ಬೆಂಗಳೂರು: ಹಿಜಾಬ್ ವಿವಾದ(Hijab Row) ವಿಚಾರವಾಗಿ ಸಿದ್ದರಾಮಯ್ಯ(Siddaramaiah) ಹೇಳಿಕೆಗೆ ಅವರೇ ಉತ್ತರ ಕೊಡುತ್ತಾರೆ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ(BJP) ತಿರುಗೇಟು ನೀಡಿದೆ. #ಅಸಹಾಯಕಡಿಕೆಶಿ ಹ್ಯಾಶ್ ಟ್ಯಾಗ್ ಬಳಸಿ ಈ ಬಗ್ಗೆ ಭಾನುವಾರ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
‘ಸದಸ್ಯತ್ವ ಅಭಿಯಾನದಲ್ಲಿ ನಿರೀಕ್ಷಿತ ಗುರಿ ತಲುಪಲಾರದೆ ಸೋತು ಸುಣ್ಣವಾಗಿರುವ ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar)ಅವರಿಗೆ ಈಗ ಸಿದ್ದರಾಮಯ್ಯ ವಿಲನ್ ಆಗಿ ಪರಿಣಮಿಸಿದ್ದಾರೆ. ಹಿಂದುತ್ವದ ವಿರುದ್ಧ ಮಾತನಾಡಿ ಡಿಕೆಶಿ ನಾಯಕತ್ವವನ್ನು ಮುಗಿಸುವುದು ಸಿದ್ದರಾಮಯ್ಯ ಮೊದಲ ಗುರಿ. ಇದನ್ನು ನೋಡಿಯೂ #ಅಸಹಾಯಕಡಿಕೆಶಿ ಎಂಬಂತಾಗಿದ್ದಾರೆ’ ಅಂತಾ ಕುಟುಕಿದೆ.
√ ತಮ್ಮ ವಿರುದ್ಧ ಉಗ್ರಪ್ಪ ಹೇಳಿಕೆ ನೀಡಿದರೂ ಡಿಕೆಶಿ ಏನು ಮಾಡಲಿಲ್ಲ.
√ ಕೆಪಿಸಿಸಿ ಪ್ರಚಾರ ಸಮಿತಿಗೆ ಎಂ.ಬಿ.ಪಾಟೀಲರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದಾಗಲೂ ಮೌನಕ್ಕೆ ಶರಣಾದರು.
√ ಹಿಜಾಬ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ತಿಳಿ ಹೇಳಿದಾಗಲೂ ಸಿದ್ದರಾಮಯ್ಯ ಮಾತೇ ಕೇಳಲಿಲ್ಲ.
ಇದರರ್ಥ ಡಿಕೆಶಿ ಅಸಹಾಯಕರೇ ?#ಅಸಹಾಯಕಡಿಕೆಶಿ
— BJP Karnataka (@BJP4Karnataka) March 27, 2022
ಇದನ್ನೂ ಓದಿ: Hijab ವಿವಾದಕ್ಕೆ ಧುಮುಕಿದ ಮಾಜಿ CEC ಕೇಳಿದ್ದೇನು ಗೊತ್ತಾ?
‘ತಮ್ಮ ವಿರುದ್ಧ ವಿ.ಎಸ್.ಉಗ್ರಪ್ಪ(VS Ugrappa) ಹೇಳಿಕೆ ನೀಡಿದರೂ ಡಿಕೆಶಿ ಏನು ಮಾಡಲಿಲ್ಲ. ಕೆಪಿಸಿಸಿ ಪ್ರಚಾರ ಸಮಿತಿಗೆ ಎಂ.ಬಿ.ಪಾಟೀಲರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದಾಗಲೂ ಮೌನಕ್ಕೆ ಶರಣಾದರು. ಹಿಜಾಬ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ತಿಳಿ ಹೇಳಿದಾಗಲೂ ಸಿದ್ದರಾಮಯ್ಯ ಮಾತೇ ಕೇಳಲಿಲ್ಲ. ಇದರರ್ಥ ಡಿಕೆಶಿ(DK Shivakumar) ಅಸಹಾಯಕರೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಧರ್ಮಗುರುಗಳ ವಿರುದ್ಧ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಅವರ ಪುತ್ರರತ್ನ ಡಾ.ಯತೀಂದ್ರ ಅವರಿಗೆ ಮಾತ್ರ ಸಂತೋಷ ನೀಡಿದೆ.
ಎಷ್ಟೆಂದರೂ ತಂದೆಯಂತೇ ಮಗನಲ್ಲವೇ!!
ಆದರೆ ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಇದನ್ನು ಸಮರ್ಥಿಸುತ್ತಾರೆಯೇ?
ನಿಮ್ಮ ನಿಲುವೇನು #ಅಸಹಾಯಕಡಿಕೆಶಿ ಅವರೇ?
— BJP Karnataka (@BJP4Karnataka) March 27, 2022
‘ಧರ್ಮಗುರುಗಳ ವಿರುದ್ಧ ಸಿದ್ದರಾಮಯ್ಯ(Siddaramaiah) ಅವರು ನೀಡಿದ ಹೇಳಿಕೆ ಅವರ ಪುತ್ರರತ್ನ ಡಾ.ಯತೀಂದ್ರ ಸಿದ್ದರಾಮಯ್ಯನವರಿಗೆ ಮಾತ್ರ ಸಂತೋಷ ನೀಡಿದೆ. ಎಷ್ಟೆಂದರೂ ತಂದೆಯಂತೇ ಮಗನಲ್ಲವೇ!! ಆದರೆ ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಇದನ್ನು ಸಮರ್ಥಿಸುತ್ತಾರೆಯೇ? ನಿಮ್ಮ ನಿಲುವೇನು #ಅಸಹಾಯಕಡಿಕೆಶಿ ಅವರೇ?’ ಎಂದು ಬಿಜೆಪಿ ವ್ಯಂಗ್ಯವಾಗಿ ಪ್ರಶ್ನೆ ಮಾಡಿದೆ.
ಇದನ್ನೂ ಓದಿ: DC Thammanna : ಸಂಸದೆ ಸುಮಲತಾಗೆ ಓಪನ್ ಚಾಲೇಂಜ್ ಹಾಕಿದ ಶಾಸಕ ಡಿಸಿ ತಮ್ಮಣ್ಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.