ಬೆಂಗಳೂರು: ನಿಯಮ 69 ರ ಅಡಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri), ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಗೆ ಇವತ್ತಲ್ಲಾ ನಾಳೆ ನಮ್ಮ ದೇಶದಲ್ಲಿ ನೀವೂ ಸಹ ನಮ್ಮ ಆರ್ ಎಸ್ ಎಸ್ ಅಂತಾ ಹೇಳಬೇಕಾಗುತ್ತದೆ ಖಂಡಿತವಾಗಿ ಹೇಳಬೇಕಾಗುತ್ತದೆ ಎಂದರು.
ಇದನ್ನೂ ಓದಿ: ಕೋವಿಡ್ ನಿಂದ ಗುಣಮುಖರಾದವರಿಗೆ ಕ್ಷಯ ಸೋಂಕು, ವರದಿ ಸಲ್ಲಿಸಲು ಸೂಚನೆ
ಹಾಗಾದ್ರೆ ಚರ್ಚೆ ಹೇಗಿತ್ತು?
ಸಿದ್ಧರಾಮಯ್ಯ: ಅಶೋಕನ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ, ರಾಜಕೀಯ ಬೇರೆ, ಹೀ ಈಸ್ ಎ ಗುಡ್ ಹ್ಯೂಮನ್ ಬೀಯಿಂಗ್, ಮತ್ತೆ ಬಿಜೆಪಿ ಆರ್ ಎಸ್ ಎಸ್, ಕಾಂಗ್ರೆಸ್ ಎಲ್ಲಾ
ಅಶೋಕ್: ಮತ್ತೆ ಆರ್ ಎಸ್ ಎಸ್ ಗೇ ಹೋಗ್ತೀರಲ್ಲಾ ಸಾರ್
ಸ್ಪೀಕರ್: ನೀವು ಯಾಕೆ ನಮ್ಮ ಆರ್ ಎಸ್ ಎಸ್ ಬಗ್ಗೆ ಅಷ್ಟು ಬೇಸರ ಮಾಡ್ಕೊಳ್ತೀರಿ?
ಸಿದ್ದರಾಮಯ್ಯ: ಬೇಸರನೇ ಮಾಡ್ಕೊಂಡಿಲ್ಲಾ, ಆರ್ ಎಸ್ ಎಸ್ ಅನ್ನೋದು ರಾಷ್ಟ್ರೀಯ ಸೇವಾ ಸಂಘ, ಅದು ಹೇಳೋದು ತಪ್ಪಾ?
ಸ್ಪೀಕರ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ
ಜಮೀರ್ ಅಹಮದ್: ಪೀಠ ಮೇಲೆ ಕೂತ್ಕೊಂಡು ನಮ್ಮ ಆರ್ ಎಸ್ ಎಸ್ ಅಂತೀರಾ ತಾವು?
ಸ್ಪೀಕರ್: ಇನ್ನೇನು ಮತ್ತೆ? ನಮ್ಮ ಅರ್ ಎಸ್ ಎಸ್ಸೆ! ಆರ್ ಎಸ್ ಎಸ್ ನಮ್ದೇ ರೀ
ಆರಗ ಜ್ಞಾನೇಂದ್ರ: ಜಮೀರ್ ಅವರು ಸುಳ್ಳು ಹೇಳೋದು ಹೇಗೆ?
