ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಹಕ್ಕಿನಂತೆಯೇ ಮಹತ್ವದ್ದಾಗಿದೆ- ನಿಕ್ಕಿ ಹ್ಯಾಲೆ

   

Last Updated : Jun 27, 2018, 05:27 PM IST
ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಹಕ್ಕಿನಂತೆಯೇ ಮಹತ್ವದ್ದಾಗಿದೆ- ನಿಕ್ಕಿ ಹ್ಯಾಲೆ title=
Photo courtesy: ANI

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಅಮೇರಿಕಾದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ, ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಹಕ್ಕಿನಂತೆಯೇ ಮಹತ್ವದ್ದಾಗಿದೆ ಎಂದು ಹೇಳಿದರು.

ಜೂನ್ 26 ರಿಂದ 28 ರವರೆಗೆ ಭಾರತದ ಪ್ರವಾಸದಲ್ಲಿರುವ ಹ್ಯಾಲೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸುತ್ತಾ" ನಾಳೆಯ ಪ್ರವಾಸದಲ್ಲಿ ಅಂತರರ್ಧಮಿಯ ನಂಬಿಕೆಗಳ ಕುರಿತು ಎದುರು ನೋಡುತ್ತಿದ್ದೇನೆ. ಏಕೆಂದರೆ ಈಗ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳು  ಸ್ವಾತಂತ್ರದ ಹಕ್ಕಿನಷ್ಟೇ ಮಹತ್ವದ್ದಾಗಿದೆ" ಎಂದು ಹ್ಯಾಲೆ ಹೇಳಿದರು.

ವಾಷಿಂಗ್ಟನ್ ಮತ್ತು ನವದೆಹಲಿಗಳ ನಡುವಿನ ಸಂಬಂಧವನ್ನು ಬಲಪಡಿಸುವುದು ಈ ಭೇಟಿಯ ಪ್ರಮುಖ ಉದ್ದೇಶ ಎಂದು ತಿಳಿಸಿದರು. ಭಾರತದ ಈ ಅಮೆರಿಕ ಮತ್ತು ಭಾರತದ ನಡುವಿನ ಸಹಭಾಗಿತ್ವಕ್ಕೆ ಸಹಾಯಕವಾಗಲಿದೆ "ಎಂದು ಅವರು ತಿಳಿಸಿದರು. 

ಭಯೋತ್ಪಾದನೆ ಅಥವಾ ಮಿಲಿಟರಿ ದೃಷ್ಟಿಕೋನದಲ್ಲಿ ಹೆಚ್ಚು ಬಲವಾಗಿ ಒಟ್ಟಿಗೆ ಕಾರ್ಯನಿರ್ವಹಿಸುವ ಉತ್ತಮ ಮಾರ್ಗವಾಗಿದ್ದರೂ ಸಹ, ಭಾರತ ಮತ್ತು ಅಮೆರಿಕವು ಮಿತ್ರತ್ವದಲ್ಲಿ ಸಾಮಾನ್ಯವಾದ ಸಂಗತಿಗಳು ಬಹಳಷ್ಟಿವೆ" ಎಂದು ಹೇಳಿದರು.

Trending News