Siddaramaiah Funny Talking : ಇಲ್ಲಿ ಇಲಿಗಳು ಇವೆ.. ನಾನ್ ಬಿಟ್ಟೆ ಎಂದು ಹೇಳಬೇಡಿ; ಸ್ಪೀಕರ್-ಸಿದ್ದು ಸ್ವಾರಸ್ಯ ಮಾತು ಇಲ್ಲಿದೆ

ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯ ಮೊಗಸಾಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ "ಏನೇ ವ್ಯವಸ್ಥೆ ಬೇಕು ಅಂದ್ರೆ ಹೇಳಿ" ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದರು.

Written by - Prashobh Devanahalli | Last Updated : Feb 17, 2022, 08:07 PM IST
  • ಸಚಿವ ಕೆ ಎಸ್ ಈಶ್ವರಪ್ಪ ಮಾತು ಖಂಡಿಸಿ ಅಹೋರಾತ್ರಿ ಧರಣಿ ಕೈಗೊಂಡಿರುವ ಕಾಂಗ್ರೆಸ್
  • ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯ ಮೊಗಸಾಲೆಯಲ್ಲಿ ವಿಶ್ರಾಂತಿ
  • ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ
Siddaramaiah Funny Talking : ಇಲ್ಲಿ ಇಲಿಗಳು ಇವೆ.. ನಾನ್ ಬಿಟ್ಟೆ ಎಂದು ಹೇಳಬೇಡಿ; ಸ್ಪೀಕರ್-ಸಿದ್ದು ಸ್ವಾರಸ್ಯ ಮಾತು ಇಲ್ಲಿದೆ title=

ಬೆಂಗಳೂರು : ಸಚಿವ ಕೆಎಸ್ ಈಶ್ವರಪ್ಪ ಮಾತು ಖಂಡಿಸಿ ಅಹೋರಾತ್ರಿ ಧರಣಿ ಕೈಗೊಂಡಿರುವ ಕಾಂಗ್ರೆಸ್ ಜತೆ ಸ್ಪೀಕರ್ ಸ್ವಾರಸ್ಯ ಮಾತುಗಳನ್ನ ಆಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿಧಾನಸಭೆಯ ಮೊಗಸಾಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ "ಏನೇ ವ್ಯವಸ್ಥೆ ಬೇಕು ಅಂದ್ರೆ ಹೇಳಿ" ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದರು.

ಇದನ್ನೂ ಓದಿ : Invest Karnataka: ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ನಿರಾಣಿ ಆಹ್ವಾನ

ಊಟದ ವ್ಯವಸ್ಥೆಯನ್ನ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ನಂತರ ಹೆಗ್ಗಣ ಇಲಿ ವಿಷಯವಾಗಿ ಮಾತನ್ನಾಡಿದ ಕಾಗೇರಿ ಹಾಗೂ ಸಿದ್ದರಾಮಯ್ಯ ಅವರ ಮಾತು ಹೀಗಿತ್ತು.

ಸಿದ್ದರಾಮಯ್ಯ ಸ್ಪೀಕರ್(Vishweshwar Hegde Kageri) ಮಧ್ಯೆ ಸ್ವಾರಸ್ಯಕರ ಮಾತುಕತೆ:

ಸ್ಪೀಕರ್ : ನಿಮಗೆ ಏನಾದರೂ ಅಗತ್ಯ ಇದ್ದರೆ ಹೇಳಿ

ಸಿದ್ದರಾಮಯ್ಯ : ಏನಿಲ್ಲ, ವಿಧಾನಸಭೆಯಲ್ಲಿ ಕಳೆದ ಬಾರಿ ಮಲಗಿದ್ದಾಗ ಹೆಗ್ಗಣಗಳು ಕಾಟ ಕೊಟ್ಟಿದ್ದವು 

ವಿಧಾನಸಭೆ ಕಾರ್ಯದರ್ಶಿ ವಿಶಾಲಕ್ಷಿ: ಈಗ ಹೆಗ್ಗಣಗಳಿಲ್ಲ ಸಾರ್, ಸ್ಯಾನಿಟೈಸ್(Sanitizer) ಮಾಡಿದ್ದೇವೆ, ಎಲ್ಲೋ ಸಣ್ಣ ಪುಟ್ಟ ಇಲಿಗಳು ಇರಬಹುದು

ಸ್ಪೀಕರ್ : ಇವತ್ತೂ ಏನಾದ್ರೂ ಹೆಗ್ಗಣ ಬಂದ್ರೆ ನಾನೇ ಬಿಟ್ಟದ್ದು ಅಂತ ಮಾತ್ರ ಹೇಳಬೇಡಿ

ಇದನ್ನೂ ಓದಿ : ದೇಶಕ್ಕೆ, ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವಿಸುವುದನ್ನು ಬಿಜೆಪಿ ಕಲಿಯಬೇಕಿದೆ: ಕಾಂಗ್ರೆಸ್

(ನಗೆಗಡಲಲ್ಲಿ ತೇಲಿದ ಶಾಸಕರು)

ಇನ್ನು ಉಳಿದಂತೆ ಸ್ಪೀಕರ್ ಅವರು, ಅಜಯ್ ಸಿಂಗ್ ಒಳ್ಳೆಯ ಹಾಡುಗಾರ, ಇವರರಿಂದ ಹಾಡು ಹಾಡಿಸಿ ಎಂದು ಹೇಳಿದರು, ಆಗ ವಿಪಕ್ಷ ನಾಯಕ ಸಿದ್ದರಾಮಯ್ಯ ಕಳೆದ ಬಾರಿ ಅಹೋರಾತ್ರಿ ಧರಣಿ ಕೈಗೊಂಡ ಸಂದರ್ಭದಲ್ಲಿ ಅಶೋಕ್ ಪಟ್ಟನ್ ಇದ್ದರು ಅವರು ಹಾಸ್ಯ ಚಟಾಕಿ ಯನ್ನು ಹಾರಿಸುತ್ತಿದ್ದರು ಈ ಬಾರಿ ಇವರಿಂದ ಹಾಡನ್ನು ಹಡಿಸೋಣ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News