ಸ್ಪೀಕರ್: ಜಮೀರ್ ಒಂದು ಮಾತು ಹೇಳ್ತೀನಿ, ಇವತ್ತಲ್ಲಾ ನಾಳೆ ನಮ್ಮ ದೇಶದಲ್ಲಿ ನೀವೂ ಸಹ ನಮ್ಮ ಆರ್ ಎಸ್ ಎಸ್ ಅಂತಾ ಹೇಳಬೇಕಾಗುತ್ತದೆ ಖಂಡಿತವಾಗಿ ಹೇಳಬೇಕಾಗುತ್ತದೆ
ಸಿದ್ದರಾಮಯ್ಯ: ಜಮೀರ್ ಹೋಗಲಿ, ನಾನೇ ತೀರ್ಮಾನಕ್ಕೆ ಬಂದಿದ್ದೇನೆ, ಆರ್ ಎಸ್ ಎಸ್ ನಿಂದ ಈ ದೇಶದಲ್ಲಿ ಮನುವಾದ ಬರುತ್ತದೆ, ಅದಕ್ಕೆ ವಿರೋಧ ಮಾಡುತ್ತೇವೆ
ಅಶೋಕ್: ಅಧ್ಯಕ್ಷರೇ ನೀವು ಹೇಳಿದ್ದಕ್ಕೆ ನನ್ನ ಸಹಮತ ಇದೆ, ಈಗ ಸರ್ವ ವ್ಯಾಪಿ ಆಗಿಹೋಗಿದೆ, ಈ ದೇಶದ ರಾಷ್ಟ್ರಪತಿ ಆರ್ ಎಸ್ ಎಸ್, ಪ್ರಧಾನಿ ಆರ್ ಎಸ್ ಎಸ್, ಉಪ ರಾಷ್ಟ್ರಪತಿ ಆರ್ ಎಸ್ ಎಸ್, ಮುಖ್ಯಮಂತ್ರಿಗಳು ಆರ್ ಎಸ್ ಎಸ್, ಒಪ್ಪಿಕೊಳ್ಳಲೇ ಬೇಕು ಈಗ
ರಾಮಲಿಂಗಾರೆಡ್ಡಿ: ದುರದೃಷ್ಟ ಇದು
ಅಶೋಕ್: ದುರಾದೃಷ್ಟ ಅಲ್ಲ ಇದು, ಅದೃಷ್ಟ
ಜಮೀರ್: ಅಶೋಕ್ ಅವರೇ ನೀವು ಬಿಜೆಪಿ ಪಕ್ಷ ಅಂತಾ ಯಾಕೆ ಹೇಳ್ತೀರಾ, ಆರ್ ಎಸ್ ಎಸ್ ಪಕ್ಷ ಅಂತಾ ಹೇಳಿ, ಬಿಜೆಪಿ ತೆಗೆದು ಬಿಡಿ
ಈಶ್ವರಪ್ಪ: ಈ ದೇಶದ ಎಲ್ಲಾ ಮುಸಲ್ಮಾನರು, ಎಲ್ಲಾ ಕ್ರಿಶ್ಚಿಯನ್ನರು ಇವತ್ತಲ್ಲಾ ನಾಳೆ ಆರ್ ಎಸ್ ಎಸ್ ಆಗ್ತಾರೆ ಯಾವ ಅನುಮಾನವೂ ಇಲ್ಲ
ಕೆ.ಜೆ. ಜಾರ್ಜ್: ಅದು ಆಗುವುದಿಲ್ಲ, ಸಾಧ್ಯವೇ ಇಲ್ಲ, ನೀವೇ ಇರೋದಿಲ್ಲ
ಈಶ್ವರಪ್ಪ: ನಾನು ಆರ್ ಎಸ್ ಎಸ್ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಅಂತಾ ನೀವೇ ಹೇಳ್ತೀರಾ?
ಇದನ್ನೂ ಓದಿ : ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಹೀಗಂದ್ರು ರಾಧಿಕಾ ಪಂಡಿತ್
ಪ್ರಿಯಾಂಕ್ ಖರ್ಗೆ: ಇದೇ ಪೀಠದಲ್ಲಿ ಕುಳಿತು ಸಂವಿಧಾನದ ಬಗ್ಗೆ ಉತ್ತಮ ಚರ್ಚೆ ಮಾಡಿದ್ದೇವೆ ಎಂದು ನೀವೇ ಹೇಳಿದ್ದೀರಿ, ಅಂದು ಪೀಠದಲ್ಲಿ ಕುಳಿತು ಸಂವಿಧಾನ ಪರವಾಗಿ ಇದ್ದೀರಿ ಅಂತಾ ಹೇಳಿದ್ದೀರಿ, ಈಗ ಅದೇ ಪೀಠದಲ್ಲಿ ಕುಳಿತು ನೀವು ಸಂವಿಧಾನದ ಪರವಾಗಿ ಇದ್ದೀರಿ ಅಂತಾ ಹೇಳ್ತಿದ್ದೀರಿ, ಇದೇ ಆರ್ ಎಸ್ ಎಸ್ ನವರು ರಾಮಲೀಲಾ ಮೈದಾನದಲ್ಲಿ ನೂರೈವತ್ತು ಬಾರಿ ಪ್ರತಿಭಟನೆ ಮಾಡಿ ಸಂವಿಧಾನ ಸುಟ್ಟಿದ್ದಾರೆ.
ಸ್ಪೀಕರ್: ಹೇ ಎಲ್ಲೆಲ್ಲೋ ಹೋಗ್ತಿದ್ದೀರಿ ಪ್ರಿಯಾಂಕ್, ಸುಮ್ ಸುಮ್ಮನೇ ಏನೇನೋ ಮಾತಾಡಬಾರದು, ಸರಿಯಲ್ಲ ಇದು, ನಿಮ್ಮ ರಾಜಕೀಯ ಇದ್ದರೆ ಹೊರಗೆ ಮಾತಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.