ಬೆಂಗಳೂರು : ಮದುವೆಗೆ ಒಳ್ಳೆಯ, ಸುಸಂಸ್ಕೃತ, ಮತ್ತು ಕಾಳಜಿಯುಳ್ಳ ಜೀವನ ಸಂಗಾತಿಯನ್ನು ಹುಡುಕುವುದು ಅದೃಷ್ಟದ ವಿಷಯ. ಒಳ್ಳೆಯ ಹುಡುಗಿಯನ್ನು ಮದುವೆಯಾಗುವುದು ಹುಡುಗನ ಭವಿಷ್ಯವನ್ನು ಮಾತ್ರವಲ್ಲ ಇಡೀ ಕುಟುಂಬದ ಭವಿಷ್ಯವನ್ನು ಬದಲಾಯಿಸುತ್ತದೆ. ಮಹಾನ್ ವಿದ್ವಾಂಸ ಮತ್ತು ರಾಜತಾಂತ್ರಿಕರಾದ ಆಚಾರ್ಯ ಚಾಣಕ್ಯ ಅವರು ಮದುವೆ, ಮನೆ ಮತ್ತು ಸಂಬಂಧಗಳಂತಹ ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ (Chanakya Niti). ಚಾಣಕ್ಯ ನೀತಿಯ ಪ್ರಕಾರ, ಮದುವೆ ನಿಶ್ಚಯ ಮಾಡುವಾಗ ಹುಡುಗಿಯ ಸೌಂದರ್ಯಕ್ಕಿಂತ ಗುಣಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಹೆಣ್ಣಿನ ಅರ್ಹತೆಗಿಂತ ಸೌಂದರ್ಯದ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡರೆ ಜೀವನ ಪೂರ್ತಿ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ :
ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯಲ್ಲಿ (Chanakya Niti) ಹೇಳಿರುವ ಪ್ರಕಾರ, ಹೆಣ್ಣಿನ ಸೌಂದರ್ಯವನ್ನು ನೋಡಿ ಮದುವೆಯಾಗುವ ನಿರ್ಧಾರ ತೆಗೆದುಕೊಂಡರೆ, ಅದು ವ್ಯಕ್ತಿಯು ಜೀವನದಲ್ಲಿ ತೆಗೆದುಕೊಳ್ಳುವ ಅತೀ ದೊಡ್ಡ ತಪ್ಪು ನಿರ್ಧಾರವಾಗುತ್ತದೆ (Chanakya Niti for marriage). ಮದುವೆಯ ವೇಳೆ ಬಾಹ್ಯ ಸೌಂದರ್ಯಕ್ಕಿಂತ ಗುಣಗಳಿಗೆ ಪ್ರಾಮುಖ್ಯತೆ ನೀಡಬೇಕು. ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಒಟ್ಟು ನೀಡಬೇಕು. ಧರ್ಮ-ಕರ್ಮವನ್ನು ನಂಬುವ ಹೆಣ್ಣನ್ನು ಆಯ್ಕೆ ಮಾಡಿದರೆ ಉತ್ತಮ ಜೀವನ ಸಂಗಾತಿ ಎಂದು ಸಾಬೀತಾಗಬಹುದು.
ಇದನ್ನೂ ಓದಿ : ಬಡತನ ವಕ್ಕರಿಸುವ ಮೊದಲು ಸಿಗುತ್ತವೆ ಈ ಸಂಕೇತಗಳು, ಎಚ್ಚೆತ್ತುಕೊಳ್ಳದಿದ್ದರೆ ಎದುರಿಸಬೇಕಾಗುತ್ತದೆ ನಷ್ಟ
ಇನ್ನು ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗದ ಮಹಿಳೆಯನ್ನು ಎಂದಿಗೂ ವಿವಾಹವಾಗಲು ಹೋಗಬಾರದು. ಹುಡುಗಿಯನ್ನು ಬಲವಂತವಾಗಿ ಮದುವೆಯಾಗುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು (Chanakya Niti for Success). ಹುಡುಗಿ ತನ್ನ ಇಚ್ಛೆಯ ಪ್ರಕಾರ ಮದುವೆಯಾದಾಗ, ಅವಳು ತನ್ನ ಗಂಡನನ್ನು ತುಂಬಾ ಪ್ರೀತಿಸುತ್ತಾಳೆ ಮತ್ತು ಅವನ ಕುಟುಂಬಕ್ಕೂ ಗೌರವವನ್ನು ನೀಡುತ್ತಾಳೆ.
ಹೆಣ್ಣು ಮಕ್ಕಳು ಕೂಡ ಈ ಬಗ್ಗೆ ಕಾಳಜಿ ವಹಿಸಬೇಕು :
ಚಾಣಕ್ಯ ನೀತಿಯಲ್ಲಿ, ಮದುವೆಗೆ ಸಂಬಂಧಿಸಿದಂತೆ ಹುಡುಗಿಯರಿಗೆ ಬಹಳಷ್ಟು ಕಿವಿಮಾತು ಹೇಳಲಾಗಿದೆ. ಇದರ ಪ್ರಕಾರ, ಮಹಿಳೆಯರು ತಮ್ಮ ಜೀವನ ಸಂಗಾತಿಯನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಅವರ ವಿದ್ಯಾಭ್ಯಾಸ, ಉದ್ಯೋಗದ ಜೊತೆಗೆ ಅವರ ಕುಟುಂಬವನ್ನೂ ನೋಡಬೇಕು. ನಿಮ್ಮನ್ನು ಪ್ರೀತಿಸುವ, ಗೌರವವನ್ನು ನೀಡುವ ವ್ಯಕ್ತಿಯನ್ನೇ ಮದುವೆಗಾಗಿ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : ಈ ಐದು ವಿಚಾರಗಳ ಬಗ್ಗೆ ಗಮನ ಹರಿಸಿದರೆ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.