
  • ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ
  • ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್‌' ರಿಲೀಸ್‌ ಡೇಟ್‌ ಫಿಕ್ಸ್
  • ನೆಚ್ಚಿನ ನಟನ ಸಿನಿಮಾ ನೋಡಲು ಕಾತುರರಾದ ಫ್ಯಾನ್ಸ್‌
ತೆರೆಮೇಲೆ ಅಬ್ಬರಿಸಲು ಸಜ್ಜಾದ 'ಮಾರ್ಟಿನ್‌'! ರಿಲೀಸ್‌ ಡೇಟ್‌ ಫಿಕ್ಸ್  title=
ಮಾರ್ಟಿನ್‌

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್‌' ರಿಲೀಸ್‌ ಡೇಟ್‌ ಫಿಕ್ಸ್ ಆಗಿದೆ. 'ಪೊಗರು' ಸಿನಿಮಾದಲ್ಲಿನ ಅದ್ಭುತ ನಟನೆಯಿಂದ ಫ್ಯಾನ್ಸ್‌ ಮನಗೆದ್ದ ಧ್ರುವ ಈಗ 'ಮಾರ್ಟಿನ್' ಅವತಾರದಲ್ಲಿ ತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. ಮಾರ್ಟಿನ್‌ ಆಗಿ ಕ್ರೈಂ ಲೋಕದ ಕಥೆ ಹೇಳಲು ಬೆಳ್ಳಿತೆರೆಗೆ ಬರಲು ಸ್ಯಾಂಡಲ್‌ವುಡ್‌ನ ಆಕ್ಷನ್‌ ಪ್ರಿನ್ಸ್‌ ಸಿದ್ದರಾಗಿದ್ದಾರೆ. ಇದೀಗ 'ಮಾರ್ಟಿನ್‌' ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ನೆಚ್ಚಿನ ನಟನ ಸಿನಿಮಾ ನೋಡಲು ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದಾರೆ. 

ಇದನ್ನೂ ಓದಿ: KGF 2 behind the scenes: ಇಲ್ಲಿದೆ ನೋಡಿ ಕೆಜಿಎಫ್‌ 2 ಮೇಕಿಂಗ್‌ ವಿಡಿಯೋ

ಧ್ರುವ ಸರ್ಜಾ ಅಭಿನಯದ 5ನೇ ಸಿನಿಮಾ ಇದಾಗಿದ್ದು, ಇಂದು (ಮೇ 5) ಮಾರ್ಟಿನ್‌ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ನಿರ್ದೇಶಕ ಎಪಿ ಅರ್ಜುನ್ ಮಾರ್ಟಿನ್‌ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಬಾರಿಯೂ ತೆರೆ ಮೇಲೆ ಮೋಡಿ ಮಾಡಲು ಅದ್ದೂರಿಯಾಗಿಯೇ ಸಿದ್ದತೆ ಮಾಡಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ಅದ್ಧೂರಿ ಸಿನಿಮಾ ಭರ್ಜರಿ ಸಕ್ಸಸ್‌ ಕಂಡಿತ್ತು.  ಇದೀಗ ಮತ್ತೊಮ್ಮೆ ಇವರಿಬ್ಬರ ಕಾಂಬೆನೇಷನ್‌ನಲ್ಲಿ ಮಾರ್ಟಿನ್‌ ಚಿತ್ರ ಅಬ್ಬರಿಸಲು ಸಜ್ಜಾಗಿದೆ. 

'ಮಾರ್ಟಿನ್' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕಾಲೇಜ್ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆ ಹೊಂದಿರುವ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ನವಿರಾದ ಪ್ರೇಮಕಥೆಯೂ ಇರಲಿದೆ. ಲವ್ ಸ್ಟೋರಿ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಮಾರ್ಟಿನ್‌ ಇದೀಗ ಬೆಳ್ಳಿತೆರೆಗೆ ಬರುವ ದಿನಾಂಕ ಫಿಕ್ಸ್‌ ಆಗಿದೆ. 

ಸೆಪ್ಟೆಂಬರ್‌ 30 ಕ್ಕೆ ಮಾರ್ಟಿನ್‌ ಚಿತ್ರ ರಿಲೀಸ್‌ ಆಗಲಿದೆ. ಈ ಬಗ್ಗೆ ನಿರ್ಮಾಪಕ ಉದಯ್ ಕೆ ಮೆಹ್ತಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:Bigg Boss: ಬಿಗ್ ಬಾಸ್ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News