DK Shivakumar vs KS Eshwarappa: ಏಕವಚನದಲ್ಲಿ ಬೈದಾಡಿಕೊಂಡ ಡಿಕೆಶಿ ಮತ್ತು ಈಶ್ವರಪ್ಪ

ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ದಿನಗಳು ಬರುತ್ತವೆ ಅಂತಾ ಈಶ್ವರಪ್ಪ ನೀಡಿದ್ದ ಹೇಳಿಕೆ ಸದನದಲ್ಲಿಂದು ಕೋಲಾಹಲವನ್ನೇ ಸೃಷ್ಟಿಸಿತ್ತು.

Written by - Zee Kannada News Desk | Last Updated : Feb 16, 2022, 06:03 PM IST
  • ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ದಿನಗಳು ಬರುತ್ತವೆಂಬ ಕೆ.ಎಸ್.ಈಶ್ವಪ್ಪ ಹೇಳಿಕೆ ವಿಚಾರ
  • ಪರಸ್ಪರ ಏಕವಚನದಲ್ಲಿಯೇ ಬೈದಾಡಿಕೊಂಡ ಕೆ.ಎಸ್.ಈಶ್ವರಪ್ಪ ಮತ್ತು ಡಿ.ಕೆ.ಶಿವಕುಮಾರ್
  • ‘ನಾನಲ್ಲ ನೀನು ದೇಶದ್ರೋಹಿ’ ಅಂತಾ ಸದನದಲ್ಲಿ ಇಬ್ಬರು ನಾಯಕರ ನಡುವೆ ಮಾತಿನ ಸಮರ
DK Shivakumar vs KS Eshwarappa: ಏಕವಚನದಲ್ಲಿ ಬೈದಾಡಿಕೊಂಡ ಡಿಕೆಶಿ ಮತ್ತು ಈಶ್ವರಪ್ಪ title=
ಏಕವಚನದಲ್ಲಿಯೇ ಬೈದಾಡಿಕೊಂಡ ಈಶ್ವರಪ್ಪ ಮತ್ತು ಡಿಕೆಶಿ

ಬೆಂಗಳೂರು: ವಿಧಾನ ಮಂಡಲ ಅಧಿವೇಶನದ(Assembly Session) 2ನೇ ದಿನವಾದ ಬುಧವಾರ(ಫೆ.16)ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(DK Shivakumar)ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ನಾಯಕರು ಪರಸ್ಪರ ಏಕವಚನದಲ್ಲಿಯೇ ಬೈದಾಡಿಕೊಂಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಸಚಿವ ಈಶ್ವರಪ್ಪ ರಾಷ್ಟ್ರದ್ರೋಹಿ ಎಂದು ಡಿಕೆಶಿ ಕೂಗುತ್ತಿದ್ದಂತೆ, ಈಶ್ವರಪ್ಪನವರು ನಾನಲ್ಲ ರಾಷ್ಟ್ರದ್ರೋಹಿ ನೀನು ಅಂತಾ ಆಕ್ರೋಶ ವ್ಯಕ್ತಪಡಿಸಿದರು.

ಕೆಂಪುಕೋಟೆ ಮೇಲೆ ಕೇಸರಿ ಧ್ವಜ(Comment on Tricolour) ಹಾರಿಸುವ ದಿನಗಳು ಬರುತ್ತವೆ ಅಂತಾ ಕೆಲ ದಿನಗಳ ಹಿಂದಷ್ಟೇ ಈಶ್ವರಪ್ಪ ನೀಡಿದ್ದ ಹೇಳಿಕೆ ಸದನದಲ್ಲಿಂದು ಕೋಲಾಹಲ(Karnataka Assembly Session)ವನ್ನೇ ಸೃಷ್ಟಿಸಿತ್ತು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಈಶ್ವರಪ್ಪ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ಆಗ್ರಹಿಸಿದ್ದರು.

ಇದನ್ನೂ ಓದಿ: Rape Case: ಅಪ್ರಾಪ್ತೆಯ ಅತ್ಯಾಚಾರ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ

ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಕೆಲಕಾಲ ಮಾತಿನ ಗದ್ದಲ-ಗಲಾಟೆ ನಡೆಯಿತು. ಈಶ್ವರಪ್ಪ ಹೇಳಿಕೆ ಬಗ್ಗೆ ಅವರ ಅಭಿಪ್ರಾಯ ಕೇಳುತ್ತೇನೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಹೇಳಿದಾಗ, ದೇಶದ್ರೋಹ ಮಾಡಿದವರ ಬಳಿ ಏನು ಉತ್ತರ ಕೇಳುತ್ತೀರಿ? ಅಂತಾ ಡಿಕೆಶಿ ಪ್ರಶ್ನಿಸಿದರು. ಡಿಕೆಶಿಯವರ ಈ ಮಾತಿಗೆ ಕೋಪಿಸಿಕೊಂಡ ಈಶ್ವರಪ್ಪ ರಾಷ್ಟ್ರದ್ರೋಹಿ ನಾನಲ್ಲ, ನೀನು. ಜೈಲಿಗೆ ಹೋಗಿ ಬಂದವನು ನನಗೇನು ಹೇಳೋದು, ಬೇಲ್‍ ಮೇಲೆ ಹೊರಗಡೆ ಇರುವ ನೀನೇ ರಾಷ್ಟ್ರದ್ರೋಹಿ. ನೀನು ನನಗೆ ಏನೂ ಹೇಳಬೇಡ ಅಂತಾ ಕಿಡಿಕಾರಿದರು. ಸದನದಲ್ಲಿ ಕೆಲಕಾಲ ಏಕವಚನದಲ್ಲಿಯೇ ಇಬ್ಬರೂ ನಾಯಕರು  ಕೈ, ಕೈ ತೋರಿಸಿಕೊಂಡು ಕೂಗಾಡಿದರು.  

ಡಿಕೆಶಿ ಮತ್ತು ಈಶ್ವರಪ್ಪ(KS Eshwarappa) ಜೋರಾಗಿ ಕೂಗಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಸ್ಪೀಕರ್ದ ಕಾಗೇರಿ, ‘ನೀವೆಲ್ಲ ಹಿರಿಯ ಸದಸ್ಯರು, ಏಕೆ ಹೀಗೆ ಆಡ್ತೀರಿ?. ನನಗೆ ಮನವರಿಕೆ ಆಗಬೇಕಲ್ಲವಾ? ನಿಮ್ಮನ್ನು ನೋಡಿದರೆ ಏನ್ ಮನವರಿಕೆ ಆಗುತ್ತೆ? ಶಿವಕುಮಾರ್ ಅವರೇ ನೀವು ಹೇಗೆ ನಡೆದುಕೊಳ್ತಿದ್ದೀರಿ? ನೀವು ಒಂದು ಪಕ್ಷದ ಅಧ್ಯಕ್ಷರಲ್ಲವೇ? ಅಂತಾ ಗರಂ ಆಗಿ ಪ್ರಶ್ನಿಸಿದರು.

ಇದನ್ನೂ ಓದಿHijab Controversy: ಅಲ್ಪಸಂಖ್ಯಾತ ಸಮುದಾಯದ ಪರ ಕೈ ಬ್ಯಾಟಿಂಗ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News