ನವದೆಹಲಿ: ಬಹುನಿರೀಕ್ಷಿತ ಐಪಿಎಲ್ ಟೂರ್ನಿ(IPL 2022) ಪ್ರಾರಂಭವಾಗಿದೆ. 15ನೇ ಆವೃತ್ತಿಯ ಚುಟುಕು ಕ್ರಿಕೆಟ್ ನ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್(KKR) ಭರ್ಜರಿ ಗೆಲುವು ಸಾಧಿಸಿದೆ. CSK ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿಯೇ ರವೀಂದ್ರ ಜಡೇಜಾ(Ravindra Jadega)ಗೆ ಶ್ರೇಯಸ್ ಅಯ್ಯರ್(Shreyas Iyer) ಪಡೆ ಸೋಲಿನ ರುಚಿ ತೋರಿಸಿದೆ.
ಐಪಿಎಲ್ ಇತಿಹಾಸ(IPL History)ದಲ್ಲಿಯೇ ಮೊದಲ ಬಾರಿಗೆ ಪ್ರಸಕ್ತ ಟೂರ್ನಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಭಾನುವಾರ ನಡೆದ ಉದ್ಘಾಟನಾ ಪಂದ್ಯವು ಅನೇಕ ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಮೊದಲ ಓವರ್ ಬೌಲಿಂಗ್ ಮಾಡಲು ಬಂದಿದ್ದ ಕೆಕೆಆರ್ ತಂಡದ ವೇಗಿ ಉಮೇಶ್ ಯಾದವ್ ಐಪಿಎಲ್ 2022ರ ಮೊದಲ ಬಾಲ್ ಅನ್ನು ನೋ ಬಾಲ್(No Ball) ಹಾಕಿದರು. ಇದನ್ನು ಕಂಡ ನೆಟಿಜನ್ಸ್ ಉಮೇಶ್ ಯಾದವ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Mayanti Langer : ಐಪಿಎಲ್ ನಿರೂಪಣೆಗೆ ಮರಳಿದ ಮಯಾಂತಿ ಲ್ಯಾಂಗರ್!
ರನ್ ಗಳಿಸಲು ತಿಣುಕಾಡಿದ CSK!
To many more, Skipper! 💜 https://t.co/RwJbRB5Zj6
— KolkataKnightRiders (@KKRiders) March 26, 2022
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ(Chennai Super Kings) 5 ವಿಕೆಟ್ ಕಳೆದುಕೊಂಡು ಕೇವಲ 132 ರನ್ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತು. ಗುರಿ ಬೆನ್ನತ್ತಿದ್ದ ಕೆಕೆಆರ್ ಯಾವುದೇ ಟೆನ್ಶನ್ ಇಲ್ಲದೇ ಗುರಿ ಮುಟ್ಟಿ ಗೆಲುವಿನ ನಗೆ ಬೀರಿತು. ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿಯವರ ಚಾಂಪಿಯನ್ ಆಟವೊಂದನ್ನು ಬಿಟ್ಟರೆ ಚೆನ್ನೈ ತಂಡದ ಬೇರಾವ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿದೆ ನಿರಾಸೆ ಮೂಡಿಸಿದರು.
ಘಟಾನುಘಟಿ ಬ್ಯಾಟ್ಸ್ಮನ್ಗಳಿದ್ದರೂ ಸರಿಯಾಗಿ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕೆಕೆಆರ್ ಬೌಲಿಂಗ್ ದಾಳಿಗೆ ಚೆನ್ನೈ ಸೋತು ಮಂಡಿಯೂರಬೇಕಾಯ್ತು. ಇದು ಚೆನ್ನೈ ತಂಡದ ಅಭಿಮಾನಿಗಳಿಗೆ ಭಾರೀ ನೀರಾಸೆ ಮೂಡಿಸಿತು. ಮೊದಲ ಪಂದ್ಯದಲ್ಲಿಯೇ ಧೋನಿ(MS Dhoni) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಕದ್ದರು. 38 ಎಸೆಗಳನ್ನು ಎದುರಿಸಿದ ಅವರು ಗ್ರೌಂಡ್ನ ಮೂಲೆ ಮೂಲೆಗೆ ಚೆಂಡನ್ನು ಅಟ್ಟುವ ಮೂಲಕ 50 ರನ್ ಗಳಿಸಿ ಅಜೇಯರಾಗುಳಿದರು.
ಇದನ್ನೂ ಓದಿ: IPL 2022: ಈ ಬಾರಿ RCB ಪ್ಲೇ ಆಫ್ ಹಂತಕ್ಕೂ ಪ್ರವೇಶಿಸುವುದಿಲ್ಲ ..!
ಪಂದ್ಯದಲ್ಲಿ ಚೆನ್ನೈ ಸೋತರೂ ಕೂಡ ಧೋನಿ ಆಟಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಒಂದು ಹಂತದಲ್ಲಿ ರನ್ ಗಳಿಸಲು ತಿಣುಕಾಡುತ್ತಿದ್ದ ಚೆನ್ನೈ ತಂಡ್ಕಕೆ ಧೋನಿ ಆಸರೆಯಾದರು. ಚೆನ್ನೈ ತಂಡದ ಬ್ಯಾಟಿಂಗ್ ಬಲವಾಗಿದ್ದ ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಶಿವಂ ದುಬೆ, ಡೆವೋನ್ ಕಾನ್ವೇ ಮುಂತಾದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ನಿರಾಸೆ ಮೂಡಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.