ನವದೆಹಲಿ: ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಹೋರಾಡುತ್ತೇವೆ ಎಂದು ರಷ್ಯಾಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಸವಾಲು ಹಾಕಿದ್ದಾರೆ. ಯುದ್ಧದ ನಡುವೆಯೇ ಶನಿವಾರ ಅವರು ಮತ್ತೊಂದು ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ನಾವು ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದಿಲ್ಲ ಎಂದು ಹೇಳಿರುವ ಅವರು, ನಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತೇವೆ. ನಾವು ಉಕ್ರೇನ್(Russia Ukraine Crisis) ಅನ್ನು ರಕ್ಷಿಸುತ್ತೇವೆ. ಯುದ್ಧದ ಕುರಿತು ಹಬ್ಬುತ್ತಿರುವ ಸುಳ್ಳು ಸುದ್ದಿಗಳತ್ತ ಗಮನ ಹರಿಸದಂತೆ ಅವರು ಜನರನ್ನು ಕೋರಿದ್ದಾರೆ. ಈ ವಿಡಿಯೋದಲ್ಲಿ ಝೆಲೆನ್ಸ್ಕಿ ರಸ್ತೆಯ ಮೇಲೆ ನಿಂತಿರುವುದನ್ನು ಕಾಣಬಹುದಾಗಿದೆ.
ಉಕ್ರೇನ್ ಮೇಲೆ ರಷ್ಯಾದ ದಾಳಿ(Russia Ukraine War) ಮುಂದುವರಿದಿದೆ. ಏತನ್ಮಧ್ಯೆ ಖರ್ಸನ್ನಲ್ಲಿ ಗ್ಯಾಸ್ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಸ್ಫೋಟದ ನಂತರ ಅನಿಲದ ಪರಿಣಾಮವು ಇಡೀ ಆಕಾಶವನ್ನು ಆವರಿಸಿತ್ತು ಎಂದು ತಿಳಿದುಬಂದಿದೆ. ರಷ್ಯಾದ ಸೇನೆಯು ಉಕ್ರೇನ್ನ ರಾಜಧಾನಿ ಕೀವ್ಗೆ ಪ್ರವೇಶಿಸಿದೆ. ಏತನ್ಮಧ್ಯೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಸ್ವತಃ ರಕ್ಷಣಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕೀವ್ನಲ್ಲಿ ಅಧ್ಯಕ್ಷರೇ ಸೈನ್ಯಕ್ಕೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Ukraine-Russia War: ಭಾರತಕ್ಕೆ ಧನ್ಯವಾದ ಹೇಳಿದ ರಷ್ಯಾ, ಕಾರಣ ಇಲ್ಲಿದೆ
ರಷ್ಯಾದ ದಾಳಿಯ ಬಗ್ಗೆ ಉಕ್ರೇನ್(Ukraine) ಬಹುಮುಖ್ಯ ಮಾಹಿತಿಯನ್ನು ಹಂಚಿಕೊಂಡಿದೆ. ರಷ್ಯಾದ IL-76 ವಿಮಾನವನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಇದರೊಂದಿಗೆ ಕೀವ್ ಅವೆನ್ಯೂ ಮೇಲಿನ ರಷ್ಯಾದ ದಾಳಿಯನ್ನು ಉಕ್ರೇನ್ ವಿಫಲಗೊಳಿಸಿದೆ.
ನಾವು ಇಲ್ಲಿಯೇ ಇದ್ದೇವೆ, ಎಲ್ಲಿಗೂ ಓಡಿಹೋಗಿಲ್ಲವೆಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ(Volodymyr Zelenskyy) ಹೇಳಿದ್ದಾರೆ. ನಾವು ಕೀವ್ನಲ್ಲಿದ್ದೇವೆ. ನಾವು ಉಕ್ರೇನ್ ಅನ್ನು ರಕ್ಷಿಸುತ್ತೇವೆ. ‘ನಾನು, ನನ್ನ ಮಕ್ಕಳು ಮತ್ತು ನನ್ನ ಇಡೀ ಕುಟುಂಬವೇ ಉಕ್ರೇನ್ನಲ್ಲಿದೆ. ಅವರು ದೇಶದ್ರೋಹಿಗಳಲ್ಲ. ಅವರು ಉಕ್ರೇನ್ ಪ್ರಜೆಗಳು. ನಾನು ಶತ್ರುಗಳ (ರಷ್ಯಾ) ಮೊದಲ ಗುರಿಯಲ್ಲಿದ್ದೇನೆ ಮತ್ತು ನನ್ನ ಕುಟುಂಬವು 2ನೇ ಗುರಿಯಲ್ಲಿದೆ ಎಂಬ ಮಾಹಿತಿ ನನಗೆ ದೊರೆತಿದೆ’ ಅಂತಾ ಹೇಳಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್(António Guterres), ರಷ್ಯಾದ ಸೈನಿಕರು ಈಗ ತಮ್ಮ ಬ್ಯಾರಕ್ಗಳಿಗೆ ಮರಳಬೇಕು ಎಂದು ಸಲಹೆ ನೀಡಿದ್ದಾರೆ. ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕವು ರಷ್ಯಾದ ಮೇಲೆ ದೀರ್ಘಾವಧಿಯ ನಿರ್ಬಂಧಗಳನ್ನು ಹೇರುವ ಬಗ್ಗೆ ಮಾತನಾಡಿವೆ.
ಇದನ್ನೂ ಓದಿ: Worlds Most Powerful Militaries : ಜಗತ್ತಿನ ಅತೀ ಬಲಿಷ್ಠ ಮಿಲಿಟರಿ ಯಾವುದು? ಭಾರತ ಯಾವ ಸ್ಥಾನದಲ್ಲಿದೆ? ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.