PM Imran Khan : ಭಾರತೀಯ ಸೇನೆಯನ್ನ 'ಹಾಡಿ ಹೊಗಳಿದ' ಪಾಕ್ ಪ್ರಧಾನಿ ಇಮ್ರಾನ್ ಖಾನ್

ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಪಾಕ್ ಪ್ರಧಾನಿಯನ್ನು ಶ್ಲಾಘಿಸುವ ಚರ್ಚೆಗಳ ನಡುವೆ ಭಾರತವು ತನ್ನ ಅನೇಕ ವಿದೇಶಾಂಗ ನೀತಿ ಉಪಕ್ರಮಗಳಿಗಾಗಿ ವಿವಿಧ ವಲಯಗಳಿಂದ ಪ್ರಶಂಸೆ ಪಡೆದಿದೆ ಎಂದು ಸೋಮವಾರ ಹೇಳಿದ್ದಾರೆ.

Written by - Channabasava A Kashinakunti | Last Updated : Mar 21, 2022, 08:50 PM IST
  • ಭಾರತವನ್ನು ಹೊಗಳಿದ ಇಮ್ರಾನ್ ಖಾನ್
  • ಭಾರತೀಯ ವಿದೇಶಾಂಗ ನೀತಿಯ ಅಭಿಮಾನಿಗಳು
  • ಇಮ್ರಾನ್‌ಗೆ ಪ್ರತ್ಯುತ್ತರ ನೀಡಿದ ಭಾರತ
PM Imran Khan : ಭಾರತೀಯ ಸೇನೆಯನ್ನ 'ಹಾಡಿ ಹೊಗಳಿದ' ಪಾಕ್ ಪ್ರಧಾನಿ ಇಮ್ರಾನ್ ಖಾನ್ title=

ನವದೆಹಲಿ : ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಹಾಡಿ ಹೊಗಳಿದ್ದಾರೆ. ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿ ಇಮ್ರಾ ಸುದೀರ್ಘ ಭಾಷಣ ಮಾಡಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಪಾಕ್ ಪ್ರಧಾನಿಯನ್ನು ಶ್ಲಾಘಿಸುವ ಚರ್ಚೆಗಳ ನಡುವೆ ಭಾರತವು ತನ್ನ ಅನೇಕ ವಿದೇಶಾಂಗ ನೀತಿ ಉಪಕ್ರಮಗಳಿಗಾಗಿ ವಿವಿಧ ವಲಯಗಳಿಂದ ಪ್ರಶಂಸೆ ಪಡೆದಿದೆ ಎಂದು ಸೋಮವಾರ ಹೇಳಿದ್ದಾರೆ.

'ನಮ್ಮ ದಾಖಲೆಯೇ ಅದನ್ನು ಖಚಿತಪಡಿಸುತ್ತದೆ'

ಇಮ್ರಾನ್ ಖಾನ್(Imran Khan) ಹೇಳಿಕೆಗಳ ಬಗ್ಗೆ ಕೇಳಿದಾಗ, ಭಾರತದ ದಾಖಲೆಯೇ ಅದನ್ನು ದೃಢಪಡಿಸುತ್ತದೆ ಎಂದು ಶ್ರಿಂಗ್ಲಾ ಹೇಳಿದರು. ಕೇವಲ ಒಬ್ಬ ನಾಯಕ ಮಾತ್ರ ಹೊಸದಿಲ್ಲಿಯನ್ನು ಹೊಗಳಿದ್ದಾರೆ ಎಂದು ಹೇಳುವುದು ತಪ್ಪಾಗುತ್ತದೆ ಎಂದರು. ವಿದೇಶಾಂಗ ಕಾರ್ಯದರ್ಶಿ ಮಾಧ್ಯಮಗೋಷ್ಠಿಯಲ್ಲಿ, 'ಒಬ್ಬ ವ್ಯಕ್ತಿ ಎಂದು ಹೇಳುವುದು ತಪ್ಪಾಗುತ್ತದೆ. ನಮ್ಮ ಅನೇಕ ವಿದೇಶಾಂಗ ನೀತಿಯ ಉಪಕ್ರಮಗಳಿಗೆ ಪ್ರಧಾನಮಂತ್ರಿಗಳ ಮಟ್ಟದಲ್ಲಿ ವಿವಿಧ ವಲಯಗಳಿಂದ ನಾವು ಪ್ರಶಂಸೆಯನ್ನು ಪಡೆದಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಮ್ಮ ದಾಖಲೆಯೇ ಅದನ್ನು ಖಚಿತಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಇದನ್ನೂ ಓದಿ : 'IOC ಸಭೆಯ ಬಳಿಕ ಇಮ್ರಾನ್ ಕುರ್ಚಿ ತೊರೆಯಬೇಕು' Imran Khan ಗೆ ಪಾಕ್ ಸೇನೆಯ ಸೂಚನೆ

ಇಮ್ರಾನ್ ಖಾನ್ ಹೇಳಿದ್ದೇನು?

ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಸಾರ್ವಜನಿಕ ರ‍್ಯಾಲಿಯಲ್ಲಿ ಇಮ್ರಾನ್ ಖಾನ್, ಸ್ವತಂತ್ರ ವಿದೇಶಾಂಗ ನೀತಿ(Foreign Police)ಯನ್ನು ಅನುಸರಿಸುವುದಕ್ಕಾಗಿ ಭಾರತವನ್ನು ಶ್ಲಾಘಿಸಿದರು, ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಮಾಸ್ಕೋ ಮೇಲೆ ಯುಎಸ್ ನಿರ್ಬಂಧಗಳ ಹೊರತಾಗಿಯೂ ನವದೆಹಲಿ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಹೇಳಿದರು.

'ಭಾರತವನ್ನು ಶ್ಲಾಘಿಸಿ'

ಪಾಕ್ ಪ್ರಧಾನಿ(PM Imran Khan) ಹೇಳಿದ್ದಿಷ್ಟು, 'ನಾನು ಭಾರತವನ್ನು ಹೊಗಳುತ್ತೇನೆ. ಭಾರತ ಯಾವಾಗಲೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಕಾಯ್ದುಕೊಂಡು ಬಂದಿದೆ. ಭಾರತವು ಅಮೆರಿಕದ ಮಿತ್ರರಾಷ್ಟ್ರವಾಗಿದೆ ಮತ್ತು ತನ್ನನ್ನು ತಾನು ತಟಸ್ಥ ಎಂದು ಕರೆದುಕೊಳ್ಳುತ್ತದೆ... ನಿರ್ಬಂಧಗಳು ಜಾರಿಯಲ್ಲಿರುವಾಗಲೇ ರಷ್ಯಾದಿಂದ ತೈಲ ಪಡೆಯುತ್ತಿದೆ. ಏಕೆಂದರೆ ಅವರ ವಿದೇಶಾಂಗ ನೀತಿ ಜನರ ಒಳಿತಿಗಾಗಿದೆ.

ಇದನ್ನೂ ಓದಿ : Plane Crash: 133 ಪ್ರಯಾಣಿಕರಿದ್ದ ವಿಮಾನ ಚೀನಾದಲ್ಲಿ ಪತನ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News