State Song: ನಾಡಗೀತೆಗೆ ಮನಸೋತ ರಾಜಸ್ಥಾನದ ಕನ್ನಡ ಪ್ರೇಮಿ ಮಹೇಂದ್ರ ಮುನ್ನೋತ್

State Song New Version - ಯುಗದ ಕವಿ ರಾಷ್ಟ್ರಕವಿ ಕುವೆಂಪು (Rashtra Kavi Kuvempu) ರಚನೆಯ  'ಜಯಭಾರತ  ತನುಜಾತೆ, ಜಯಹೇ ಕರ್ನಾಟಕ ಮಾತೆ' (Bharata Jananiya Tanujate) ನಮ್ಮ ನಾಡಗೀತೆಗೆ (State Song) ಹೊಸ ರೂಪ.  ಈ ನಾಡ ಗೀತೆಯನ್ನು  ಹಲವಾರು ಗಾಯಕರು ತಮ್ಮದೇ ಆದ ಶೈಲಿಯಲ್ಲಿ ಹಾಡಿದ್ದಾರೆ. 

Written by - YASHODHA POOJARI | Edited by - Nitin Tabib | Last Updated : Mar 30, 2022, 01:59 PM IST
  • ನಾಡಗೀತೆಗೆ ಹೊಸ ಟಚ್
  • ನಾಡಗೀತೆಗೆ ಹೊಸರಾಗದ ಜೊತೆಗೆ ಹೊಸ ದೃಶ್ಯರೂಪ
  • ರಾಜಸ್ಥಾನದ ಉದ್ಯಮಿ ಮಹೇಂದ್ರ ಮುನ್ನೋತ್ ಕನ್ನಡ ಪ್ರೇಮ
State Song: ನಾಡಗೀತೆಗೆ ಮನಸೋತ ರಾಜಸ್ಥಾನದ ಕನ್ನಡ ಪ್ರೇಮಿ ಮಹೇಂದ್ರ ಮುನ್ನೋತ್ title=
New Touch To State Song

ಬೆಂಗಳೂರು : State Song New Version - ಯುಗದ ಕವಿ ರಾಷ್ಟ್ರಕವಿ ಕುವೆಂಪು (Rashtra Kavi Kuvempu) ರಚನೆಯ  'ಜಯಭಾರತ  ತನುಜಾತೆ, ಜಯಹೇ ಕರ್ನಾಟಕ ಮಾತೆ' (Bharata Jananiya Tanujate) ನಮ್ಮ ನಾಡಗೀತೆಗೆ (State Song) ಹೊಸ ರೂಪ.  ಈ ನಾಡ ಗೀತೆಯನ್ನು  ಹಲವಾರು ಗಾಯಕರು ತಮ್ಮದೇ ಆದ ಶೈಲಿಯಲ್ಲಿ ಹಾಡಿದ್ದಾರೆ. 

ಆರಂಭದಿಂದಲೂ ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಗೌರವ, ಅಭಿಮಾನ ಇಟ್ಟುಕೊಂಡಿರುವ ನಟ, ನಿರ್ಮಾಪಕ, ಉದ್ಯಮಿ ಹಾಗೂ ಗೋಪ್ರೇಮಿ  ಮಹೇಂದ್ರ ಮುನ್ನೋತ್ (Mahendra Mannot),  ನಮ್ಮ ನಾಡಗೀತೆಗೆ ಹೊಸರಾಗದ ಜೊತೆಗೆ ಹೊಸ ದೃಶ್ಯರೂಪ ನೀಡಿದ್ದಾರೆ. ಹಾಡಿನ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ (Renukamba Studio)  ನಡೆದಿದೆ. ಬಿ.ಪಿ.ಹರಿಹರನ್ ಈ ಹಾಡಿನ ನಿರ್ದೇಶನ ಮಾಡಿದ್ದು, ವಿಜಯಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಪವನ್ ನೃತ್ಯ ನಿರ್ದೇಶನ ಹಾಗೂ ಕಲಾನಿರ್ದೇಶನ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಮಹೇಂದ್ರ ಮುನ್ನೋತ್, ಇತ್ತೀಚೆಗೆ ನಮ್ಮ ನಾಡಗೀತೆಯನ್ನು ಮೊಟಕುಗೊಳಿಸಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದರು. ಕುವೆಂಪು ಅವರಂತಹ ಮಹಾನ್ ಕವಿ ರಚಿಸಿದ ಸಾಹಿತ್ಯವನ್ನು ಕಡಿತ ಮಾಡಿರುವುದು ಸರಿಯಲ್ಲ. ಹೀಗಾಗಿ ಈ ಗೀತೆಗೆ ಹೊಸ ರಾಗ ಜೋಡಿಸಿ ಚಿತ್ರೀಕರಣ ಮಾಡಿದ್ದೇವೆ. ನಾನು ರಾಜಸ್ಥಾನದಲ್ಲಿ ಜನಿಸಿದವನಾದರೂ ಕನ್ನಡವೇ ನನ್ನ ಉಸಿರು, ಈ ನೆಲ  ನನಗೆ ಎಲ್ಲವನ್ನೂ ಕೊಟ್ಟಿದೆ. ಈ ಹಾಡನ್ನು ಎಲ್ಲರೂ ವೀಕ್ಷಿಸಿ ಕನ್ನಡವನ್ನು ಬೆಳೆಸಿ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ-ಚೆನ್ನವೀರ ಕಣವಿ ಹೆಸರಿನಲ್ಲಿ ಕವಿವಿ ಹಾಗೂ ಎಸ್‍ಡಿಎಂನಲ್ಲಿ ಚಿನ್ನದ ಪದಕಗಳ ಸ್ಥಾಪನೆ

ಈ ಸಂದರ್ಭದಲ್ಲಿ ಮಾತನಾಡಿರುವ ಸಂಗೀತ ನಿರ್ದೇಶಕ ವಿಜಯಕೃಷ್ಣ ಇದನ್ನು ಎಸ್ ಪಿ ಬಿ (SP Balasubramanian) ಅವರು ಹಾಡಬೇಕಿತ್ತು. ಹಾಡು ಕೇಳಿ ಒಪ್ಪಿಗೆ ಕೂಡ ನೀಡಿದ್ದರು. ಹೊಸ ಟ್ಯೂನ್ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆಯಿದೆ ಎಂದರು. ಇದೇ ವೇಳೆ ಈ ಗೀತೆಯನ್ನು ಕೊಡಚಾದ್ರಿಯಲ್ಲಿ ಚಿತ್ರೀಕರಿಸಬೇಕಿತ್ತು, ಆದರೆ, ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ಚಿಕ್ಕಮಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದೇವೆ ಎಂದು ನಿರ್ದೇಶಕ ಹರಿಹರನ್ ಹೇಳಿದರು.ಈ ಗೀತೆಯನ್ನು  ಎರಡು ಶೈಲಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ  ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-"ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು"

ಒಟ್ಟಾರೆಯಾಗಿ ಹೇಳುವುದಾದರೆ, ನಾಡಪ್ರೇಮಿಗಳಿಗೆ ಮಹಾನ್ ಕವಿ ಕುವೆಂಪುರವರು ರಚಿಸಿರುವ ನಾಡಗೀತೆಯನ್ನು  ಮತ್ತೊಂದು ಶೈಲಿಯಲ್ಲಿ ನೋಡಲು, ಆಸ್ವಾದಿಸಲು ಸಿಗಲಿದೆ ಎಂಬುದು ಮಾತ್ರ ಒಂದು ಸಂತಸದ ಸುದ್ದಿ ಅಂತಾನೆ ಹೇಳಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News