Chamarajanagar: ತಾಯಿ ಕಳೆದುಕೊಂಡ ನೋವಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ

ತನ್ನ ಮಗ ಚೆನ್ನಾಗಿ ಓದಬೇಕೆಂದು ಕನಸು ಕಂಡಿದ್ದ ಅಮ್ಮನ ಆಸೆಯಂತೆ ದುಃಖದ ನಡುವೆಯೇ ವಿದ್ಯಾರ್ಥಿ ಪರೀಕ್ಷೆ ಬರೆದಿರುವ ಮನಕಲಕುವ ಈ ಘಟನೆ ಹನೂರಿನಲ್ಲಿ ನಡೆದಿದೆ.

Written by - Zee Kannada News Desk | Last Updated : Apr 11, 2022, 08:37 PM IST
  • ತಾಯಿಯನ್ನು ಕಳೆದುಕೊಂಡ ದುಃಖದಲ್ಲಿಯೇ SSLC ಪರೀಕ್ಷೆ ಬರೆದ ವಿದ್ಯಾರ್ಥಿ
  • ಪ್ರಸಕ್ತ ಸಾಲಿನ SSLC ವಿಜ್ಞಾನ ವಿಷಯದ ಕೊನೆ ಪರೀಕ್ಷೆ ಬರೆದ ಸಂಜಯ್
  • ಚಾಮರಾಜನಗರದ ಹನೂರಿನಲ್ಲಿ ನಡೆದಿರುವ ಮನಕಲಕುವ ಘಟನೆ
Chamarajanagar: ತಾಯಿ ಕಳೆದುಕೊಂಡ ನೋವಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ title=
ತಾಯಿ ಅಗಲಿಕೆ ಮಧ್ಯೆ ಪರೀಕ್ಷೆ ಬರೆದ ವಿದ್ಯಾರ್ಥಿ

ಚಾಮರಾಜನಗರ: ವಿದ್ಯಾರ್ಥಿಗಳ ಪಾಲಿಗೆ SSLC ಒಂದು ಅಂತಿಮ ಘಟ್ಟ. ಅದೇ ರೀತಿ ಮಕ್ಕಳಿಗೆ ತಾಯಿಯೇ ಸರ್ವಸ್ವ.‌ ತಾಯಿ‌ಯನ್ನು ಕಳೆದುಕೊಂಡ ನೋವಿನಲ್ಲೂ ವಿದ್ಯಾರ್ಥಿಯೊಬ್ಬ ಸೋಮವಾರ SSLC ಪರೀಕ್ಷೆಯನ್ನು ಬರೆದಿದ್ದಾನೆ. ತನ್ನ ಮಗ ಚೆನ್ನಾಗಿ ಓದಬೇಕೆಂದು ಕನಸು ಕಂಡಿದ್ದ ಅಮ್ಮನ ಆಸೆಯಂತೆ ದುಃಖದ ನಡುವೆಯೇ ವಿದ್ಯಾರ್ಥಿ ಪರೀಕ್ಷೆ ಬರೆದಿರುವ ಮನಕಲಕುವ ಈ ಘಟನೆ ಹನೂರಿನಲ್ಲಿ ನಡೆದಿದೆ.

ಸಂಜಯ್ ಎಂಬಾತ ಪ್ರಸಕ್ತ ಸಾಲಿನ SSLCಯ ವಿಜ್ಞಾನ ವಿಷಯದ ಕೊನೆಯ ಪರೀಕ್ಷೆಯನ್ನು ಬರೆದ ನಂತರ ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾನೆ. ಹನೂರು ಪಟ್ಟಣದ ಮಾರಿಗುಡಿಯ ಬೀದಿ ನಿವಾಸಿ ಸಂಜಯ್ ಕ್ರಿಸ್ತರಾಜ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ.

ಇದನ್ನೂ ಓದಿ: ಜೆಡಿಎಸ್ ಪಕ್ಷದ ದಲಿತ ಸಿಎಂ ಅಭ್ಯರ್ಥಿ ಯಾರು?: ಎಚ್‍ಡಿಕೆಗೆ ಬಿಜೆಪಿ ಪ್ರಶ್ನೆ

ಸಂಜಯ್ ತಾಯಿ ಆಶಾರಾಣಿ ಅವರು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾನುವಾರ ತಡರಾತ್ರಿ ಕಾಯಿಲೆ ಉಲ್ಭಣಗೊಂಡು ಅವರು ಕೊನೆಯುಸಿರೆಳೆದಿದ್ದಾರೆ. ತಾಯಿಯ ಸಾವಿನಿಂದ ದುಃಖಿತನಾಗಿದ್ದ ಸಂಜಯ್‌ಗೆ ಸಾಂತ್ವನ ಹೇಳಿದ ಶಾಲೆಯ ಶಿಕ್ಷಕರು, ಆತನನ್ನು ಮನವೊಲಿಸಿ ವಿಜ್ಞಾನ ಪರೀಕ್ಷೆ ಬರೆಯಲು ಪ್ರೇರೇಪಿಸಿದ್ದರು.

ಹಿರಿಯರ ಸಲಹೆ, ತಮ್ಮ ತಾಯಿ ಕಂಡಿದ್ದ ಆಸೆಯಂತೆ  ಸಂಜಯ್‍ ಇಂದು ದುಃಖದ ನಡುವೆಯೇ ಎಸ್‍ಎಸ್‍ಎಲ್‍ಸಿ ವಿಜ್ಞಾನ ಪರೀಕ್ಷೆಯನ್ನು ಹನೂರು ಪಟ್ಟಣದ ಕ್ರಿಸ್ತರಾಜ ಶಾಲೆಯಲ್ಲಿ ಬರೆದಿದ್ದಾನೆ. ಪರೀಕ್ಷೆ ಮುಕ್ತಾಯವಾದ ಬಳಿಕ ತಾಯಿಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ್ದಾನೆ.

ಇದನ್ನೂ ಓದಿ: National Herald Case: ಇಡಿ ವಿಚಾರಣೆಗೆ ಹಾಜರಾದ ಮಲ್ಲಿಕಾರ್ಜುನ ಖರ್ಗೆ

ಈ ಬಗ್ಗೆ ಮಾತನಾಡಿರುವ ಕ್ರಿಸ್ತರಾಜ ಕನ್ನಡ ಮಾಧ್ಯಮ ಮುಖ್ಯಶಿಕ್ಷಕ ರಾಬರ್ಟ್ ಧನರಾಜ್, ‘ಸಂಜಯ್ ತಾಯಿ ಭಾನುವಾರ ರಾತ್ರಿ ಮೃತಪಟ್ಟಿರುವ ಬಗ್ಗೆ ಮಾಹಿತಿ ತಿಳಿಯಿತು. ಸೋಮವಾರ ಮುಂಜಾನೆ ನಾನು ಹಾಗೂ ಸಹಶಿಕ್ಷಕರೆಲ್ಲರೂ ಸಂಜಯ್ ತಾಯಿ ಅಂತಿಮ ದರ್ಶನ ಪಡೆದು ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದೆವು. ಅದಕ್ಕೆ ಸಂಜಯ್ ಕೂಡ ಒಪ್ಪಿ ಪರೀಕ್ಷೆ ಬರೆದಿದ್ದಾನೆ' ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News