IPL 2022, CSK Fast Bowler : ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವೇಗದ ಬೌಲರ್ ಮುಖೇಶ್ ಚೌಧರಿ ಮೊನ್ನೆ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಸಂಚಲನ ಸೃಷ್ಟಿಸಿದರು. ಮುಕೇಶ್ ಚೌಧರಿ, ರೋಹಿತ್ ಶರ್ಮಾ (0), ಇಶಾನ್ ಕಿಶನ್ (0) ಮತ್ತು ಡೆವಾಲ್ಡ್ ಬ್ರೆವಿಸ್ (4) ಅವರನ್ನು ಔಟ್ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ಟೀಂ ಭರ್ಜರಿಯಾಗಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ, ಮುಖೇಶ್ ಚೌಧರಿ ಹೆಸರಿನಲ್ಲಿ 4 ವಿಕೆಟ್ ಉರುಳಿದವು. ನಾಲ್ಕು ವಿಕೆಟ್ ಪಡೆದ ಮಿಂಚಿದ ಈ ಮುಖೇಶ್ ಚೌಧರಿ ಯಾರು? ಅವನ ಸಾಧನೆ ಏನು ಇಲ್ಲಿದೆ ನೋಡಿ..
ಸಿಎಸ್ಕೆಗೆ ದೊಡ್ಡ ಅಸ್ತ್ರ ಈ ಬೌಲರ್
ಮುಖೇಶ್ ಚೌಧರಿ ಈ ರೀತಿಯ ಪ್ರದರ್ಶನ ನೀಡಲು ತುಂಬಾ ಸಮಯ ತೆಗೆದುಕೊಂಡಿದ್ದಾರೆ, ಆದ್ರೆ, ಈಗ ತಂಡದ ಆಡಳಿತವು ತೋರಿಸಿದ ವಿಶ್ವಾಸವನ್ನು ಉಳಿಸಿಕೊಳ್ಳಲು ಮುಂದಾಗಿದ್ದು ಶ್ಲಾಘನೀಯ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಪರ್ಡೋದಾಸ್ ಗ್ರಾಮದಲ್ಲಿ ಜನಿಸಿದ ಮುಕೇಶ್ ಚೌಧರಿ, ಕ್ರಿಕೆಟ್ ಅವರ ನೆಚ್ಚಿನ ಕ್ರೀಡೆಯಾಗಿತ್ತು.
ಇದನ್ನೂ ಓದಿ : ದಿನೇಶ್ ಕಾರ್ತಿಕ್ ಪತ್ನಿಯನ್ನೇ ಪಟಾಯಿಸಿ ಮದುವೆಯಾಗಿದ್ದ ಕ್ರಿಕೆಟರ್ ಮುರಳಿ ವಿಜಯ್..!
ಇಡೀ ದಿನ ಫೀಲ್ಡಿಂಗ್ ಮಾಡಬೇಕಿತ್ತು
ಸಿಎಸ್ಕೆ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಖೇಶ್ ಚೌಧರಿ, 'ನಾನು ಚಿಕ್ಕವನಿದ್ದಾಗ, ಹಿರಿಯ ಆಟಗಾರರು ನನಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಬಿಡುತ್ತಿರಲಿಲ್ಲ, ಆದರೆ ನಾನು ಇಡೀ ದಿನ ಫೀಲ್ಡಿಂಗ್ ಮಾಡುತ್ತಿದ್ದೆ. ನನ್ನ ಮನೆಯಲ್ಲಿ ಪರಿಸ್ಥಿತಿ ಚೆನ್ನಾಗಿರಲಿಲ್ಲ. ನನ್ನ ಹಳ್ಳಿಯಲ್ಲಿ ಯಾವುದೇ ಕ್ಲಬ್ ಅಥವಾ ಯಾವುದೂ ವ್ಯವಸ್ಥೆ ಇರಲಿಲ್ಲ, ಆದ್ದರಿಂದ ಇದು ಟೆನ್ನಿಸ್ ಬಾಲ್ ನಿಂದ ನಾನು ಪ್ರಾಕ್ಟೀಸ್ ಮಾಡುತ್ತಿದ್ದೆ ಎಂದರು.
ಬೋರ್ಡಿಂಗ್ ಶಾಲೆಯಲ್ಲಿ ಶಿಕ್ಷಣ
ಮುಂದುವರೆದು ಮಾತನಾಡಿದ ಮುಖೇಶ್ ಚೌಧರಿ, ' ನಮ್ಮ ಗ್ರಾಮದಲ್ಲಿ ಓದಲು ಹೆಚ್ಚಿನ ಸೌಲಭ್ಯ ಇಲ್ಲದ ಕಾರಣ ನನ್ನ ತಂದೆ ನನ್ನನ್ನು ನಾಲ್ಕನೇ ತರಗತಿಯಲ್ಲಿ ಬೋರ್ಡಿಂಗ್ ಶಾಲೆಗೆ ಸೇರಿಸಿದ್ದರು. ನಾನು ನಂತರ ಬ್ಯಾಸ್ಕೆಟ್ಬಾಲ್, ವಾಲಿಬಾಲ್, ಹಾಕಿಯಂತಹ ಇತರ ಕ್ರೀಡೆಗಳನ್ನು ಆಡಲು ಪ್ರಯತ್ನಿಸಿದೆ. ಆದರೆ ಕ್ರಿಕೆಟ್ ಯಾವಾಗಲೂ ನನ್ನ ನೆಚ್ಚಿನ ಆಟವಾಗಿತ್ತು ಎಂದರು.
