ಅಪಾಯಕಾರಿ ಅಡುಗೆ ಎಣ್ಣೆ: ಭಾರತದಲ್ಲಿ ಅನೇಕ ಜನರು ಕ್ಯಾನ್ಸರ್ ಕಾಯಿಲೆಗೆ ಬಲಿಯಾಗುತ್ತಾರೆ. ಆದರೆ, ಅದರ ರೋಗಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಕಂಡು ಹಿಡಿಯಲು ಸಾಧ್ಯವಾಗದಿದ್ದಾಗ ಈ ರೋಗವು ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಕ್ಯಾನ್ಸರ್ ಬರಲು ಹಲವು ಕಾರಣಗಳಿರಬಹುದು. ಆದರೆ ಇದಕ್ಕೆ ಮುಖ್ಯ ಕಾರಣ ನಿಮ್ಮ ಅನಾರೋಗ್ಯಕರ ಆಹಾರ ಪದ್ಧತಿ ಎಂಬುದು ನಿಮಗೆ ತಿಳಿದಿದೆಯೇ. ಮೊದಲನೆಯದಾಗಿ, ನೀವು ಅಡುಗೆ ಮಾಡಲು ಬಳಸುವ ಅಡುಗೆ ಎಣ್ಣೆ ಎಷ್ಟು ಆರೋಗ್ಯಕರ ಎಂದು ಎಂದಾದರೂ ಪರೀಕ್ಷಿಸಿದ್ದೀರಾ.....
ಅಡುಗೆ ಎಣ್ಣೆ ಕ್ಯಾನ್ಸರ್ ಗೆ ಕಾರಣವಾಗಬಹುದು!
ಎಣ್ಣೆಯನ್ನು ಬಳಸದೆ ಭಾರತೀಯ ರುಚಿಕರವಾದ ಭಕ್ಷ್ಯಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ನೀವು ಅಡುಗೆ ಎಣ್ಣೆಯನ್ನು ಅತಿಯಾಗಿ ಬಳಸಿದರೆ ಅದು ದೇಹಕ್ಕೆ ಮಾರಕವಾಗಬಹುದು. ಹೆಚ್ಚಿನ ತಾಪಮಾನದಲ್ಲಿ ಬಿಸಿಯಾದ ಆಹಾರವು ದೇಹದ ಪಿಹೆಚ್ ಮಟ್ಟವನ್ನು ಅನಿಯಂತ್ರಿತಗೊಳಿಸುತ್ತದೆ, ಇದರಿಂದಾಗಿ ಹೊಟ್ಟೆಯ ಕೊಬ್ಬು, ಅಜೀರ್ಣ, ಗ್ಯಾಸ್, ಮಲಬದ್ಧತೆ ಮುಂತಾದ ಕಾಯಿಲೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಆರೋಗ್ಯಕರವಾಗಿ ತೂಕ ತಿಳಿಸಲು ನಿಮ್ಮ ಬೆಳಗಿನ ಉಪಹಾರದಲ್ಲಿ ಇವುಗಳನ್ನು ತಪ್ಪದೇ ಸೇವಿಸಿ
ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚು ಇದ್ದರೆ ಅಥವಾ ನಾವು ಹೆಚ್ಚು ಸಸ್ಯಜನ್ಯ ಎಣ್ಣೆಯನ್ನು ಬಳಸಿದರೆ ಅದು ತುಂಬಾ ಅಪಾಯಕಾರಿ ವಿಧಾನ ಎಂದು ಅನೇಕ ಸಂಶೋಧನೆಗಳಲ್ಲಿ ಕಂಡುಬಂದಿದೆ. ನೀವೂ ಸಹ ಇಂತಹ ಎಣ್ಣೆಯನ್ನು ಅಡುಗೆಯಲ್ಲಿ ಬಳಸುತ್ತಿದ್ದರೆ ತಕ್ಷಣ ನಿಮ್ಮ ಅಡುಗೆಮನೆಯಿಂದ ಇಂತಹ ಖಾದ್ಯ ತೈಲವನ್ನು ತೆಗೆದುಹಾಕಿ, ಇಲ್ಲದಿದ್ದರೆ ಅದು ಕ್ಯಾನ್ಸರ್ಗೆ ಕಾರಣವಾಗಬಹುದು.
