Janhvi Kapoor Biryhday:ಬಾಲಿವುಡ್ನ ಮುದ್ದು ಮುಖದ ಚೆಲುವೆ ಜಾಹ್ನವಿ ಕಪೂರ್ ಗೆ ಇಂದು ಜನ್ಮದಿನದ ಸಂಭ್ರಮ.
Janhvi Kapoor Biryhday: ಬಾಲಿವುಡ್ನ ಮುದ್ದು ಮುಖದ ಚೆಲುವೆ ಜಾಹ್ನವಿ ಕಪೂರ್ ಗೆ ಇಂದು ಜನ್ಮದಿನದ ಸಂಭ್ರಮ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇಂದು ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜಾಹ್ನವಿ ಕಪೂರ್ ಶ್ರೀದೇವಿಯ (Sridevi) ಮಗಳು ಎಂದು ಎಲ್ಲರಿಗೂ ತಿಳಿದಿದೆ. ಜಾಹ್ನವಿ ಕಪೂರ್ (Jahnavi Kapoor) ಸಿನಿಮಾಗೆ ಎಂಟ್ರಿ ಕೊಡುವ ಮುನ್ನವೇ ಫುಲ್ ಹವಾ ಕ್ರಿಯೇಟ್ ಮಾಡಿದ್ದರು. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇಂದು ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ನಟಿ ಜಾಹ್ನವಿ ಕಪೂರ್ 2018 ರಲ್ಲಿ ಬಿಡುಗಡೆಯಾದ 'ಧಡಕ್' (Dhadak) ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಕೂಡ ನೀಡಿತು. ಈ ಹಿಟ್ ಚಿತ್ರದ ನಂತರ ಜಾಹ್ನವಿ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಲೋಕ ಮತ್ತು ಮಾಡೆಲಿಂಗ್ (Modeling) ಕ್ಷೇತ್ರಕ್ಕೆ ಕಾಲಿರಿಸಿರುವ ಜಾಹ್ನವಿ ಕಪೂರ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆಕರ್ಷಕ ಫೋಟೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಕಪೂರ್ ಕುಟುಂಬದ ಮುಂದಿನ ಪೀಳಿಗೆಯ ಬೆಡಗಿ ಜಾಹ್ನವಿ ಕಪೂರ್ ಸಾಮಾಜಿಕ ತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ.
ಜಾಹ್ನವಿ ಕಪೂರ್ ಸಿನಿಮಾ ಪ್ರವೇಶಿಸುವ ಮುನ್ನವೇ ತೂಕ ಇಳಿಸಿಕೊಂಡಿದ್ದರು. ನಟಿ ಜಾಹ್ನವಿ ಕಪೂರ್ ಕೂಡ ಚಿತ್ರರಂಗಕ್ಕೆ ಬರುವ ಮುನ್ನ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಅವರು ಹೆಚ್ಚು ಫಿಟ್ ಆಗಿ ಕಾಣಲು ಆರಂಭಿಸಿದ್ದಾರೆ. ನಟಿ ನಿಯಮಿತವಾಗಿ ಜಿಮ್‌ಗೆ ಹೋಗುತ್ತಾರೆ ಮತ್ತು ಹುರುಪಿನಿಂದ ಕೆಲಸ ಮಾಡುತ್ತಾರೆ.
ಚಿತ್ರರಂಗಕ್ಕೆ ಪ್ರವೇಶಿಸುವ ಮುನ್ನ ನಟಿ ಜಾಹ್ನವಿ ಕಪೂರ್ ತನ್ನ ಲುಕ್ ಬಗ್ಗೆ ಹೆಚ್ಚು ಗಮನ ಹರಿಸಿದರು. ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದ ಜಾಹ್ನವಿ ನಂತರ 2020ರಲ್ಲಿ ತೆರೆಕಂಡ 'ಘೋಸ್ಟ್ ಸ್ಟೋರೀಸ್'ನಲ್ಲಿ ಮತ್ತೆ ಕಾಣಿಸಿಕೊಂಡರು . ಅದೇ ವರ್ಷ ತೆರೆಕಂಡ 'ಗುಂಜನ್ ಸಕ್ಸೇನಾ' (Gunjan Saxena) ಜಾಹ್ನವಿಗೆ ಅಪಾರ ಖ್ಯಾತಿ ತಂದುಕೊಟ್ಟಿತು.
ಇದೀಗ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 'ದೋಸ್ತಾನಾ 2' ಸಿನಿಮಾದಲ್ಲಿ ನಟಿಸುತ್ತಿರುವ ಅವರು, ಮತ್ತೊಂದು ಚಿತ್ರ 'ಮಿಸ್ಟರ್ ಅಂಡ್ ಮಿಸ್ ಮಹಿ' ಶೂಟಿಂಗ್ಗೆ ರೆಡಿಯಾಗುತ್ತಿದ್ದಾರೆ.