ಕ್ರಿಕೆಟ್ನತ್ತ ಗಮನ ಹರಿಸಿದ್ದು ಹೇಗೆ?
'ನಾನು ನನ್ನ ಪೋಷಕರಿಗೆ ಹೇಳಿರಲಿಲ್ಲ, ಆದರೆ ನಾನು ಕ್ರಿಕೆಟ್ನತ್ತ ಗಮನ ಹರಿಸಲು ಪ್ರಾರಂಭಿಸಿದೆ. ಪತ್ರಿಕೆಗಳಲ್ಲಿ ನನ್ನ ಹೆಸರು ಬಂದಾಗ ನಾನು ಅವರಿಗೆ ಹೇಳಿದೆ. ಆಗ ನನ್ನ ತಂದೆ ಓಕೆ ಆದರೆ ಓದು ಮುಂದುವರಿಸು, ಏಕೆಂದರೆ ಬಹಳಷ್ಟು ಜನ ಕ್ರಿಕೆಟ್ ಆಡುತ್ತಾರೆ. ಓದಿನಲ್ಲಿ ಹಿಂದೆ ಬೀಳ್ತಾರೆ ಎಂದು ಸಲಹೆ ನೀಡಿದ್ದರು ಎಂದರು.
ಈ ವಿಷಯ ನನ್ನ ತಂದೆ ತಾಯಿಗೆ ಗೊತ್ತಿರಲಿಲ್ಲ
'ಎರಡು ವರ್ಷಗಳ ನಂತರ ನಾನು ರಣಜಿ ಟ್ರೋಫಿ (ಮಹಾರಾಷ್ಟ್ರಕ್ಕೆ) ಆಡಿದ ಮೇಲೆ ನನ್ನ ತಂದೆ ತಾಯಿಗೆ ನನ್ನ ಮಗ ಕ್ರಿಕೆಟ್ ನಲ್ಲಿ ಏನಾದ್ರು ಸಾಧನೆ ಮಾಡ್ತಾನೆ ಎಂದು ನನಗೆ ಬೆಂಬಲ ನೀಡಿದರು. ನಾನು ರಾಜ್ಯಕ್ಕೆ ಆಯ್ಕೆಯಾಗುವವರೆಗೂ ನಾನು ಕ್ರಿಕೆಟ್ ಸೀರಿಯಸ್ ಆಗಿ ಆಡುತ್ತಿದ್ದೇನೆ ಎಂಬುದು ನನ್ನ ಅಣ್ಣನಿಗೆ ಮಾತ್ರ ಗೊತ್ತಿತ್ತು. ನನ್ನ ತಂದೆ-ತಾಯಿಗೆ ಗೊತ್ತಿರಲಿಲ್ಲ.' ಎಂದು ಹೇಳಿದ್ದಾರೆ.
ಇದನ್ನೂ ಓದಿ : DC vs RR, IPL 2022: ದೆಹಲಿ ಕ್ಯಾಪಿಟಲ್ಸ್ ಗೆ ರಾಜಸ್ಥಾನ್ ರಾಯಲ್ಸ್ ಸವಾಲು!
ಮುಖೇಶ್ ಚೌಧರಿಯನ್ನು ಬೆಂಬಲಿಸಿದ ಕುಟುಂಬದವರು
ಮುಂಬೈ ವಿರುದ್ಧ ಚೌಧರಿ ನೀಡಿದ ಅದ್ಭುತ ಪ್ರದರ್ಶನವನ್ನು ಅವರ ತಂದೆ ನಿಜವಾಗಲು ಹೆಮ್ಮೆ ಪಡುತ್ತಾರೆ. 'ನನ್ನ ಕ್ರಿಕೆಟ್ ಪ್ರಯಾಣ ತುಂಬಾ ಕಷ್ಟಕರವಾಗಿತ್ತು, ಆದರೆ ನನ್ನ ಕುಟುಂಬ ನನಗೆ ಬೆಂಬಲವಾಗಿ ನಿಂತಿತ್ತು. ನಾನು ಪುಣೆಯಲ್ಲಿ ಒಬ್ಬಂಟಿಯಾಗಿದ್ದಾಗ, ನನ್ನ ಸಹೋದರಿ ನನಗೆ ತುಂಬಾ ಬೆಂಬಲ ನೀಡಿದರು. ಅವಳಿಲ್ಲದೆ ನಾನು ಏನೂ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ನಾನು ಆಯ್ಕೆಯಾದಾಗಲೂ ಮುಂದಿನ ಹೆಜ್ಜೆ ಬಗ್ಗೆ ಯೋಚಿಸಿ ಚೆನ್ನಾಗಿ ಅದು ಎಂದು ಹುರಿದುಂಬಿಸುತ್ತಾಳೆ ಎಂದು ಸಹೋದರಿಯನ್ನ ನೆನಪಿಸಿಕೊಂಡರು. ಹಳ್ಳಿಯಿಂದ ಬಣದ ಚೌದರಿ ಸಧ್ಯ ಈಗ 'ಸಿಎಸ್ಕೆ ತಂಡ'ದ ಸ್ಪೋಟಕ ಬೌಲರ್ ಆಗಿ ಹೊರಹೊಮ್ಮಿರುವುದು ತುಂಬಾ ರೋಚಕ ಕಥೆ ಎಂದು ಹೇಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.