ಈ ಎಣ್ಣೆಗಳಿಂದ ಅಂತರ ಕಾಯ್ದುಕೊಳ್ಳಿ:
ಸಾಮಾನ್ಯವಾಗಿ ಸೂರ್ಯಕಾಂತಿ ಎಣ್ಣೆಯನ್ನು ಆರೋಗ್ಯಕ್ಕೆ ತುಂಬಾ ಉತ್ತಮ ಎಂದು ಹೇಳಲಾಗುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಯಾವುದನ್ನೂ ಅತಿಯಾಗಿ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸೂರ್ಯಕಾಂತಿ, ಸೋಯಾಬೀನ್ ಮತ್ತು ತಾಳೆ ಎಣ್ಣೆ ಸ್ವಭಾವತಃ ಹೆಚ್ಚು ತಾಪ/ಹೀಟ್ ಆಗಿರುವ ಎಣ್ಣೆಗಳು. ಅವು ಆಲ್ಡಿಹೈಡ್ ರಾಸಾಯನಿಕವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ, ಇದು ಕ್ಯಾನ್ಸರ್-ಉಂಟುಮಾಡುವ ಅಂಶವಾಗಿದೆ. ಈ ಕಾರಣದಿಂದಾಗಿ, ದೇಹದಲ್ಲಿ ಕ್ಯಾನ್ಸರ್ ಕೋಶಗಳು ಉತ್ಪತ್ತಿಯಾಗಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಇಂತಹ ಎಣ್ಣೆಗಳನ್ನು ಸಾಧ್ಯವಾದಷ್ಟು ಹಿತ-ಮಿತವಾಗಿ ಬಳಸಲು ಪ್ರಯತ್ನಿಸಿ.
ಇದನ್ನೂ ಓದಿ- ಬಿಪಿಯನ್ನು ನಿಯಂತ್ರಿಸಲು ಬಾಳೆಹಣ್ಣು ಸಹಾಯ ಮಾಡುತ್ತದೆಯೇ?
ಕೆಲವು ಅಡುಗೆ ಎಣ್ಣೆಗಳಲ್ಲಿ ಬಹುಅಪರ್ಯಾಪ್ತ ಕೊಬ್ಬು ಹೆಚ್ಚು ಕಂಡುಬರುತ್ತದೆ. ಹೆಚ್ಚಿನ ತಾಪಮಾನದಲ್ಲಿ ಅದನ್ನು ಬಿಸಿಮಾಡಿದರೆ, ಅದು ಆಲ್ಡಿಹೈಡ್ ಆಗಿ ಒಡೆಯಲು ಪ್ರಾರಂಭಿಸುತ್ತದೆ. ಡಿಮೊನ್ಫೋರ್ಟ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದಲ್ಲಿ, ಕೆಲವು ತೈಲಗಳು ದೈನಂದಿನ ಬಳಕೆಯ ಮಿತಿಗಿಂತ 200 ಪಟ್ಟು ಹೆಚ್ಚು ಆಲ್ಡಿಹೈಡ್ ಅನ್ನು ಹೊಂದಿರುತ್ತವೆ ಎಂದು ತಿಳಿದುಬಂದಿದೆ.
ಯಾವ ತೈಲಗಳನ್ನು ಬಳಸಬೇಕು?
ತುಪ್ಪ, ಬಿಳಿ ಬೆಣ್ಣೆ, ಆಲಿವ್ ಎಣ್ಣೆಯನ್ನು ಒಳಗೊಂಡಂತೆ ಕ್ಯಾನ್ಸರ್ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಕೆಲವು ತೈಲಗಳಿವೆ. ಈ ತೈಲಗಳನ್ನು ಬಿಸಿ ಮಾಡಿದಾಗ ಆಲ್ಡಿಹೈಡ್ಗಳು ಕಡಿಮೆಯಾಗಿ ಒಡೆಯುತ್ತವೆ. ನೀವು ಎಣ್ಣೆಯುಕ್ತ ಆಹಾರದ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮವಾದರೂ, ಇದು ಕ್ಯಾನ್ಸರ್ ಮಾತ್ರವಲ್ಲದೆ ಮಧುಮೇಹ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಕೆಲವು ಸಂಶೋಧನೆಗಳು, ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.