Akshaya Tritiya 2022 Do and Don't: ಭಾರತದಲ್ಲಿ ಹಲವು ತಿಥಿಗಳನ್ನು ಹಾಗೂ ಹಬ್ಬಗಳನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಕ್ಷಯ ತೃತೀಯ ಕೂಡ ಈ ತಿಥಿಗಳಲ್ಲಿ ಒಂದು ಎಂದು ಭಾವಿಸಲಾಗುತ್ತದೆ. ಈ ದಿನ ಆರಂಭಿಸಲಾಗುವ ಕಾರ್ಯದಲ್ಲಿ ಯಶಸ್ಸು ಸಿಕ್ಕೆ ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಅಕ್ಷಯ ತೃತಿಯಾ ದಿನ ಚಿನ್ನ ಖರೀಸಿರುವುದು ಅತ್ಯಂತ ಶುಭಕರ ಎಂದು ಭಾವಿಸಲಾಗುತ್ತದೆ. ಈ ದಿನ ಚಿನ್ನದಲ್ಲಿ ಮಾಡುವ ಹೂಡಿಕೆ ಕೂಡ ಸಾಕಷ್ಟು ಲಾಭ ತರುತ್ತದೆ. ಅಕ್ಷಯ ತೃತಿಯಾ ಚಿನ್ನದಲ್ಲಿ ಹೂಡಿಕೆ ಮಾಡಬಯಸುವವರಿಗೂ ಕೂಡ ತುಂಬಾ ವಿಶೇಷ ಎನ್ನಲಾಗುತ್ತದೆ. ಕಳೆದ ವರ್ಷ ಚಿನ್ನದಲ್ಲಿ ಹೂಡಿಕೆ ಮಾಡಿದವರು ಉತ್ತಮ ಆದಾಯ ಪಡೆದಿದ್ದಾರೆ.
ಅಕ್ಷಯ ತೃತಿಯಾ ದಿನ ಏನನ್ನು ಮಾಡಬೇಕು
>> ಸುಖ-ಶಾಂತಿ- 11 ಗೋಮತಿ ಚಕ್ರಗಳನ್ನು ಕೆಂಪು ಬಣ್ಣದ ವಸ್ತ್ರದಲ್ಲಿರಿಸಿ, ಅದನ್ನು ಬೆಳ್ಳಿಯ ಪೊಟ್ಟಣದಲ್ಲಿಟ್ಟು ಪೂಜಾ ಸ್ಥಾನದಲ್ಲಿರಿಸುವುದರಿಂದ ಮನೆಯಲ್ಲಿ ಸದಾ ಸುಖ-ಶಾಂತಿಯ ವಾತಾವರಣ ನೆಲೆಸುತ್ತದೆ.
>> ವ್ಯಾಪಾರದಲ್ಲಿ ಲಾಭಕ್ಕಾಗಿ ಏನು ಮಾಡಬೇಕು - 27 ಗೋಮತಿ ಚಕ್ರಗಳನ್ನು ಹಳದಿ ಅಥವಾ ಕೆಂಪು ಬಣ್ಣದ ವಸ್ತ್ರದಲ್ಲಿ ಕಟ್ಟಿ, ನಿಮ್ಮ ಪ್ರತಿಷ್ಠಾನದ ಮುಖ್ಯ ದ್ವಾರದಲ್ಲಿ ಕಟ್ಟುವುದರಿಂದ ನಿಮಗೆ ನಿಮ್ಮ ವ್ಯಾಪಾರದಲ್ಲಿ ನೀವು ಬಯಸಿದ ಲಾಭ ಪ್ರಾಪ್ತಿಯಾಗುತ್ತದೆ.
>> ಕಾರ್ಯಕ್ಷೇತ್ರ - ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ಎದುರಾಗುತ್ತಿದ್ದರೆ ಅಥವಾ ಬಡ್ತಿ ನಿಂತು ಹೋಗಿದ್ದರೆ, ಅಕ್ಷಯ ತೃತಿಯಾ ದಿನ ಶಿವಾಲಯಕ್ಕೆ ತೆರಳಿ ನಿಮ್ಮ ಮನೋಕಾಮನೆಯನ್ನು ಸ್ಮರಿಸಿ ಶಿವಲಿಂಗಕ್ಕೆ 11 ಗೋಮತಿ ಚಕ್ರಗಳನ್ನು ಅರ್ಪಿಸಿ. ಇದರಿಂದ ಸಾಕಷ್ಟು ಲಾಭ ಸಿಗಲಿದೆ.
ಇದನ್ನೂ ಓದಿ-Akshaya Tritiya 2022: ಇತಿಹಾಸ, ಪೂಜಾ ವಿಧಾನ, ಚಿನ್ನ ಖರೀದಿಸುವ ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ
>> ಭಾಗ್ಯೋದಯ- ಭಾಗ್ಯೋದಯಕ್ಕಾಗಿ ಅಕ್ಷಯ ತೃತಿಯಾ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು 11 ಗೋಮತಿ ಚಕ್ರಗಳ ಚೂರ್ಣ ತಯಾರಿಸಿ. ನಂತರ ನಿಮ್ಮ ಇಷ್ಟದೇವರನ್ನು ಸ್ಮರಿಸುತ್ತ ಆ ಚೂರ್ಣವನ್ನು ನಿಮ್ಮ ಮನೆಯ ಮುಖ್ಯದ್ವಾರದ ಮುಂದೆ ಪಸರಿಸಿ. ಈ ಉಪಾಯ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ದೌರ್ಭಾಗ್ಯ ಅಂತ್ಯಗೊಂಡು ಭಾಗ್ಯೋದಯ ಆರಂಭಗೊಳ್ಳುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.