ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡುತ್ತಾರೆ. ತಮ್ಮ ನೆಚ್ಚಿನ ನಟನನ್ನು ಮಾತನಾಡಿಸಲು, ಭೇಟಿ ಆಗಲು ಎಂತಹ ರಿಸ್ಕ್ ತಗೆದುಕೊಳ್ಳಲು ಸಿದ್ಧರಾಗಿರುತ್ತಾರೆ. ನಟ ಕಿಚ್ಚ ಸುದೀಪ್(Kiccha Sudeep) ಅವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಒಮ್ಮೆಯಾದರೂ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಬೇಕು ಅನ್ನೋದು ಫ್ಯಾನ್ಸ್ಗಳ ಆಸೆಯಾಗಿರುತ್ತದೆ. ‘ಕಿಚ್ಚ’ನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಲಬುರಗಿಯಿಂದ ಬರೋಬ್ಬರಿ 14 ದಿನಗಳ ಕಾಲ ನಡೆದುಕೊಂಡೇ ಬಂದಿದ್ದಾರೆ.
ಅಂದಹಾಗೆ ಕಲಬುರಗಿ(Kalaburagi) ಜಿಲ್ಲೆ ಜೇವರ್ಗಿ ತಾಲೂಕಿನ ಅವರಾದಿ ಗ್ರಾಮದ ನಿವಾಸಿಗಳಾದ ರೇಣುಕಾ, ಗೋಪಾಲ, ಮರೇಮ್ಮ ನಟ ಕಿಚ್ಚ ಸುದೀಪ್ ಅವರ ಅಭಿಮಾನಿಗಳು. ತಮ್ಮ ನೆಚ್ಚಿನ ನಟನನ್ನು ನೋಡಲೇಬೇಕೆಂಬ ಆಸೆಯಿಂದ ಊರಿನಿಂದ ಕಾಲ್ನಡಿಗೆಯಲ್ಲೇ ಹೊರಟ ಅಭಿಮಾನಿಗಳು ಇಂದು(ಏಪ್ರಿಲ್ 5) ನಟ ಕಿಚ್ಚ ಸುದೀಪ್(Kiccha Sudeep)ರನ್ನು ಬೆಂಗಳೂರಿನ ಪುಟ್ಟೇನಹಳ್ಳಿ ನಿವಾಸದಲ್ಲಿ ಭೇಟಿ ಆಗಿದ್ದಾರೆ.
ಇದನ್ನೂ ಓದಿ: For Regn: ‘ದಿಯಾ’ ಪೃಥ್ವಿ ಜೊತೆ ‘ಫಾರ್ ರಿಜಿಸ್ಟ್ರೇಷನ್’ ಆದ ಮಿಲನಾ ನಾಗರಾಜ್!
560 ಕಿ.ಮೀ. ನಡಿಗೆ..!
ಸುಮಾರು 560 ಕಿಲೋ ಮೀಟರ್ ದೂರದಿಂದ ನಡೆದುಕೊಂಡೇ ಬಂದ ಈ ಅಭಿಮಾನಿಗಳು ಇಂದು ಬೆಂಗಳೂರಿನಲ್ಲಿ(Bengaluru) ಸುದೀಪ್ ಅವರನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ. 14 ದಿನದ ಹಿಂದೆ ಕಲಬುರಗಿ(Kalaburagi) ಜಿಲ್ಲೆ ಜೇವರ್ಗಿಯ ಅವರಾದಿ ಗ್ರಾಮದಿಂದ ನಡೆಯುತ್ತಲೇ ಬಂದ ಇವರು ಮಂಗಳವಾರ ಬೆಂಗಳೂರು ತಲುಪಿದ್ದಾರೆ. ಪ್ರತಿದಿನ 40 ಕಿಲೋ ಮೀಟರ್ ದೂರ ನಡೆಯುತ್ತಾ ಬಂದು ಇಂದು ರಾಜಧಾನಿ ಬೆಂಗಳೂರು ತಲುಪಿದ್ದರು ಕಿಚ್ಚ ಸುದೀಪ್(Kiccha Sudeep)ಅವರ ಅಭಿಮಾನಿಗಳು.
ಇನ್ನು ತಮ್ಮನ್ನು ನೋಡಲು ನೂರಾರು ಕಿಲೋ ಮೀಟರ್ ದೂರದಿಂದ ನಡೆಯುತ್ತಲೇ ಬಂದ ಅಭಿಮಾನಿಗಳನ್ನು ನಟ ಕಿಚ್ಚ ಸುದೀಪ್ ಅತ್ಯಂತ ಆನಂದದಿಂದ ಬರಮಾಡಿಕೊಂಡಿದ್ದಾರೆ. ಮನೆಗೆ ಕರೆಸಿ ಮಾನತಾಡಿಸಿದ ನಟ ಕಿಚ್ಚ ಸುದೀಪ್ ಅಭಿಮಾನಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.
ಇದನ್ನೂ ಓದಿ: ‘ಹೊಂದಿಸಿ ಬರೆಯಿರಿ’ ಟೀಸರ್ ರಿಲೀಸ್! ನಿಮ್ಮ ವಿದ್ಯಾರ್ಥಿ ಜೀವನ ನೆನಪಿಸುತ್ತೆ ಈ ಕತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.