ಬೆಂಗಳೂರು: ಆರೋಗ್ಯ ಕೆಟ್ಟರೆ ಬಡವರು ಬದುಕಲೇಬಾರದಾ? ಅವರು ಹಸಿವಿನಿಂದಲೇ ಸಾಯಬೇಕಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಆಯುಷ್ಮಾನ್ ಕಾರ್ಡ್ಗಾಗಿ ಜನಸಾಮಾನ್ಯರು ಬಿಪಿಎಲ್ ಕಾರ್ಡ್ ಪಡೆಯಲು ಪರದಾಡುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಅವರು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಬಡವರು & ಆರ್ಥಿಕ ದುರ್ಬಲರ ಸಬಲೀಕರಣ ಕೇವಲ ಆಡಳಿತ ನಡೆಸುತ್ತಿರುವ ಮಂತ್ರಿ ಮಹೋದಯರ ಭಾಷಣಗಳಿಗಷ್ಟೇ ಸೀಮಿತವಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಕೋವಿಡ್ ನಂತರ ಬದುಕು ದುಬಾರಿ ಅಷ್ಟೇ ಅಲ್ಲ, ಬರ್ಬರವೂ ಆಗಿದೆ ಎನ್ನುವುದು ಗೊತ್ತಿದ್ದರೂ ರಾಜ್ಯ ಸರ್ಕಾರ ಬಡವರನ್ನು ವ್ಯವಸ್ಥಿತವಾಗಿ ಸೌಲಭ್ಯಗಳಿಂದ ಹೊರಗಿಡುತ್ತಿರುವ ಒಳಮರ್ಮವೇನು? ಆರೋಗ್ಯ ಕೆಟ್ಟರೆ ಬಡವರು ಬದುಕಲೇಬಾರದಾ? ಅವರು ಹಸಿವಿನಿಂದಲೇ ಸಾಯಬೇಕಾ?’ ಎಂದು ಪ್ರಶ್ನಿಸಿದ್ದಾರೆ.
4,48,226 ಬಡಜನರು ಆಯುಷ್ಮಾನ್ ಭಾರತ್ ಕಾರ್ಡ್ʼಗಳನ್ನು ಪಡೆಯುವುದಕ್ಕೆ ಬಿಪಿಎಲ್ ಕಾರ್ಡ್ʼಗೆ ಅರ್ಜಿ ಹಾಕಿ ಕಚೇರಿಗಳ ಸುತ್ತ ಅಲೆಯುತ್ತಿದ್ದಾರೆ. ಇಂಥ ದುರಿತ ಕಾಲದಲ್ಲೂ 5 ತಿಂಗಳಾದರೂ ಆ ಅರ್ಜಿಗಳಿಗೆ ಮೋಕ್ಷವಿಲ್ಲ ಎಂದರೆ ಹೇಗೆ? 3/5#ಆಯುಷ್ಮಾನ್_ಭಾರತ್_ಕಾರ್ಡ್
— H D Kumaraswamy (@hd_kumaraswamy) April 29, 2022
ಇದನ್ನೂ ಓದಿ: PSI Reucirtment scam : ಪಿಎಸ್ಐ ಪರೀಕ್ಷೆ ರದ್ದು ಬೇಡ : ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯ
‘4,48,226 ಬಡಜನರು ಆಯುಷ್ಮಾನ್ ಭಾರತ್ ಕಾರ್ಡ್ಗಳನ್ನು ಪಡೆಯುವುದಕ್ಕೆ ಬಿಪಿಎಲ್ ಕಾರ್ಡ್ಗೆ ಅರ್ಜಿ ಹಾಕಿ ಕಚೇರಿಗಳ ಸುತ್ತ ಅಲೆಯುತ್ತಿದ್ದಾರೆ. ಇಂತಹ ದುರಿತ ಕಾಲದಲ್ಲೂ 5 ತಿಂಗಳಾದರೂ ಆ ಅರ್ಜಿಗಳಿಗೆ ಮೋಕ್ಷವಿಲ್ಲ ಎಂದರೆ ಹೇಗೆ? ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆಹಾರ & ನಾಗರಿಕ ಪೂರೈಕೆ ಇಲಾಖೆ ಬಿಪಿಎಲ್ ಅರ್ಜಿದಾರರನ್ನು ಸತಾಯಿಸುತ್ತಿದೆ. ಸರ್ಕಾರದ್ದು ಒಂದು ದಿಕ್ಕು, ಅಧಿಕಾರಿಗಳದ್ದು ಇನ್ನೊಂದು ದಿಕ್ಕು ಎನ್ನುವಂತಾಗಿದೆ’ ಎಂದು ಕಿಡಿಕಾರಿದ್ದಾರೆ.
ಹಳಿತಪ್ಪಿದ ಆಡಳಿತಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅತ್ಯಗತ್ಯ ಹಾಗೂ ಅತಿಸೂಕ್ಷ್ಮವಾದ ಆರೋಗ್ಯ & ಆಹಾರ ಇಲಾಖೆಗಳ ವೈಫಲ್ಯದಿಂದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮುಖ್ಯಮಂತ್ರಿ ಶ್ರೀ @BSBommai @CMofKarnataka ಅವರು ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕಿದೆ. 5/5#ಆಯುಷ್ಮಾನ್_ಭಾರತ್_ಕಾರ್ಡ್
— H D Kumaraswamy (@hd_kumaraswamy) April 29, 2022
‘ಹಳಿತಪ್ಪಿದ ಆಡಳಿತಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅತ್ಯಗತ್ಯ ಹಾಗೂ ಅತಿಸೂಕ್ಷ್ಮವಾದ ಆರೋಗ್ಯ & ಆಹಾರ ಇಲಾಖೆಗಳ ವೈಫಲ್ಯದಿಂದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕಿದೆ’ ಎಂದು ಎಚ್ಡಿಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: MB Patil : ಅಜಯ ದೇವಗನ್ ಗೆ ತಿಳುವಳಿಕೆ ಇಲ್ಲ : ಸುದೀಪ್ಗೆ ಸಾತ್ ನೀಡಿದ ಎಂಬಿ ಪಾಟೀಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.