ಬುಧ ರಾಶಿ ಪರಿವರ್ತನೆ ಎಫೆಕ್ಟ್: ಇಂದು ಅಂದರೆ ಏಪ್ರಿಲ್ 25 ರಂದು ಬುಧ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಿದೆ. ಸಾಮಾನ್ಯವಾಗಿ ಬುಧನು ಪ್ರತಿ 21 ದಿನಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಆದರೆ ಇಂದು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಿರುವ ಬುಧನು ಮುಂದಿನ 68 ದಿನಗಳವೆರೆಗೆ ಇದೇ ರಾಶಿಯಲ್ಲಿ ಉಳಿಯಲಿದ್ದಾರೆ. ಬುಧವು ಏಪ್ರಿಲ್ 25 ರಿಂದ ಮೇ 10 ರವರೆಗೆ ವೃಷಭ ರಾಶಿಯಲ್ಲಿ ನೇರವಾಗಿ ಚಲಿಸುತ್ತದೆ ಮತ್ತು ನಂತರ ಜೂನ್ 3 ರವರೆಗೆ ಹಿಮ್ಮುಖವಾಗಿ ಚಲಿಸಲಿದ್ದಾನೆ. ಬುಧನ ಈ ಚಲನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಅದರಲ್ಲೂ ಕೆಲವು ರಾಶಿಯವರಿಗೆ ಈ ಸಮಯವು ಹಣದ ಸುರಿಮಳೆ ಸುರಿಸಲಿದೆ ಎಂದು ಹೇಳಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ ರಾಶಿಯಲ್ಲಿ ಬುಧ ರಾಶಿ ಪರಿವರ್ತನೆಯು ನಾಲ್ಕು ರಾಶಿಯವರಿಗೆ ತುಂಬಾ ಮಂಗಳಕರವಾಗಿದ್ದು ಈ ಸಮಯದಲ್ಲಿ ಆ ರಾಶಿಗಳು ಸರ್ವತೋಮುಖ ಅಭಿವೃದ್ದಿ ಹೊಂದಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಚಕ್ರಗಳು ಯಾವುವು ಎಂದು ತಿಳಿಯೋಣ...
ಮೇಷ ರಾಶಿ-
ಇಂದು ಬುಧನು ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ಸಮಯವು ಮೇಷ ರಾಶಿಯವರಿಗೆ ಆರ್ಥಿಕವಾಗಿ ಬಲ ತುಂಬಲಿದೆ. ಆದಾಯದ ಹೊಸ ಮೂಲಗಳಿಂದ ಆದಾಯ ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಸದೃಢವಾಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವರು. ಉದ್ಯೋಗಿಗಳಿಗೆ ಬಡ್ತಿ ಸಂಭವವಿದೆ.
ಇದನ್ನೂ ಓದಿ- Budh Gochar: ವೃತ್ತಿ-ವ್ಯವಹಾರದಲ್ಲಿ ಪ್ರಗತಿಶೀಲ ಗ್ರಹ ಸಂಚಾರ, ಇದು ನಿಮಗೆ ಶುಭವೋ ಅಶುಭವೋ ತಿಳಿಯಿರಿ
ವೃಷಭ ರಾಶಿ -
ಬುಧನ ರಾಶಿ ಪರಿವರ್ತನೆಯಿಂದ ವೃಷಭ ರಾಶಿಯವರಿಗೆ ಹೊಸ ಉದ್ಯೋಗ ಪ್ರಾಪ್ತಿಯಾಗಲಿದೆ. ಇದಲ್ಲದೆ ವೃತ್ತಿ ರಂಗದಲ್ಲಿ ಉನ್ನತಸ್ಥಾನಕ್ಕೇರುವ ಸಂಭವವಿದೆ. ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವವರು ಅಪಾರ ಲಾಭ ಗಳಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಮುಂದಿನ 68 ದಿನಗಳವರೆಗೆ ಈ ರಾಶಿಯವರ ಮೇಲೆ ಬುಧನ ಅನುಗ್ರಹ ಇರಲಿದೆ.
ಮಿಥುನ ರಾಶಿ -
ಬುಧ ಸಂಚಾರದಿಂದ ಮಿಥುನ ರಾಶಿಯವರಿಗೆ ಹೊಸ ಮನೆ, ವಾಹನ ಖರೀದಿಸುವ ಯೋಗವಿದೆ. ಇದಲ್ಲದೆ ಆದಾಯದ ಮೂಲಗಳು ಹೆಚ್ಚಲಿದ್ದು, ಹೂಡಿಕೆಗೆ ಉತ್ತಮ ಸಮಯ ಇದಾಗಿದೆ. ಇದಲ್ಲದೆ, ದಾಂಪತ್ಯ ಜೀವನದಲ್ಲಿ ಸಂತೋಷ ಇರಲಿದೆ. ಕುಟುಂಬದಲ್ಲಿ ಶುಭ ಸುದ್ದಿ ಸಿಗುವ ಸಾಧ್ಯತೆಯಿದೆ.
ಇದನ್ನೂ ಓದಿ- Budh Gochar: ಬುಧನ ರಾಶಿ ಪರಿವರ್ತನೆ; ಈ 6 ರಾಶಿಯವರಿಗೆ ಸಂಕಷ್ಟ
ತುಲಾ ರಾಶಿ -
ವೃಷಭ ರಾಶಿಗೆ ಬುಧ ಪ್ರವೇಶದಿಂದ ತುಲಾ ರಾಶಿಯವರ ಬಹುದಿನಗಳ ಸಂಕಷ್ಟ ನಿವಾರಣೆಯಾಗಲಿದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರಗತಿ ಕಂಡುಬರಲಿದ್ದು, ಈ ಸಮಯದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ. ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಹೊಸ ಆಸ್ತಿ ಖರೀಸುವ ಸಾಧ್ಯತೆ ಇದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.