ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ಉತ್ತರ ಪ್ರದೇಶದ ಬಸ್ತಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು 'ರಾಷ್ಟ್ರಭಕ್ತಿ' (ರಾಷ್ಟ್ರದ ಭಕ್ತಿ) ಮತ್ತು 'ಪರಿವಾರ ಭಕ್ತಿ' (ಕುಟುಂಬದ ಮೇಲಿನ ಭಕ್ತಿ) ನಡುವೆ ವ್ಯತ್ಯಾಸವಿದೆ.ಈ ಹಿಂದಿನ ವಂಶ ಪಾರಂಪರೆಯ ಸರ್ಕಾರಗಳು ಭಾರತವನ್ನು ತನ್ನ ರಕ್ಷಣಾ ಅಗತ್ಯಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತಗೊಳಿಸಿದವು, ಆದರೆ ಈಗ "ಆತ್ಮನಿರ್ಭರ್" ಆದ್ಯತೆಯಾಗಿದೆ.ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ ದೇಶವನ್ನು ಆತ್ಮನಿರ್ಭರ ಮಾಡುವ ಮೂಲಕ ಬಲಪಡಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: 'ಉತ್ತರ ಪ್ರದೇಶದ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ -ಪ್ರಧಾನಿ ಮೋದಿ
"ನಮ್ಮಲ್ಲಿ ತೈಲ ಸಂಸ್ಕರಣಾಗಾರಗಳಿಲ್ಲ, ನಾವು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತೇವೆ...ಅವರು ಅದರತ್ತ ಗಮನ ಹರಿಸಲಿಲ್ಲ...ಈಗ ಕಬ್ಬಿನ ಸಹಾಯದಿಂದ ಎಥೆನಾಲ್ ತಯಾರಿಸಬಹುದು, ನಮ್ಮ ಸರ್ಕಾರವು ಎಥೆನಾಲ್ ಸ್ಥಾವರದ ಜಾಲವನ್ನು ಸ್ಥಾಪಿಸುತ್ತಿದೆ"ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದರು.
"ದಶಕಗಳ ಕಾಲ ಈ 'ಪರಿವಾರವಾದಿಗಳು' ನಮ್ಮ ಸೇನೆಗಳು ಇತರ ದೇಶಗಳ ಮೇಲೆ ಅವಲಂಬಿತರಾಗಲು ಅವಕಾಶ ಮಾಡಿಕೊಟ್ಟರು, ಭಾರತದ ರಕ್ಷಣಾ (ವಲಯ)ವನ್ನು ನಾಶಮಾಡಿದರು...ಆದರೆ ಇಂದು ನಾವು ಉತ್ತರ ಪ್ರದೇಶದಲ್ಲಿ ರಕ್ಷಣಾ ಕಾರಿಡಾರ್ ಅನ್ನು ಸ್ಥಾಪಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಬಾಲಾಕೋಟ್ ವೈಮಾನಿಕ ದಾಳಿಗೆ ಪುರಾವೆ ಕೇಳುವ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿ ಮಾತನಾಡಿದ ಅವರು ಫೆಬ್ರವರಿ 26 ರಂದು ದೇಶವು ಬಾಲಾಕೋಟ್ ವೈಮಾನಿಕ ದಾಳಿಯ ಮೂರು ವರ್ಷಗಳನ್ನು ಆಚರಿಸಿತು, ಆದರೆ ವಂಶ ಪಾರಂಪರಿಕ ಪಕ್ಷಗಳು ಅದಕ್ಕೆ ಪುರಾವೆಗಳನ್ನು ಕೇಳಿದ್ದವು ಎಂದು ಹೇಳಿದರು.
ಇದನ್ನೂ ಓದಿ: Worlds Most Powerful Militaries : ಜಗತ್ತಿನ ಅತೀ ಬಲಿಷ್ಠ ಮಿಲಿಟರಿ ಯಾವುದು? ಭಾರತ ಯಾವ ಸ್ಥಾನದಲ್ಲಿದೆ? ಇಲ್ಲಿದೆ ನೋಡಿ
ಇದೆ ವೇಳೆ ಉಕ್ರೇನ್ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಮರಳಿ ಕರೆತರಲು ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ ಎಂದು ಪ್ರಧಾನಿ ಹೇಳಿದರು.ಉಕ್ರೇನ್ನಲ್ಲಿ ರಷ್ಯಾ ಮಿಲಿಟರಿ ದಾಳಿಯ ನಡುವೆ ಸಿಲುಕಿರುವ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯವನ್ನು ಭಾರತ ಶನಿವಾರದಂದು ಆರಂಭಿಸಿದೆ.ನಾಗರಿಕ ವಿಮಾನ ಕಾರ್ಯಾಚರಣೆಗಳಿಗಾಗಿ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿರುವುದರಿಂದ, ಭಾರತೀಯ ಸ್ಥಳಾಂತರಿಸುವ ವಿಮಾನಗಳು ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ಮತ್ತು ಹಂಗೇರಿಯ ರಾಜಧಾನಿ ಬುಡಾಪೆಸ್ಟ್ನಿಂದ ಕಾರ್ಯನಿರ್ವಹಿಸುತ್ತಿವೆ.
ಇದೀಗ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಗಳನ್ನು ಬೆಂಬಲಿಸುವ ಚುನಾವಣಾ ರ್ಯಾಲಿಗಳಲ್ಲಿ ಸಂತ ಕಬೀರ್ ನಗರ, ಸಿದ್ದಾರ್ಥನಗರ ಮತ್ತು ಅಂಬೇಡ್ಕರ್ ನಗರದಲ್ಲಿ ಭಾಷಣ ಮಾಡಲಿದ್ದಾರೆ.ಈ ಪ್ರದೇಶಗಳಲ್ಲಿ ಮಾರ್ಚ್ 3 ರಂದು ಆರನೇ ಹಂತದಲ್ಲಿ ಮತದಾನ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.